ಕ್ಲಾಸ್‌ ಬಂಕ್‌ ಮಾಡಿ ಸಿನಿಮಾ ನೋಡಿ ಎಂದ ತೆಲಂಗಾಣ ಶಿಕ್ಷಣ ಸಚಿವ

Date:

ಮೇ 12ರಂದು ತೆರೆಕಾಣಲಿರುವ ʼಕಸ್ಟಡಿʼ ಸಿನಿಮಾ

- Advertisement -

ಸಿನಿಮಾಗಾಗಿ ಪರೀಕ್ಷೆ ಮುಂದೂಡಲು ಸಜ್ಜಾದ ಸಚಿವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ತೆಲುಗಿನ ಸ್ಟಾರ್‌ ನಟ ನಾಗ ಚೈತನ್ಯ ಮುಖ್ಯಭೂಮಿಕೆಯ ʼಕಸ್ಟಡಿʼ ಸಿನಿಮಾ ಮೇ 12ರಂದು ತೆರೆಗೆ ಬರಲಿದೆ. ಕ್ಲಾಸ್‌ ಬಂಕ್‌ ಮಾಡಿಯಾದರೂ ಈ ಸ್ಟಾರ್‌ ಸಿನಿಮಾವನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವಂತೆ ತೆಲಂಗಾಣದ ಶಿಕ್ಷಣ ಸಚಿವ ಮಲ್ಲ ರೆಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಇತ್ತೀಚೆಗಷ್ಟೇ ʼಕಸ್ಟಡಿʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹೈದರಾಬಾದ್‌ನಲ್ಲಿರುವ ಸಚಿವ ಮಲ್ಲರೆಡ್ಡಿ ಒಡೆತನದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು.

ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಜೊತೆಗೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಲ್ಲ ರೆಡ್ಡಿ, ನಾಗ ಚೈತನ್ಯ ಮತ್ತವರ ಕುಟುಂಬದ ಕಲಾ ಸೇವೆಯನ್ನು ಕೊಂಡಾಡುತ್ತಾ, “ಮುಂಬರುವ ಮೇ 12ರಂದು ʼಕಸ್ಟಡಿʼ ಸಿನಿಮಾ ಬಿಡುಗಡೆಯಾಗುತ್ತಿದೆ. ಕ್ಲಾಸ್‌ ಬಂಕ್‌ ಮಾಡಿಯಾದರೂ ಆ ಸಿನಿಮಾವನ್ನು ನೋಡಿ, ಒಂದು ವೇಳೆ ಅದೇ ದಿನ ನಿಮಗೆ ಪರೀಕ್ಷೆಗಳಿದ್ದರೆ, ಅವುಗಳನ್ನು ಕೂಡ ನಾನು ಮುಂದೂಡಿಸುತ್ತೇನೆ” ಎಂದಿದ್ದಾರೆ. ಸಚಿವರ ಈ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಲ್ಲ ರೆಡ್ಡಿ ಅವರ ಒಡೆತನದಲ್ಲಿ 13 ಇಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 65 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ತೆಲಂಗಾಣದ ಶಿಕ್ಷಣ ಸಚಿವರೂ ಆಗಿರುವ ಮಲ್ಲ ರೆಡ್ಡಿ, “ಕ್ಲಾಸ್‌ ಬಂಕ್‌ ಮಾಡಿ ಸಿನಿಮಾ ನೋಡಿ, ಬೇಕಿದ್ದರೆ ಪರೀಕ್ಷೆಗಳನ್ನು ಕೂಡ ಮುಂದೂಡಿಸುತ್ತೇನೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಮುಲ್‌ ವಿವಾದ | ಕನ್ನಡಿಗರ ಹೋರಾಟ ಅಸ್ಮಿತೆಗಾಗಿ ; ಕವಿರಾಜ್‌

ವೆಂಕಟ್‌ ಪ್ರಭು ನಿರ್ದೇಶನದಲ್ಲಿ ನಾಗ ಚೈತನ್ಯ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿರುವ ʼಕಸ್ಟಡಿʼ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾಮಣಿ ಮತ್ತು ಅರವಿಂದ್‌ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಳಿಯರಾಜ ಮತ್ತು ಯುವನ್‌ ಶಂಕರ್‌ ರಾಜ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ಬದಲಾವಣೆ ಗಾಳಿ: ಉಪಾಧ್ಯಕ್ಷರಾಗಿ ನಟ ಸಿಜೋಯ್ ವರ್ಗೀಸ್, ನಟಿ ಆಶಾ ಅರವಿಂದ್ ನೇಮಕ

ಸಾಲು ಸಾಲು ವಿವಾದಗಳು ಮತ್ತು ರಾಜೀನಾಮೆಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಮಲಯಾಳಂ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...