ಬೆಳಗಾವಿ | ವರದಕ್ಷಿಣೆ ಪಡೆದರೆ ₹11 ಲಕ್ಷ ದಂಡ: ಬಂಜಾರಾ ಸಮಾಜದ ಐತಿಹಾಸಿಕ ನಿರ್ಣಯ

Date:

ವರದಕ್ಷಿಣೆಗಾಗಿ ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳ ನಡುವೆ, ಬೆಳಗಾವಿ ಜಿಲ್ಲೆಯ ಬಂಜಾರಾ ಸಮಾಜ ವರದಕ್ಷಿಣೆ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಸಮಾಜದಲ್ಲಿ ವರದಕ್ಷಿಣೆ ನೀಡುವುದಕ್ಕೂ, ಪಡೆಯುವುದಕ್ಕೂ ಸಂಪೂರ್ಣ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸಿ ವರದಕ್ಷಿಣೆ ಸ್ವೀಕರಿಸಿದವರಿಗೆ ₹11 ಲಕ್ಷ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ.

- Advertisement -

ಜುಲೈ 30ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 35 ತಾಂಡಾಗಳ ಬಂಜಾರಾ ಸಮಾಜದ ಗುರು-ಹಿರಿಯರು ಹಾಗೂ ಮುಖಂಡರು ಈ ಕುರಿತು ಠರಾವ್ ಅಂಗೀಕರಿಸಿದರು. ವರದಕ್ಷಿಣೆ ಮಾತ್ರವಲ್ಲದೆ ಬಾಲ್ಯವಿವಾಹಕ್ಕೂ ಕಡಿವಾಣ ಹಾಕಲು ನಿರ್ಧರಿಸಲಾಗಿದ್ದು, ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭಗಳನ್ನು ಸರಳವಾಗಿ ನಡೆಸುವಂತೆ ಕರೆ ನೀಡಲಾಗಿದೆ. ಮದುವೆಗಳಲ್ಲಿ ಡಿಜೆ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಕಳೆದ ಎರಡು ತಿಂಗಳಿನಿಂದ ಸಮಾಜದ ಮುಖಂಡರು ಜಿಲ್ಲೆಯ 35 ತಾಂಡಾಗಳಿಗೆ ಭೇಟಿ ನೀಡಿ ವರದಕ್ಷಿಣೆಯಿಂದಾಗುವ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ಪರಿಣಾಮವಾಗಿ ಸಮಾಜದ ಜನರು ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದಾರೆ.

ಹೆಣ್ಣು ಭ್ರೂಣಹತ್ಯೆ ಸಂಪೂರ್ಣ ನಿಲ್ಲಬೇಕು, ಹೆಣ್ಣುಮಕ್ಕಳನ್ನು ಮನೆಯ ಮಹಾಲಕ್ಷ್ಮೀಯಾಗಿ ಗೌರವಿಸಬೇಕು. ಬಾಲ್ಯವಿವಾಹ ತಡೆದು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು. ಮದುವೆಗಳಲ್ಲಿ ಹಣ, ಚಿನ್ನ ಹಾಗೂ ದುಬಾರಿ ಉಡುಗೊರೆಗಳ ಬೇಡಿಕೆ ಮಾಡಬಾರದು ಎಂಬ ನಿರ್ಣಯವನ್ನು ಸಮಾಜ ಕೈಗೊಂಡಿದೆ.

ಸಭೆಯಲ್ಲಿ ಬಂಜಾರಾ ಸಮಾಜದ ಗುರು-ಹಿರಿಯರು ಸಂತ ಸೇವಾಲಾಲ್ ಮಹಾರಾಜ ಸೇರಿದಂತೆ ಸಮಾಜದ ಆರಾಧ್ಯ ದೇವರುಗಳ ಸನ್ನಿಧಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿ, “ವರದಕ್ಷಿಣೆ ಕೊಡುವುದಿಲ್ಲ, ಪಡೆಯುವುದಿಲ್ಲ; ಸಭೆಯ ನಿರ್ಣಯವನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ” ಎಂದು ಸಂಕಲ್ಪ ಮಾಡಿದರು.

ಕಾನೂನಿನ ಭಯಕ್ಕಿಂತ ಸಾಮಾಜಿಕ ಹೊಣೆಗಾರಿಕೆಯಿಂದ ವರದಕ್ಷಿಣೆ ನಿರ್ಮೂಲನೆ ಮಾಡಬೇಕು ಎಂಬ ಬಂಜಾರಾ ಸಮಾಜದ ಈ ನಿರ್ಧಾರ ಇದೀಗ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.

ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ಬೆಲೆ ಏರಿಕೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಹಾಲಿನ ಬೆಲೆ, ಬಸ್ ಪ್ರಯಾಣ ದರ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ...

ಬಾಗಲಕೋಟೆ | ವಕೀಲ ವೃತ್ತಿ ಯಶಸ್ಸಿಗೆ ನಿರಂತರ ಅಧ್ಯಯನ, ಭಾಷಾ ಪ್ರೌಢಿಮೆ ಅಗತ್ಯ: ಪದ್ಮಾವತಿ ಮಾನೆ

ವಕೀಲ ವೃತ್ತಿಯು ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಶ್ರೇಷ್ಠ...

ಶೈನ್ ಶೆಟ್ಟಿಯ ‘ಶಂಕರಾಭರಣ’ ಟ್ರೇಲರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ; ನವೆಂಬರ್ 20ಕ್ಕೆ ಸಿನಿಮಾ ಬಿಡುಗಡೆ!

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿರುವ ನಟ...