ಮೀಸಲಾತಿ ಕುರಿತು ದ್ವೇಷ-ನಿಂದನಾತ್ಮಕ ಹೇಳಿಕೆ; ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್ ವಿರುದ್ಧ ದೂರು ದಾಖಲು

Date:

ಮೀಸಲಾತಿ ಕುರಿತು ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಪೊಲೀಸ್‌ ದೂರು ದಾಖಲಾಗಿದೆ. ಮೈಸೂರು ನಿವಾಸಿಗಳಾದ ಕೆ.ಟಿ. ರಮೇಶ್ ಮತ್ತು ಮನೋಜ್ ಕುಮಾರ್ ಅವರು ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

- Advertisement -

ದೂರಿನಲ್ಲಿ; “ಜುಲೈ 25ರಂದು ಪ್ರಸಾರವಾದ ಪಬ್ಲಿಕ್ ಟಿವಿಯ ‘ಬಿಗ್ ಬುಲೆಟಿನ್’ ಕಾರ್ಯಕ್ರಮದಲ್ಲಿ ಅರುಣ್ ಬಡಿಗೇರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಅವಹೇಳನ ಮಾಡಿ ಮಾತನಾಡಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಅಂದಿನ ‘ಬಿಗ್‌ ಬುಲೆಟಿನ್’ ಕಾರ್ಯಕ್ರಮದ ವಿಡಿಯೋ ‘ಪಬ್ಲಿಕ್ ಟಿವಿ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿದ್ದು, ಆ ವಿಡಿಯೋದ 00:05:36 ರಿಂದ 00:06:23 ಅವಧಿಯಲ್ಲಿ ಅರುಣ್ ಬಡಿಗೇರ್ ಮೀಸಲಾತಿ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.

ಆ ವಿಡಿಯೋದಲ್ಲಿ ದೆಹಲಿಯ ವಿದ್ಯಾರ್ಥಿ ಯುವಜನರ ಪ್ರತಿಭಟನೆ ಕುರಿತು ಮಾತನಾಡಿದ್ದ ಅರುಣ್ ಬಡಿಗೇರ್, “ಮೀಸಲಾತಿಯಲ್ಲಿ ಶಿಕ್ಷಣ ಪಡೆದುಕೊಂಡು 50-60% ಅಂಕ ಪಡೆದವರೆಲ್ಲ, ಮೀಸಲಾತಿ ಅಡಿಯಲ್ಲಿ ಶಿಕ್ಷಕರಾಗಿ ಪಾಠ ಮಾಡೋಕೆ ಹೋದ್ರೆ, ವಿದ್ಯಾರ್ಥಿಗಳು ಏನು ಕಲಿತಾವೆ? ನಾಳೆ ಶಿಕ್ಷಣದಲ್ಲಿ ಅದೇ ವಿಚಾರದಲ್ಲಿ ಅವನು 50-60% ಮಾಡಿದವರನ್ನೆಲ್ಲ ಮೇಲ್ಗಡೆಗೆ ಹೋಗಿ ಮೀಸಲಾತಿ ಅಡಿಯಲ್ಲಿ ಬೇರೆ ಬೇರೆ ಪ್ರಮೋಷನ್ ತಗೊಳ್ತಾ ಹೋದ್ರೆ, ಕೆಲಸಗಳು ಹೇಗೆ ಆಗುತ್ತವೆ? ಡಾಕ್ಟರೇ ಹೇಗೆ ಆಗ್ತಾನೆ ಅವನು? ಇಂಜಿನಿಯರ್ ಹೇಗೆ ಆಗ್ತಾನೆ? ಎಲ್ಲ ಕಡೆಯೂ ಮೀಸಲಾತಿ ಅಂತಿದ್ರೆ, ಮೀಸಲಾತಿ ವಿಚಾರದಲ್ಲಿ ಕ್ವಾಲಿಟಿ ಅನ್ನೋದೇ ಇಲ್ಲ. ಮೌಲ್ಯಗಳೇ ಇಲ್ಲದೆ ಇರುವಂತವರು ಪಾಠ ಮಾಡುವ ಪರಿಸ್ಥಿತಿಗೆ ಬರ್ತಾ ಇದೆ. ವೇಟೇಜ್ ಇಲ್ಲ” ಎಂದು ಮೀಸಲಾತಿ ವಿರುದ್ಧ ತುಚ್ಛವಾಗಿ ಮಾತನಾಡಿದ್ದಾರೆ. ಮೀಸಲಾತಿ ಪಡೆಯುವ ಸಮುದಾಯಗಳ ಯುವಜನರಿಗೆ ಶಿಕ್ಷಣ-ಉದ್ಯೋಗ ಪಡೆಯುವ ಅರ್ಹತೆಯೇ ಇಲ್ಲ ಎಂಬ ರೀತಿಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.

ಅರುಣ್ ಬಡಿಗೇರ್ ಅವರ ಈ ಹೇಳಿಕೆಗಳನ್ನು ದೂರುದಾರರು ಖಂಡಿಸಿದ್ದಾರೆ. “ಅರುಣ್ ಬಡಿಗೇರ್ ಅವರ ಈ ಹೇಳಿಕೆಗಳು ಮೀಸಲಾತಿ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಪಡೆದಿರುವ ಸಮುದಾಯಗಳ ಅರ್ಹತೆ ಮತ್ತು ಸಾಮರ್ಥ್ಯವನ್ನು ಪ್ರಶ್ನಿಸುವಂತಿವೆ. ಸಂವಿಧಾನಬದ್ಧ ಮೀಸಲಾತಿ ವ್ಯವಸ್ಥೆಯ ಬಗ್ಗೆ ದ್ವೇಷ ಮತ್ತು ಪೂರ್ವಾಗ್ರಹವನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.  

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೆಲಸಕ್ಕೆ ಸಿದ್ಧರಿರುವ ಕೂಲಿಕಾರರಿಗೆ ಎರಡು ದಿನದಲ್ಲಿ ಉದ್ಯೋಗ ಕಲ್ಪಿಸಿ: ಸಿಇಒ ಮುಕುಲ್ ಜೈನ್

ಗ್ರಾಮೀಣ ಭಾಗದಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ವಿಬಿ-ಜಿ ರಾಮ್-ಜಿ ಯೋಜನೆಯಡಿ...

ಬ್ರೆಜಿಲ್ ಗಡಿ ದಾಟಿದ ಗೆಲುವು: ಜನತಂತ್ರಕ್ಕೆ ಆಶಾಕಿರಣವಾದ ಲುಲಾ, ಆದರೆ ಅಳಿಸಿಲ್ಲ ಬಲಪಂಥದ ಹೆಜ್ಜೆಗುರುತು

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು...