ತಥಾಕಥಿತ ಪುರುಷ ವ್ಯವಸ್ಥೆಗೆ ಕನ್ನಡಿ ಹಿಡಿದ ನಟಿ ಕಾವ್ಯಶಾ; ಆ ಒಂದು ವಿಡಿಯೋ ಕಲಕೀತೇ ಸಮಾಜದ ಹೃದಯ?

Date:

ಇತ್ತೀಚೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವವರು ಕನ್ನಡದ ನಟಿ ಕಾವ್ಯಶಾ. ಅವರೊಂದು ಪ್ರಾಯೋಗಿಕ ರೀಲ್ಅನ್ನು ಚಿತ್ರೀಕರಿಸಿ, ಹಂಚಿಕೊಂಡಿದ್ದಾರೆ. ಆ ರೀಲ್ -ಕೇವಲ ಒಂದು ವಿಡಿಯೋ ಅಲ್ಲ; ಅದು ನಮ್ಮ ಸಮಾಜದ ಕಠಿಣ, ಕಹಿ ವಾಸ್ತವಕ್ಕೆ ಹಿಡಿದ ಕನ್ನಡಿ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯೊಬ್ಬರ ಪಾತ್ರವನ್ನು ನಿರ್ವಹಿಸುವ ಮೂಲಕ, ವೇಶ್ಯಾವೃತ್ತಿ ಕೂಪದಲ್ಲಿ ಸಿಲುಕಿರುವವರ ಬದುಕಿನ ಕರಾಳ ಸತ್ಯವನ್ನು ಅತ್ಯಂತ ಧೈರ್ಯವಾಗಿ ಬಿಚ್ಚಿಟ್ಟಿದ್ದಾರೆ.

- Advertisement -

ಕಾವ್ಯಶಾ ಅವರು ವೇಶ್ಯಾವೃತ್ತಿಯಲ್ಲಿರುವ ಮಹಿಳೆಯೊಬ್ಬರಂತೆ ನಟಿಸಿದ್ದಾರೆ. ಗಿರಾಕಿಯೊಬ್ಬನ ಒತ್ತಾಯದಂತೆ ಆತನೊಂದಿಗೆ ಕಾರಿನೊಳಗೆ ಹೋಗುತ್ತಾರೆ. ನಂತರ, ಆತ ‘ಇಂತಹ ಬದುಕು ಬಾಳುವುದಕ್ಕಿಂತ, ಸಾಯುವುದೇ ಮೇಲು’ ಎನ್ನುತ್ತಾನೆ. ಆಗ, ಆಕೆಯಲ್ಲಿ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳು ಆತನ ಮತ್ತು ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕೆದಕುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಅವರ ಈ ಕಲಾತ್ಮಕ ಮತ್ತು ಮಾನವೀಯ ಪ್ರಯೋಗಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ರೀಲ್‌ನ ವೀಕ್ಷಣೆಗಳು ಮತ್ತು ಲೈಕ್‌ಗಳ ಮಹಾಪೂರವೂ ಹರಿದುಬಂದಿದೆ. ಇದೆಲ್ಲದರ ನಡುವೆ, ಎಲ್ಲರೂ ಕೇಳಿಕೊಳ್ಳಬೇಕಾದ, ಸಮಾಜ ಇಷ್ಟು ದಿನ ಮುಚ್ಚಿಟ್ಟಿದ್ದ ಒಂದು ಮುಜುಗರದ ಪ್ರಶ್ನೆಯನ್ನು ಆ ವಿಡಿಯೋ ನಮ್ಮ ಮುಂದಿಟ್ಟಿದೆ: “ಈ ಮಹಿಳೆಯರನ್ನು ಇಂತಹ ಕತ್ತಲೆ ಮತ್ತು ಶೋಷಣೆಯ ಬದುಕಿಗೆ ತಳ್ಳಲು ನಿಜವಾಗಿಯೂ ಯಾರು ಜವಾಬ್ದಾರರು?” – ಈ ಪ್ರಶ್ನೆಗೆ ಉತ್ತರ ದೊರಕೀತೇ?

ವೇಶ್ಯಾವೃತ್ತಿ ಅನುಸರಿಸುತ್ತಿರುವ ಮಹಿಳೆಯರನ್ನು ಕಂಡಾಗ, ‘ಅವಳೇ ಈ ಹಾದಿಯನ್ನು ಆರಿಸಿಕೊಂಡಳು’ ಅಥವಾ ‘ಅವಳು ಗೌರವಸ್ತ ಕುಟುಂಬದವಳಲ್ಲ’ ಎಂದು ಅತ್ಯಂತ ಸುಲಭವಾಗಿ ಆಕೆಯನ್ನು ದೂಷಿಸಲು ಜನ ಧಾವಿಸುತ್ತಾರೆ. ಆದರೆ, ಈ ಜಾಗಗಳಿಗೆ ನಿರಂತರವಾಗಿ ಭೇಟಿ ನೀಡಿ, ಬೇಡಿಕೆಯನ್ನು ಸೃಷ್ಟಿಸುವ ಪುರುಷರ ಕಥೆಯೇನು? ಅವರು ದೋಷಮುಕ್ತರೇ?

“ಸಂಸ್ಕಾರವಂತ, ಗೌರವಾನ್ವಿತ ಕುಟುಂಬದ ಯಾವುದೇ ಮಹಿಳೆ ಎಂದಿಗೂ ಇದನ್ನು ಮಾಡುವುದಿಲ್ಲ” ಎಂದು ಸಮಾಜವು ಸುಲಭವಾಗಿ ತೀರ್ಪು ನೀಡುತ್ತದೆ. ಹಾಗಾದರೆ, ಅದೇ ತಥಾಕಥಿತ (so-called) ‘ಒಳ್ಳೆಯ’ ಕುಟುಂಬಗಳಿಂದ ಬಂದು ಈ ಮಹಿಳೆಯರನ್ನು ಶೋಷಿಸುವ, ಮಾನವ ಕಳ್ಳಸಾಗಣೆ ಮಾಡುವ ಅಥವಾ ಅವರ ದೇಹಕ್ಕಾಗಿ ಹಣ ನೀಡುವ ಪುರುಷರು ನಿಜಕ್ಕೂ ಸಂಸ್ಕೃತಿ ಮತ್ತು ಗೌರವದ ನಿಜವಾದ ಸಂಕೇತಗಳೇ?

ಈ ಕೊಳಕು ವ್ಯವಸ್ಥೆಯನ್ನು ಜೀವಂತವಾಗಿಟ್ಟಿರುವ ಪುರುಷರು, ಸಂತ್ರಸ್ತ ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾದ ಸಮಾಜ ಹಾಗೂ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಾಗ, ಎಲ್ಲ ನಿಂದನೆ ಮತ್ತು ಅಪರಾಧದ ಕಲೆ ಕೇವಲ ಮಹಿಳೆಯ ಮೇಲೆಯೇ ಏಕೆ ಬೀಳುತ್ತದೆ ಎನ್ನುವುದು ಇಂದಿನ ಅತಿ ದೊಡ್ಡ ವಿಪರ್ಯಾಸ.

ನಾವು ಅರ್ಥಮಾಡಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ, ಈ ಮಹಿಳೆಯರಿಗೂ ಎಲ್ಲರಂತೆಯೇ ಭಾವನೆಗಳು ಮತ್ತು ಕನಸುಗಳಿವೆ. ಅವರಲ್ಲಿ ಹೆಚ್ಚಿನವರು ಈ ನರಕಸದೃಶ ಜೀವನವನ್ನು ಸ್ವಇಚ್ಛೆಯಿಂದ ಎಂದಿಗೂ ಆರಿಸಿಕೊಳ್ಳುವುದಿಲ್ಲ. ಬಡತನದ ಕ್ರೂರತೆ, ನಂಬಿದವರಿಂದಾದ ದ್ರೋಹ, ನಿರಂತರ ಶೋಷಣೆ, ಮುರಿದುಬಿದ್ದ ಕುಟುಂಬಗಳು ಹಾಗೂ ಒಟ್ಟಾರೆ ವಿಫಲವಾದ ಸಾಮಾಜಿಕ ವ್ಯವಸ್ಥೆಯು ಅವರನ್ನು ಅಸಹಾಯಕರನ್ನಾಗಿ ಮಾಡಿ ಈ ಕತ್ತಲಿಗೆ ತಳ್ಳಿದೆ. ತಳ್ಳುತ್ತಿದೆ. ತಳ್ಳುತ್ತದೆ.

ಇದಕ್ಕೆ ಕೇವಲ ಒಬ್ಬ ವ್ಯಕ್ತಿ ಕಾರಣವಲ್ಲ. ಇಡೀ ಸಮಾಜ, ಜನಪ್ರತಿನಿಧಿಗಳು, ಪೊಲೀಸ್ ವ್ಯವಸ್ಥೆ, ಅಧಿಕಾರಿಗಳು ಹಾಗೂ ಮುಖ್ಯವಾಗಿ ಈ ದಂಧೆಯನ್ನು ಆರ್ಥಿಕವಾಗಿ ಜೀವಂತವಾಗಿಟ್ಟಿರುವ ತಥಾಕಥಿತ ‘ಗೌರವಾನ್ವಿತ’ ಪುರುಷರು – ಇವರೆಲ್ಲರೂ ಈ ಪಾಪದಲ್ಲಿ ಸಮಾನ ಜವಾಬ್ದಾರರು.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ನಟಿ ಕಾವ್ಯಶಾ ಅವರು ತಮ್ಮ ಅಭಿನಯ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಸ್ಯೆಯ ತೀವ್ರತೆಯನ್ನು ನಮಗೆ ತಲುಪಿಸಿದ್ದಾರೆ. ಆದರೆ, ನಾವು ಕೇವಲ ಈ ರೀಲ್‌ಗಳನ್ನು ನೋಡಿ, ಮೆಚ್ಚುಗೆ ಸೂಚಿಸಿ ಮುಂದೆ ಸಾಗಿದರೆ ಸಾಲದು. ಈಗ ನಾವು ಜಾಗೃತರಾಗಿ ನಿಜವಾದ ಪರಿಹಾರಗಳನ್ನು ಹುಡುಕುವ ಮತ್ತು ಚಾಲ್ತಿಗೆ ತರುವ ಸಮಯವಿದು.

ಸರ್ಕಾರಗಳು ಈ ನರಕದಿಂದ ಹೊರಬರಲು ಬಯಸುವ ಮಹಿಳೆಯರಿಗೆ ಸೂಕ್ತ ಆಶ್ರಯ, ಶಿಕ್ಷಣ ಹಾಗೂ ಉದ್ಯೋಗದ ಪುನರ್ವಸತಿ ಕಾರ್ಯಕ್ರಮಗಳು ರೂಪಿತವಾಗಬೇಕು. ಮಾನವ ಕಳ್ಳಸಾಗಣೆದಾರರು ಮತ್ತು ಈ ದಂಧೆಯ ನಿಜವಾದ ಸೂತ್ರಧಾರರಾದ ಗ್ರಾಹಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿ, ಗೌರವಯುತವಾಗಿ ತಮ್ಮ ಜೀವನವನ್ನು ಮರುಕಟ್ಟಿಕೊಳ್ಳಲು ವ್ಯವಸ್ಥೆಯಿಂದ ಪ್ರಾಮಾಣಿಕ ಬೆಂಬಲ ಸಿಗಬೇಕಿದೆ. ಬಲಿಪಶುಗಳನ್ನೇ ದೂಷಿಸುವ ಕೀಳು ಮನಸ್ಥಿತಿಯಿಂದ ಸಮಾಜ ಹೊರಬರಬೇಕು.

ಪ್ರತಿಯೊಬ್ಬ ಮಹಿಳೆಯೂ ಉತ್ತಮ, ಗೌರವಾನ್ವಿತ ಜೀವನಕ್ಕೆ ಅರ್ಹಳು. ಈ ನಿಟ್ಟಿನಲ್ಲಿ ಧ್ವನಿ ಎತ್ತಿದ ಕಾವ್ಯಶಾ ಅವರ ಪ್ರಯತ್ನ ಶ್ಲಾಘನೀಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ವಿಡಿಯೋ: ಇಬ್ಬರು ಪೊಲೀಸ್ ವಶಕ್ಕೆ

ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ...

ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಎಸ್‌ಎಸ್;‌ ʼಹಣತೆಯಿಂದ ಹಣತೆಗೆʼ ಸಂವಾದದಲ್ಲಿ ಮೇಷ್ಟ್ರು ನೆನಪು

ಒಂದು ಹಣತೆಯಿಂದ ಮತ್ತೊಂದು ಹಣತೆಯನ್ನು ಹಚ್ಚಿದಾಗ ಮೊದಲ ಹಣತೆಯ ಬೆಳಕು ಕಡಿಮೆಯಾಗುವುದಿಲ್ಲ,...

ಹಿಂಗಾರು ಆರ್ಭಟ; ಮುಂದಿನ 4 ದಿನ ರಾಜ್ಯದ 11 ಜಿಲ್ಲೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ, ಹಿಂಗಾರು ಮಾರುತಗಳ ಚಟುವಟಿಕೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ...