ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿವಾದ: ಕುಂದಾಪುರದ ಲೇಖಕನ ಕೃತಿಗೆ ದೊರೆತ ಪ್ರಶಸ್ತಿಯ ಹಿಂದೆ ವಂಚನೆ, ಲಾಬಿ ಶಂಕೆ

Date:

ಕುಂದಾಪುರ ಮೂಲದ ಲೇಖಕ ಪ್ರದೀಪ್ ಕೆಂಚನೂರು ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ – ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಗೆ ಕನ್ನಡದ ಸಿನಿಮಾ ಸಾಹಿತ್ಯ ವಿಭಾಗದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಆದರೆ, ಪ್ರದೀಪ್ ಕೆಂಚನೂರು ಅವರಿಗೆ ಈ ಪ್ರಶಸ್ತಿ ಒಲಿದಿರುವುದು ಸಾಹಿತ್ಯ ಮತ್ತು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕೃತಿಯ ಅಸ್ತಿತ್ವ ಮತ್ತು ಮುದ್ರಣದ ಕುರಿತು ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದು, ಇದರಲ್ಲಿ ವಂಚನೆ ಮತ್ತು ಲಾಬಿ ನಡೆದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

- Advertisement -

ಕರ್ನಾಟಕದ ಯಾವ ಪುಸ್ತಕದ ಮಳಿಗೆಯಲ್ಲಾಗಲಿ ಅಥವಾ ಅಂತರ್ಜಾಲದಲ್ಲಾಗಲಿ ಕನಿಷ್ಠ ಕುರುಹೂ ಸಿಗದ, ಲೇಖಕ ಮತ್ತು ಪ್ರಕಾಶಕರ ಬಳಿ ಮಾತ್ರ ಲಭ್ಯವಿರುವ ಈ ಕೃತಿಗೆ ದೇಶದ ಪರಮೋಚ್ಚ ರಾಷ್ಟ್ರೀಯ ಪ್ರಶಸ್ತಿ ಒಲಿದಿರುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ದೇಶದ ಅತ್ಯುನ್ನತ ಗೌರವ ಸಿಕ್ಕಾಗ ಲೇಖಕರು ಸಂಭ್ರಮಿಸುವುದು ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದು ವಾಡಿಕೆಯಾಗಿದ್ದರೂ, ಈ ಕೃತಿಯ ಲೇಖಕರು ಎಲ್ಲಿಯೂ ಬಾಯಿಬಿಡದೆ, ಮಾಧ್ಯಮಗಳ ಸಂದರ್ಶನಕ್ಕೂ ಸಿಗದೆ ಮೌನಕ್ಕೆ ಶರಣಾಗಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ...

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ...

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ಅಂದಹಾಗೆ, ಬಿಜೆಪಿ-ಆರ್‌ಎಸ್‌ಎಸ್‌ ಕಟ್ಟಾ ಬೆಂಬಲಿಗನಾಗಿರುವ ಪ್ರದೀಪ್ ಕೆಂಚನೂರು ಅವರು ತಮ್ಮ ಹಳೆಯ ಪುಸ್ತಕದ ಕರಡು, ಕವರ್ ಹಾಗೂ ಟೈಟಲ್‌ಅನ್ನು ಸ್ವಲ್ಪ ಬದಲಾಯಿಸಿ ಹೊಸ ರೂಪದಲ್ಲಿ ಜ್ಯೂರಿ ಸಮಿತಿಗೆ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ, ಆರಂಭದಲ್ಲಿ ಪ್ರದೀಪ್ ಅವರು ಈ ಪುಸ್ತಕವನ್ನು ರಚಿಸಿರಲಿಲ್ಲ. ಬದಲಾಗಿ, ಕೇವಲ ತಮ್ಮ ಶೈಕ್ಷಣಿಕ ಪದವಿಗಾಗಿ ಪಿಎಚ್‌.ಡಿ ಸಂಶೋಧನಾ ಪ್ರಬಂಧವನ್ನು ರಚಿಸಿದ್ದರು. ಬಳಿಕ, ಸುಮಾರು ಮೂರು ಬಾರಿ ಇದೇ ಪ್ರಬಂಧವನ್ನು ಟೈಟಲ್‌ಗಳು ಮತ್ತು ಕವರ್‌ ಪೇಜ್‌ ಚಿತ್ರವನ್ನು ಬದಲಿಸಿ, ಹೊಸ ಪುಸ್ತಕಗಳಾಗಿ ಪ್ರಕಟಿಸಿದ್ದರು. ಈಗ ಪ್ರಶಸ್ತಿ ಬಂದಿರುವುದೂ ಕೂಡ ಹಳೆಯ ಪಿಎಚ್‌.ಡಿ ಪ್ರಬಂಧದ ಹೊಸ ರೂಪಕ್ಕೆ ಎಂದು ಹಲವರು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಒದಗಿಸಿದ್ದಾರೆ.

WhatsApp Image 2026 10 14 at 1.59.39 PM

ಇನ್ನೂ ಪ್ರಮುಖ ಅಂಶವೆಂದರೆ, ಈ ಪುಸ್ತಕವು 2024ರಲ್ಲಿ ಮುದ್ರಣಗೊಂಡಿದೆ ಎಂದು ತೋರಿಸಲಾಗಿದೆ. ಆದರೆ, ಈ ಕೃತಿಗೆ ರಾಜಾ ರಾಮಮೋಹನ್ ರಾಯ್ ರಾಷ್ಟ್ರೀಯ ಐಎಸ್‌ಬಿಎನ್ ಸಂಸ್ಥೆಯಿಂದ ಐಎಸ್‌ಬಿಎನ್ ಸಂಖ್ಯೆಯನ್ನು 2025ರ ಆಗಸ್ಟ್ 16 ರಂದು ನೀಡಲಾಗಿದೆ ಎಂಬುದು ಬಹಿರಂಗಗೊಂಡಿದೆ. 2024ರಲ್ಲಿ ಮುದ್ರಣಗೊಂಡ ಪುಸ್ತಕಕ್ಕೆ 2025ರಲ್ಲಿ ಐಎಸ್‌ಬಿಎನ್ ಬಂದಿದ್ದು ಹೇಗೆ ಎಂಬ ಪ್ರಶ್ನೆಗಳು ಸಾಹಿತ್ಯ ವಲಯದಿಂದ ಕೇಳಿಬಂದಿವೆ.

ಐಎಸ್‌ಬಿಎನ್ ಅಪ್ಲಿಕೇಶನ್‌ನಲ್ಲಿ ಪ್ರಕಾಶಕರ ಹೆಸರನ್ನು ಪ್ರದೀಪ್ ಕುಮಾರ್ ಅವರೇ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಆದರೆ, ಪ್ರದೀಪ್ ಕೆಂಚನೂರು ಅವರ ಪತ್ನಿ ಹೋಗಿ ಮಿರರ್ ಪುಸ್ತಕದ ಹೆಸರಲ್ಲಿ ಅವಾರ್ಡ್ ತೆಗೆದುಕೊಂಡಿದ್ದಾರೆ. ಇದೆಲ್ಲವೂ ಮತ್ತಷ್ಟು ಗೊಂದಲ ಮೂಡಿಸಿದೆ.

ಇಷ್ಟೇ ಅಲ್ಲದೆ, ‘ಅನಿಕೇತನ’ ಪ್ರಕಾಶನ ಸಂಸ್ಥೆಯು 2021ರಲ್ಲಿ ಪ್ರಕಟಿಸಿರುವ ಇದೇ ಲೇಖಕರ ‘ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ಕೃತಿಯ ಬೆನ್ನುಡಿಯ ಯಥಾವತ್ ಪಠ್ಯವನ್ನು, ಈಗ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವ ಹೊಸ ಕೃತಿಯ ಬೆನ್ನುಡಿಯಲ್ಲಿ ಒಂದೇ ಒಂದು ಸಾಲು ಬದಲಾಯಿಸದೆ ಮುದ್ರಿಸಲಾಗಿದೆ. ಇವೆಲ್ಲವೂ ಕೃತಿಯ ನೈಜತೆಯ ಅನುಮಾನಗಳನ್ನು ಹುಟ್ಟುಹಾಕಿದೆ.

WhatsApp Image 2026 10 14 at 1.59.38 PM

ಇದಲ್ಲದೆ, “ಹಿಂದಿನ ವರ್ಷಗಳ ಆಯ್ಕೆ ಸಮಿತಿಯಲ್ಲಿದ್ದ ತೀರ್ಪುಗಾರರು ಈ ಕೃತಿಯನ್ನು ತಿರಸ್ಕರಿಸಿದ್ದರು ಎಂಬ ಅಂಶವೂ ಈಗ ಹೊರಬಿದ್ದಿದೆ. ಹಿಂದೊಮ್ಮೆ ಸುಮಾರು 72 ಕೃತಿಗಳ ಪೈಕಿ ಈ ಕೃತಿಯೂ ಬಂದಿತ್ತಾದರೂ, ಭಾಷೆಯ ಗಟ್ಟಿತನ ಮತ್ತು ಚಲನಚಿತ್ರದ ಕುರಿತಾದ ವಾಸ್ತವಿಕ ಪರಿಕಲ್ಪನೆಗಳ ಕೊರತೆಯ ಕಾರಣದಿಂದ ಅದನ್ನು ಪರಿಗಣಿಸಿರಲಿಲ್ಲ. ಆ ಸಂದರ್ಭದಲ್ಲಿ ಮುಂಬೈನ ಪ್ರಭಾವಿ ರಾಜಕೀಯ ವಲಯದಿಂದ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳ ಮಟ್ಟದಿಂದ ಸಮಿತಿಯ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆದಿದ್ದವು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ” ಎಂದು ಅರುಣ್ ಕುಮಾರ್ ಜಿ ಅವರು ಹೇಳಿದ್ದಾರೆ.

ಒಬ್ಬ ವ್ಯಕ್ತಿಯು ಸ್ವ-ಪ್ರಕಟಿತ ಪುಸ್ತಕದ ಕೆಲವೇ ಪ್ರತಿಗಳನ್ನು ಮುದ್ರಿಸಿ, ವಾಣಿಜ್ಯ ವಿತರಣೆ ಇಲ್ಲದೆ ISBN ಪಡೆದು, ಅದನ್ನು ರಾಷ್ಟ್ರೀಯ ಪ್ರಶಸ್ತಿಗಾಗಿ ಸಚಿವಾಲಯಕ್ಕೆ ಸಲ್ಲಿಸಿ ಸಾರ್ವಜನಿಕರಿಗೆ ಲಭ್ಯವಿಲ್ಲದಂತೆ ಮಾಡಿದ್ದರೆ, ಇದು ರಾಜ್ಯದ ಶೈಕ್ಷಣಿಕ ಅಪ್ರಾಮಾಣಿಕತೆ ಮತ್ತು ವಂಚನೆಯ ಗಂಭೀರ ಪ್ರಮಾದವಾಗುತ್ತದೆ. ಈ ವಂಚನೆ ಸಾಬೀತಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಕಠಿಣ ಕಾನೂನು ಹಾಗೂ ಶಿಸ್ತು ಕ್ರಮಗಳನ್ನು ಜರುಗಿಸಲು ಅವಕಾಶವಿದೆ.

“ಸಾರ್ವಜನಿಕವಾಗಿ ಲಭ್ಯವಿಲ್ಲದ ಮತ್ತು ನಾನಾ ಅಕ್ರಮ-ಲಾಬಿಯಿಂದ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಈ ಪುಸ್ತಕಕ್ಕೆ ನೀಡಲಾಗಿರುವ ಪ್ರಶಸ್ತಿಯನ್ನುಕೇಂದ್ರ ಸರ್ಕಾರ ರದ್ದುಗೊಳಿಸಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಬೇಕು. ನಗದು ಬಹುಮಾನ ಹಾಗೂ ಸವಲತ್ತುಗಳನ್ನು ಬಡ್ಡಿ ಸಹಿತ ವಸೂಲಿ ಮಾಡಬೇಕು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318/319 ಹಾಗೂ 336/340 ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಹಾಗೂ ಭವಿಷ್ಯದ ಎಲ್ಲ ಸರ್ಕಾರಿ ಅನುದಾನ ಮತ್ತು ಪ್ರಶಸ್ತಿಗಳಿಂದ ಪ್ರದೀಪ್ ಕೆಂಚನೂರು ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು” ಎಂದು ಸಾಹಿತ್ಯ ವಲಯದ ಹಲವರು ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿದಿನ 1.33 ಲಕ್ಷ ನೋಟಿಸ್‌ಗಳ ವಿಲೇವಾರಿ: ದೆಹಲಿಯಲ್ಲಿ SIR ಪ್ರಕ್ರಿಯೆ ಚುರುಕು

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 12ರವರೆಗಿನ ಸುಮಾರು 12 ದಿನಗಳ ಅವಧಿಯಲ್ಲಿ ದೆಹಲಿಯ...

ಒಡಿಶಾ | ಎರಡು ತಲೆ ಇರುವ ಮಗು ಜನನ!

ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಅತ್ಯಂತ ಅಪರೂಪದ ವೈದ್ಯಕೀಯ ವಿಸ್ಮಯ ನಡೆದಿದೆ. ಮಹಿಳೆಯೊಬ್ಬರು...

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ದರೋಡೆ; ರಮೇಶ್‌ ಯಾದವ್‌ ಕೈಕಾಲು ಕಟ್ಟಿ ₹50 ಲಕ್ಷ ಲೂಟಿ

ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಸಂಭ್ರಮದಲ್ಲಿದ್ದ ರಮೇಶ್...

2029ರ ಲೋಕಸಭಾ ಚುನಾವಣೆ: ಸೋಲಲು ಸಿದ್ಧವಿರುವಂತೆ ರಾಹುಲ್‌ಗೆ ಅಮಿತ್ ಶಾ ಸವಾಲು

ವಿಪಕ್ಷಗಳ ಇಂಡಿಯಾ ಒಕ್ಕೂಟ ನಡೆಸಿದ ಬೃಹತ್ ರ‍್ಯಾಲಿಯ ಮಾರನೇ ದಿನವೇ, ಕೇಂದ್ರ...