ಕನ್ನಡದಲ್ಲೇ KATಗೆ ಅರ್ಜಿ ಸಲ್ಲಿಸಬಹುದು; ಇಂಗ್ಲಿಷ್ ಕಡ್ಡಾಯವಲ್ಲ ಎಂದ ಹೈಕೋರ್ಟ್

Date:

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (KAT) ಕನ್ನಡದಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಮಹತ್ವದ ಸ್ಪಷ್ಟನೆ ನೀಡಿದೆ. ಕನ್ನಡದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಂಗ್ಲಿಷ್‌ಗೆ ಬದಲಾಯಿಸುವಂತೆ ಸೂಚಿಸಿ ಹಿಂದಿರುಗಿಸಿದ್ದ ಕೆಎಟಿಯ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಅರ್ಜಿದಾರರು ಕನ್ನಡ ಬಳಸುವುದಕ್ಕೆ ನಿರ್ಬಂಧವಿಲ್ಲ ಎಂದು ಹೇಳಿದೆ.

- Advertisement -

ಕಲಬುರಗಿಯ ಛಾಯಾಗ್ರಾಹಕ ಸೂರ್ಯಕಾಂತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ ಮತ್ತು ಸುಬ್ರಮಣ್ಯ ರಂಗರಾವ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

ಅರ್ಜಿದಾರರು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಎಟಿಗೆ ಕನ್ನಡದಲ್ಲಿ ಮೂಲ ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು, 1986ರ ನಿಯಮ 3ರ ಆಧಾರದಲ್ಲಿ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸುವಂತೆ ಸೂಚಿಸಿದ್ದ ನ್ಯಾಯಮಂಡಳಿ, ಅರ್ಜಿಯನ್ನು ಹಿಂದಿರುಗಿಸಿತ್ತು. 2025ರ ಜೂನ್ 5ರಂದು ಹೊರಡಿಸಿದ್ದ ಈ ಆದೇಶವನ್ನು ಪ್ರಶ್ನಿಸಿ ಸೂರ್ಯಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ನಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶಂಕರ್ ಕಟ್ಟೀಮನಿ, 1986ರ ನಿಯಮಗಳ ಪ್ರಕಾರ ಕನ್ನಡದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು. ಅಲ್ಲದೆ, ವಿಚಾರಣೆ ವೇಳೆ ಕನ್ನಡ ಬಳಕೆಗೆ ಅನುಮತಿ ನೀಡುವ ವಿವೇಚನಾಧಿಕಾರವೂ ನ್ಯಾಯಮಂಡಳಿಗಿದೆ. ಆದರೆ, ಅಂತಿಮ ಆದೇಶವನ್ನು ಇಂಗ್ಲಿಷ್‌ನಲ್ಲಿ ಹೊರಡಿಸಬೇಕೆಂಬ ನಿಯಮವಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ವಕೀಲರು, ಕೆಎಟಿಯಲ್ಲಿ ಅರ್ಜಿಗಳನ್ನು ಇಂಗ್ಲಿಷ್‌ನಲ್ಲಿಯೇ ಸಲ್ಲಿಸಬೇಕು ಎಂದು ವಾದಿಸಿದರು.

ವಾದಗಳನ್ನು ಆಲಿಸಿದ ವಿಭಾಗೀಯ ಪೀಠವು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನಿಯಮಾವಳಿ, 1990ರ ನಿಯಮ 9(iii) ಅನ್ನು ಪರಿಶೀಲಿಸಿತು. ಈ ನಿಯಮವು ನ್ಯಾಯಮಂಡಳಿಗೆ ಸಲ್ಲಿಸುವ ಕೋರಿಕೆಗಳು, ಪ್ರಮಾಣಪತ್ರಗಳು, ಮೆಮೊರಾಂಡಂಗಳು, ದಾಖಲೆಗಳ ಪಟ್ಟಿಗಳು ಹಾಗೂ ಇತರ ದಾಖಲೆಗಳನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ ಎಂಬುದನ್ನು ಪೀಠ ಗಮನಿಸಿತು.

ಹೀಗಾಗಿ, ಅರ್ಜಿದಾರರು ಕನ್ನಡದಲ್ಲಿ ಅರ್ಜಿ ಸಲ್ಲಿಸಿರುವುದು ನಿಯಮಗಳಿಗೆ ಅನುಗುಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. 1986ರ ನಿಯಮಗಳನ್ನು ಮಾತ್ರ ಆಧಾರವಾಗಿಟ್ಟುಕೊಳ್ಳದೆ, 1990ರ ನಿಯಮಾವಳಿಯನ್ನೂ ಪರಿಗಣಿಸಬೇಕಿತ್ತು. ಆದರೆ, ಈ ಅಂಶವನ್ನು ಕೆಎಟಿ ಸರಿಯಾಗಿ ಪರಿಶೀಲಿಸದೆ ಆದೇಶ ಹೊರಡಿಸಿದೆ ಎಂದು ಹೈಕೋರ್ಟ್ ಹೇಳಿದೆ.

ಸೂರ್ಯಕಾಂತ್ ಅವರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ, ಮೂಲ ಅರ್ಜಿಯನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ಕೆಎಟಿಯಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಗಂಭೀರ ಪ್ರಕರಣಗಳಲ್ಲಿ ಆತುರದ ಜಾಮೀನು ಸಲ್ಲದು: ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ತರಾಟೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರ ಸೇವಾ ವಿಚಾರಗಳಿಗೆ ಸಂಬಂಧಿಸಿದ ವಿವಾದಗಳು, ವರ್ಗಾವಣೆ, ಬಡ್ತಿ, ಶಿಸ್ತು ಕ್ರಮ ಅಥವಾ ಪಿಂಚಣಿ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲು ಇರುವ ವಿಶೇಷ ನ್ಯಾಯಮಂಡಳಿಯೇ ಈ ಕೆಎಟಿ. ಸಾಮಾನ್ಯ ಕೋರ್ಟ್‌ಗಳಿಗೆ ಹೋಗುವ ಬದಲು, ಸರ್ಕಾರಿ ನೌಕರರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಈ ನ್ಯಾಯಮಂಡಳಿಯ ಮೆಟ್ಟಿಲೇರುತ್ತಾರೆ. ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದು, ಕಲಬುರಗಿ ಮತ್ತು ಬೆಳಗಾವಿಯಲ್ಲೂ ಇದರ ಪೀಠಗಳಿವೆ.

ಕರ್ನಾಟಕ ಅಧಿಕೃತ ಭಾಷೆ ಕಾಯ್ದೆ, 1963ರ ಪ್ರಕಾರ ರಾಜ್ಯದ ಎಲ್ಲಾ ಆಡಳಿತಾತ್ಮಕ ಮತ್ತು ನ್ಯಾಯಾಂಗ ಸಂಬಂಧಿ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕಿದೆ. ಈ ತೀರ್ಪು ರಾಜ್ಯ ಸರ್ಕಾರದ ಅಧಿಕೃತ ಭಾಷಾ ನೀತಿಗೆ ಮತ್ತು ಕನ್ನಡ ಬಳಸುವ ನಾಗರಿಕರ ಮೂಲಭೂತ ಹಕ್ಕಿಗೆ ಕಾನೂನಾತ್ಮಕ ಬಲ ತಂದಿತ್ತಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು (ವಿಶೇಷವಾಗಿ ‘ಸಿ’ ಮತ್ತು ‘ಡಿ’ ದರ್ಜೆ ನೌಕರರು) ತಮ್ಮ ಸೇವಾ ಕುಂದುಕೊರತೆಗಳಿಗಾಗಿ ಕೆಎಟಿ (KAT) ಮೆಟ್ಟಿಲೇರಿದಾಗ, ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಅನುಭವಿಸುತ್ತಿದ್ದ ಕಷ್ಟಕ್ಕೆ ಈ ಆದೇಶ ದೊಡ್ಡ ಪರಿಹಾರ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜ್ವಲ್ ಚಾಲಕ, ಡಿಕೆಶಿ ಭೇಟಿಯ ದಾಖಲೆ ಬಿಡುಗಡೆ: ಇದು ಬರೀ ‘ಟ್ರೈಲರ್’, ಸಿನಿಮಾ ಮುಂದಿದೆ ಎಂದ ಎಚ್‌ಡಿಕೆ

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳು ಸಾರ್ವಜನಿಕವಾಗಿ ಹೊರಬರುವ ಮುನ್ನ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ ಸರ್ಕಾರ!

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ...

ಹುಮನಾಬಾದ್‌ | ನ.4ರಂದು ಸಿಂಧನಕೇರಾ ಘನತ್ಯಾಜ್ಯ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

ಹುಮನಾಬಾದ್ ನಗರದಲ್ಲಿ ಸಂಗ್ರಹವಾಗುವ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ...