ಭಾರತದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ವೀಸಾ ಕಡ್ಡಾಯ; ಏನಿದು ಕೇಂದ್ರದ ನೂತನ ವಲಸೆ ನಿಯಮ?

Date:

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು, ನಿರಾಶ್ರಿತರು ಮತ್ತು ನೆರೆರಾಷ್ಟ್ರಗಳ ಪೌರರಿಗೆ ಕೇಂದ್ರ ಗೃಹ ಸಚಿವಾಲಯವು ನಿಯಮಗಳನ್ನು ಕಟ್ಟುನಿಟ್ಟಾಗಿಸಿದೆ. ಗೃಹ ಸಚಿವಾಲಯವು ‘ವಲಸೆ ಮತ್ತು ವಿದೇಶಿಯರು (ವಿನಾಯಿತಿ) (ತಿದ್ದುಪಡಿ) ಆದೇಶ, 2026’ (Immigration and Foreigners (Exemption) Amendment Order, 2026) ಅಡಿಯಲ್ಲಿ ವೀಸಾ ಸಂಬಂಧಿಸಿದಂತೆ ಪ್ರಮುಖ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ.

- Advertisement -

ವಾಸ್ತವ್ಯ ಮತ್ತು ಸಂಚಾರ ವ್ಯವಸ್ಥೆಯನ್ನು ಹೆಚ್ಚು ಸುಸಂಘಟಿತ ಮತ್ತು ಭದ್ರತೆಯ ದೃಷ್ಟಿಯಿಂದ ಕಟ್ಟುನಿಟ್ಟಾಗಿಸಲು ಈ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ...

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ. ಬ್ರಿಟಿಷ್...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮುಸ್ಲಿಮೇತರ ನಿರಾಶ್ರಿತರಿಗೆ ವೀಸಾ ನಿಯಮದಲ್ಲಿ ಏನಾಗಿದೆ ಬದಲಾವಣೆ?

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಆಗಮಿಸಿರುವ 6 ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್) ನಿರಾಶ್ರಿತರಿಗೆ ಈ ಮುಂಚೆ ಪ್ರವೇಶ ಮತ್ತು ವಾಸ್ತವ್ಯದ ನಿಯಮಗಳಲ್ಲಿ ವಿಶಾಲ ವಿನಾಯಿತಿ ಇತ್ತು.

ಇದನ್ನೂ ಓದಿ: ಕಡಲು ದಾಟಿದ ಅಸ್ಪೃಶ್ಯತೆ: ವಿದೇಶಿ ವಿವಿಗಳಲ್ಲಿಯೂ ದಲಿತ ವಿದ್ಯಾರ್ಥಿಗಳಿಗೆ ಬಿಡದ ಜಾತಿ ತಾರತಮ್ಯ

2024ರ ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲು ಭಾರತಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಆಗಮಿಸಿದ ಅಥವಾ ಹೊಂದಿದ್ದ ದಾಖಲೆಗಳ ಅವಧಿ ಮುಗಿದಿರುವ ಈ 6 ಸಮುದಾಯಗಳ ವ್ಯಕ್ತಿಗಳಿಗೆ ಭಾರತಕ್ಕೆ ಪ್ರವೇಶಿಸುವಾಗ ಇದ್ದ ಕೆಲವು ನಿಯಮಗಳ ಸಡಿಲಿಕೆಯನ್ನು ಉಳಿಸಿಕೊಳ್ಳಲಾಗಿದೆಯಾದರೂ, ಭಾರತದಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರಿಸಲು ಸೂಕ್ತ ವಿಭಾಗದ ವೀಸಾ ಹೊಂದುವುದು ಕಡ್ಡಾಯಗೊಳಿಸಲಾಗಿದೆ. ವೀಸಾ ಇಲ್ಲದೆ ಅನಿರ್ದಿಷ್ಟಾವಧಿಗೆ ದೇಶದಲ್ಲಿ ಉಳಿಯಲು ಅವಕಾಶವಿರುವುದಿಲ್ಲ.

ಇನ್ನು 1959ರಿಂದ 2003ರ ಮೇ 30ರ ನಡುವೆ ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅನುಮತಿಯೊಂದಿಗೆ ಭಾರತಕ್ಕೆ ಬಂದವರು ಮತ್ತು ನಂತರ ನಿಗದಿತ ಗಡಿ ಪೋಸ್ಟ್‌ಗಳ ಮೂಲಕ ವಿಶೇಷ ಪ್ರವೇಶ ಪರ್ಮಿಟ್ ಪಡೆದು ಬಂದ ಟಿಬೆಟಿಯನ್ನರಿಗೆ ಪಾಸ್‌ಪೋರ್ಟ್ ಹಾಗೂ ವೀಸಾ ನಿಯಮಗಳಿಂದ ನೀಡಲಾಗಿದ್ದ ವಿನಾಯಿತಿ ಮುಂದುವರಿಯಲಿದೆ. ಆದರೆ, ಅವರು ಸ್ಥಳೀಯ ಪ್ರಾಧಿಕಾರಗಳಿಂದ ನೋಂದಣಿ ಪ್ರಮಾಣಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

2015ರ ಜನವರಿ 9 ಅಥವಾ ಅದಕ್ಕೂ ಮೊದಲು ಭಾರತದಲ್ಲಿ ಆಶ್ರಯ ಪಡೆದು ನೋಂದಾಯಿತರಾಗಿರುವ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ನೀಡಲಾಗಿರುವ ವೀಸಾ ಮತ್ತು ಪಾಸ್‌ಪೋರ್ಟ್ ವಿನಾಯಿತಿಗಳನ್ನು ನೂತನ ಆದೇಶದಲ್ಲೂ ಮುಂದುವರಿಸಲಾಗಿದೆ.

2009ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಕಾಯಂ ಆಗಿ ನೆಲೆಸುವ ಉದ್ದೇಶದಿಂದ ಕಾನೂನುಬದ್ಧ ಪಾಸ್‌ಪೋರ್ಟ್ ಮೂಲಕ ಬಂದಿರುವ ಕೆಲವು ಪಾಕಿಸ್ತಾನಿ ಪ್ರಜೆಗಳಿಗೆ (ವಿಶೇಷವಾಗಿ ‘CNIC’ ಅಥವಾ ಪಾಕಿಸ್ತಾನಿ ಗುರುತಿನ ಚೀಟಿ ಇಲ್ಲದೆ ಪಾಸ್‌ಪೋರ್ಟ್ ನವೀಕರಿಸಲು ಸಾಧ್ಯವಾಗದವರಿಗೆ) ವಿನಾಯಿತಿ ನೀಡಲಾಗಿದೆ. ಆದರೆ, ಅವರು ಮರಳಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂಬ ಲಿಖಿತ ಭರವಸೆ ನೀಡಬೇಕು ಮತ್ತು ದೇಶದಲ್ಲಿ ವಾಸ್ತವ್ಯ ಮುಂದುವರಿಸಲು ನಿಗದಿತ ವೀಸಾ ಪಡೆಯಬೇಕು.

ಇದನ್ನೂ ಓದಿ: ‘ವೀಸಾಗಾಗಿ ಕಾಯುತ್ತಾ’; ಬಾಬಾಸಾಹೇಬರು ಬರೆದ ಅಸ್ಪೃಶ್ಯರ ಆತ್ಮಕಥೆ

ಇದೇ ರೀತಿ, ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ತೆರಳಿ 2009ರ ಡಿಸೆಂಬರ್ 31ರೊಳಗೆ ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಕೇರಳಕ್ಕೆ ಮರಳಿದ ಭಾರತೀಯ ಮೂಲದ ಮುಸ್ಲಿಂ ನಿರಾಶ್ರಿತ ಕುಟುಂಬಗಳಿಗೂ ವಿನಾಯಿತಿ ಅನ್ವಯವಾಗಲಿದೆ.

ಮುಸ್ಲಿಮರನ್ನು ಹೊರತುಪಡಿಸಿರುವುದರ ವಿರುದ್ಧ ಆಕ್ರೋಶ

ಭಾರತ ಸರ್ಕಾರದ ಧರ್ಮಆಧಾರಿತ ವಿನಾಯಿತಿ ಮತ್ತು ಪೌರತ್ವ ಅಥವಾ ವಲಸೆ ನೀತಿಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿರುವುದು/ಅವರಿಗೆ ವಿನಾಯಿತಿ ನೀಡದಿರುವುದರ ವಿರುದ್ಧ ವಿಶ್ವಸಂಸ್ಥೆ (United Nations), ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ದೇಶೀಯ ಸಾಮಾಜಿಕ ಹೋರಾಟಗಾರರು ತೀವ್ರ ವಿರೋಧ, ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್ ಕಚೇರಿ (OHCHR) ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಅದರ ಸಂಬಂಧಿತ ವಲಸೆ ನೀತಿಗಳ ಕುರಿತು ಪ್ರತಿಕ್ರಿಯಿಸುತ್ತಾ, “ಧರ್ಮವನ್ನು ಆಧರಿಸಿ ಆಶ್ರಯ ಅಥವಾ ಪೌರತ್ವದ ನಿಯಮ ರೂಪಿಸುವುದು ಮೂಲಭೂತವಾಗಿ ತಾರತಮ್ಯದಿಂದ ಕೂಡಿದೆ” ಎಂದು ಸ್ಪಷ್ಟಪಡಿಸಿತ್ತು.

ಭಾರತವು ಸಹಿ ಮಾಡಿರುವ ‘ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ’ (ICCPR) ಹಾಗೂ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಪ್ರಕಾರ, ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಕಾನೂನಿನ ಸಮಾನ ರಕ್ಷಣೆ ಸಿಗಬೇಕು. ಮುಸ್ಲಿಮರನ್ನು (ಉದಾಹರಣೆಗೆ ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು, ಪಾಕಿಸ್ತಾನದ ಅಹ್ಮದೀಯ ಮುಸ್ಲಿಮರು, ಅಫ್ಘಾನಿಸ್ತಾನದ ಹಜಾರ ಮುಸ್ಲಿಮರು) ಈ ನಿಯಮಗಳಿಂದ ಹೊರಗಿಟ್ಟಿರುವುದು ಕಳವಳಕಾರಿ ಎಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನದ 14ನೇ ವಿಧಿಯು ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ (ಪ್ರಜೆಗಳು ಹಾಗೂ ವಿದೇಶಿಗರು ಇಬ್ಬರಿಗೂ) “ಕಾನೂನಿನ ಮುಂದೆ ಸಮಾನತೆ” ನೀಡುತ್ತದೆ. ಧರ್ಮದ ಆಧಾರದಲ್ಲಿ ವರ್ಗೀಕರಣ ಮಾಡುವುದು ಈ ವಿಧಿಗೆ ವಿರುದ್ಧವಾಗಿದೆ ಎಂಬುದು ಸಾಮಾಜಿಕ ಹೋರಾಟಗಾರರ ಮತ್ತು ಸಂವಿಧಾನ ತಜ್ಞರ ಪ್ರಮುಖ ಆಕ್ಷೇಪವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಕಲಿ ಎನ್‌ಕೌಂಟರ್ ಭೀತಿ: ಬುಲೆಟ್ ಪ್ರೂಫ್ ಜಾಕೆಟ್‌ ಕೋರಿ ಕೊಲೆ ಆರೋಪಿಗಳಿಂದ ನ್ಯಾಯಾಲಯದ ಮೊರೆ

ಉತ್ತರ ಪ್ರದೇಶ ಪೊಲೀಸರಿಂದ 'ನಕಲಿ ಎನ್‌ಕೌಂಟರ್' ನಡೆಯುವ ಭೀತಿಯಿಂದಾಗಿ, ಹರ್ಯಾಣದ ಗಾಯಕ...

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಕಾರವಾರದಲ್ಲಿ ದಸಂಸ ಬೃಹತ್ ಪ್ರತಿಭಟನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸಿ,...

ವಿಜಯಪುರ | ಕೃಷ್ಣಾ ನದಿಯಿಂದ ಉಜ್ಜನಿ ಅಣೆಕಟ್ಟಿಗೆ 40 ಟಿಎಂಸಿ ನೀರು: ರೈತ ಸಂಘದ ತೀವ್ರ ವಿರೋಧ

ಕೃಷ್ಣಾ ನದಿಯಿಂದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹಾರಾಷ್ಟ್ರದ ಉಜ್ಜನಿ ಅಣೆಕಟ್ಟಿಗೆ...

ವಿಜಯೇಂದ್ರ ಹೇಳಿಕೆಗೆ ಖಂಡನೆ: ಬಿಜೆಪಿ ನಾಯಕರ ನಿವಾಸ, ಕಚೇರಿ ಬಳಿ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಈಗ ಪೋಸ್ಟರ್...