ದುಬೈ | ₹122 ಕೋಟಿಗೆ ಹರಾಜಾದ ‘ದುಬೈ P7’ ನಂಬರ್‌ ಪ್ಲೇಟ್‌

Date:

ಗಗನಚುಂಬಿ ಕಟ್ಟಡಗಳು, ವಿಲಾಸಿ ಜೀವನ, ಐಷಾರಾಮಿ ಕಾರುಗಳಿಗೆ ಹೆಸರುವಾಸಿಯಾಗಿರುವ ದುಬೈ ನಗರ ಇದೀಗ ಮತ್ತೊಂದು ವಿಶ್ವದಾಖಲೆಯ ಮೂಲಕ ಸುದ್ದಿಯಾಗಿದೆ.

ದುಬೈನ ಜುಮೇರಾದಲ್ಲಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆದ ‘ಮೋಸ್ಟ್ ನೋಬಲ್ ನಂಬರ್ಸ್’ ಚಾರಿಟಿ ಹರಾಜಿನಲ್ಲಿ ʻದುಬೈ P 7′ ನಂಬರ್‌ ಪ್ಲೇಟ್‌ ಬರೋಬ್ಬರಿ 55 ಮಿಲಿಯನ್ ದಿರ್ಹಮ್‌ಗಳಿಗೆ (ಅಂದಾಜು ₹1,22,61,44,700) ಮಾರಾಟವಾಗಿದೆ. ಆದರೆ ಈ ಗಿನ್ನಿಸ್ ದಾಖಲೆ ಮೊತ್ತಕ್ಕೆ ಬಿಡ್​ ಮಾಡಿದ ವ್ಯಕ್ತಿ ತಮ್ಮ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

15 ಮಿಲಿಯನ್ ದಿರ್ಹಮ್‌ ಮೊತ್ತದಿಂದ ಬಿಡ್ಡಿಂಗ್ ಪ್ರಾರಂಭವಾಗಿತ್ತು. ಆದರೆ ಕೆಲ ಸೆಕೆಂಡುಗಳಲ್ಲೇ 35 ಮಿಲಿಯನ್ ದಿರ್ಹಮ್ ತಲುಪಿದ ಕಾರಣ ಕೆಲಕಾಲ ಬಿಡ್ಡಿಂಗ್  ನಿಲ್ಲಿಸಲಾಗಿತ್ತು. ಈ ವೇಳೆ ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂಸ್ಥಾಪಕ ಮತ್ತು ಮಾಲೀಕರಾದ ಫ್ರೆಂಚ್ ಮೂಲದ ಉದ್ಯಮಿ ಪಾವೆಲ್ ವ್ಯಾಲೆರಿವಿಚ್ ಡುರೊವ್ 35 ಮಿಲಿಯನ್ ದಿರ್ಹಮ್‌ಗೆ ಬಿಡ್ ಮಾಡಿದ್ದರು. ಬಳಿಕ ಬಿಡ್ಡಿಂಗ್‌ ಪ್ರಕ್ರಿಯೆ ಪುನಾರಂಭವಾದಾಗ ʻದುಬೈ P 7′ ಹರಾಜು ಬೆಲೆ 55 ಮಿಲಿಯನ್ ದಿರ್ಹಮ್‌ ತಲುಪಿತು. 

ಈ ಸುದ್ದಿ ಓದಿದ್ದೀರಾ?: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಯುಎಇ ಸರ್ಕಾರದ ʻ1 ಬಿಲಿಯನ್‌ ಮೀಲ್ಸ್‌ʼ (ನೂರು ಕೋಟಿ ಜನರಿಗೆ ಆಹಾರ) ಪದ್ಧತಿಯ ಭಾಗವಾಗಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿತ್ತು.

ʻದುಬೈ P 7’ ಜೊತೆಗೆ H 31, W 78, N41, AA 19, AA 22,  X 36,  Z 37, AA 80 ಸೇರಿದಂತೆ ಹಲವು ವಿಐಪಿ ನಂಬರ್ ಪ್ಲೇಟ್‌ಗಳು ಮತ್ತು  ದೂರಸಂಪರ್ಕ ಕಂಪನಿಗಳಾದ ಎತ್ತಿಸಲಾತ್‌ನ 11 ಮತ್ತು DUನ 10 ಫ್ಯಾನ್ಸಿ ಫೋನ್ ಸಂಖ್ಯೆಗಳನ್ನು ಸಹ ಹರಾಜು ಮಾಡಲಾಯಿತು. ಹರಾಜಿನಿಂದ ಸುಮಾರು 100 ಮಿಲಿಯನ್ ದಿರ್ಹಮ್ ($27 ಮಿಲಿಯನ್) ಸಂಗ್ರಹಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಎಲ್ಲಾ ಮೊತ್ತವನ್ನೂ ಜಾಗತಿಕ ಹಸಿವು ನೀಗಿಸುವ ಉದ್ದೇಶದಿಂದ ಆರಂಭಿಸಲಾಗಿರುವ ‘ಒನ್‌ ಬಿಲಿಯನ್ ಮೀಲ್ಸ್’ ಅಭಿಯಾನಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2008ರಲ್ಲಿ ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ʻನಂಬರ್-1ʼ ಪ್ಲೇಟ್‌ 52.22 ಮಿಲಿಯನ್ ದಿರ್ಹಮ್‌ಗೆ ಮಾರಾಟವಾಗಿತ್ತು, ಇದು ಈವರೆಗಿನ ಅತಿಹೆಚ್ಚು ಮೊತ್ತ ಬಿಡ್‌ ಮಾಡಲಾದ ನಂಬರ್‌ ಪ್ಲೇಟ್‌ ಎಂಬ ದಾಖಲೆ ಹೊಂದಿತ್ತು.

DUBAI
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕದನ ವಿರಾಮಕ್ಕಾಗಿ ಇಸ್ರೇಲ್ ಜೊತೆ ಮಾತುಕತೆಗೆ ಹತ್ತಿರವಾಗುತ್ತಿದ್ದೇವೆ: ಹಮಾಸ್

ಇಸ್ರೇಲ್‌ ಹಾಗೂ ಹಮಾಸ್ ನಡುವೆ ಕಳೆದ ಅಕ್ಟೋಬರ್ 7ರಿಂದ ನಡೆಯುತ್ತಿರುವ ಸಂಘರ್ಷವು...

ವಿಶ್ವ ಶೌಚಾಲಯ ದಿನದಂದು ಒಳಚರಂಡಿಗೆ ಇಳಿದ ಬಿಲ್ ಗೇಟ್ಸ್

ನವೆಂಬರ್‌ 19ರ ವಿಶ್ವ ಶೌಚಾಲಯ ದಿನದ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌...

ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿ ಗುಜರಾತಿನ ಅಹ್ಮದಾಬಾದ್‌ನ...

ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್

ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ...