ಆ.13ರಿಂದ ವಿಧಾನಸಭೆ ಅಧಿವೇಶನ; ಟಿ.ಬಿ ಜಯಚಂದ್ರ ಹಂಗಾಮಿ ಸ್ಪೀಕರ್

Date:

ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶನ ಆಗಸ್ಟ್ 13ರಿಂದ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರು ಆಗಸ್ಟ್ 10ರಿಂದಲೇ ಹಂಗಾಮಿ ಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

- Advertisement -

ಆಗಸ್ಟ್ 13ರಿಂದ 27ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಇತ್ತೀಚೆಗೆ, ರಾಜ್ಯದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯ ನಂತರ ಹೊಸದಾಗಿ ಸಚಿವರಾಗಿರುವ 19 ಮಂದಿಗೆ ಇನ್ನೂ ಖಾತೆ ಹಂಚಿಕೆ ಪೂರ್ಣಗೊಂಡಿಲ್ಲ. ಅಧಿವೇಶನ ಆರಂಭಕ್ಕೂ ಮುನ್ನ ಖಾತೆ ಹಂಚಿಕೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವೂ ಇದಾಗಿದ್ದು, ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ನೂತನ ವಿಧಾನಸಭಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯೂ ಅಧಿವೇಶನದಲ್ಲಿ ನಡೆಯಲಿದೆ. ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ. ಜಯಚಂದ್ರ ಅವರು ಈ ಪ್ರಕ್ರಿಯೆಯನ್ನು ನಡೆಸಿಕೊಡಲಿದ್ದು, ಕಲಾಪಗಳ ಕಾರ್ಯಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನೂ ವಹಿಸಲಿದ್ದಾರೆ.

ಅಧಿವೇಶನದ ಮೊದಲ ದಿನ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ನಡೆಯಲಿದೆ. ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಸೇರಿದಂತೆ ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸುವ ನಿರೀಕ್ಷೆಯಿದೆ. ಶುಕ್ರವಾರದಿಂದ ನಿಯಮಿತ ಕಲಾಪಗಳು ಆರಂಭವಾಗಲಿವೆ.

ಈ ಲೇಖನ ಓದಿದ್ದೀರಾ?: ಬ್ರಿಜ್‌ ಭೂಷಣ್ ಖುಲಾಸೆ | ಬೂಟಿನ ಏಟು ತಿಂದು ಹೋರಾಡಿದ್ದಕ್ಕೆ ಸಿಕ್ಕ ʼಪದಕʼ!

ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆಗಳು, ವಿಧೇಯಕಗಳ ಮಂಡನೆ, ಶೂನ್ಯವೇಳೆ, ಅರ್ಧಗಂಟೆ ಚರ್ಚೆ, ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಅಲ್ಪಾವಧಿ ಚರ್ಚೆ, ಅಧಿಕೃತ ನಿರ್ಣಯಗಳು ಹಾಗೂ ವಿವಿಧ ವರದಿಗಳ ಮಂಡನೆ ನಡೆಯಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ, ಬಿಡದಿ ಟೌನ್‌ಶಿಪ್ ಕುರಿತ ವಿವಾದ ಸೇರಿದಂತೆ ಹಲವು ವಿಷಯಗಳು ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಈ ವಿಷಯಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ ಇದ್ದು, ಆಡಳಿತಾರೂಢ ಕಾಂಗ್ರೆಸ್ ಕೂಡ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದ್ರೆ ಈ ನಂಬರ್‌ಗೆ ಕರೆ ಮಾಡಿ

ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು...

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ ಹಾಕಿದ ಮಾಧ್ಯಮಗಳು

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ...

ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ

ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ...