ಈ ದಿನ ಕವಿತೆ | ಚರಿತ್ರೆ- ಚೀನಾದ ಕವಿ ಜ಼ಾವ್ ಯಿ

Date:

18 ನೇ ಶತಮಾನದಲ್ಲಿದ್ದ ಚೀನಾದ ಮಹತ್ವದ ಕವಿಗಳಲ್ಲಿ ಒಬ್ಬರಾದ ಜ಼ಾವ್ ಯಿ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ

- Advertisement -

ಅತಿಥಿಯೊಬ್ಬ ದಿಢೀರನೆ ಮನೆಯ ಬಾಗಿಲು ಬಡಿದ.
ಬಂದವನೇ ನನ್ನ ಕುಂಚಕ್ಕೆ ಕೆಲಸ ನೀಡಿದ.
ಲಾಂಗ್ ಹಾಗೂ ಹ್ಯುಯಾಂಗ್೧* ಆಡಳಿತವನ್ನು ಇವನ ಆಡಳಿತಕ್ಕೆ ಹೋಲಿಸಿ ಹೊಗಳಿ ಅಟ್ಟ ಕ್ಕೇರಿಸುವ ಗೋರಿ ಬರಹವನ್ನು ಸಿದ್ಧಮಾಡಲು ಹೇಳಿದ.
ಇವನ ವಿದ್ವತ್ತನ್ನು ಚೆಂಗ್ ಸೋದರರೊಡನೆ, ಝ಼ ಕ್ಸಿ೨* ಯೊಡನೆ ಹೋಲಿಸಿ ಹಾಡಿ ಕೊಂಡಾಡಲು ಹೇಳಿದ.
ನನಗೂ ಮಜವೆನಿಸಿತು. ತಮಾಷೆಯಾಗೇ ತೆಗೆದುಕೊಂಡೆ.
ಅವನು ಕೇಳಿದ್ದನ್ನೇ ತೇಪೆ ಹಾಕಿ
ಬರೆದು ಕೊಟ್ಟೆ.
ಈ ವ್ಯಕ್ತಿಯನ್ನು ಮಹಾಪುರುಷನನ್ನಾಗಿಸಿದೆ.
ಈ ಗೋರಿಬರಹಕ್ಕೂ ಇವನಿಗೂ
ಗುಲಗಂಜಿಯಷ್ಟೂ ತಾಳೆಯಾಗುತ್ತಿರಲಿಲ್ಲ.
ಈ ಬರಹವು ಗೋರಿಯನ್ನಲಂಕರಿಸಿದರೆ
ಯಾರು ಮಹಾಪುರುಷ? ಯಾರಲ್ಲ ? ಎಂದು ಯಾರಿಗೆ ತಿಳಿವುದು!
ಬಹುಶಃ ಜನ ನನ್ನ ಗೋರಿಬರಹವನ್ನೇ ಪುನರುಚ್ಚರಿಸಬಹುದು,
ಅದು ಚರಿತ್ರೆಯ ಪುಟಗಳಲ್ಲೂ ಸೇರಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ...

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ. ಬ್ರಿಟಿಷ್...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ನನಗೀಗ ನಿಚ್ಚಳವಾಗಿದೆ:ಕನಿಷ್ಠ ಅರ್ಧದಷ್ಟು ಚರಿತ್ರೆಯಾದರೂ ಶುದ್ಧ ಸುಳ್ಳು, ಹಸಿಹಸಿ ಸುಳ್ಳು.

Advertisements

೧* ಲಾಂಗ್ ಮತ್ತು ಹ್ಯುಯಾಂಗ್= ಪ್ರಖ್ಯಾತ ಹ್ಯಾನ್ ವಂಶದ ಮಂತ್ರಿಗಳು.
೨* ಚೆಂಗ್ ಸೋದರರು ಹಾಗೂ ಝ಼ ಕ್ಸಿ= ಸಾಂಗ್ ವಂಶದ ಹೆಸರಾಂತ ತತ್ವಜ್ಞಾನಿಗಳು, ವಿದ್ವಾಂಸರು.

ಟಿಪ್ಪಣಿ: ಈ ಕವಿ ತನ್ನನ್ನು ತಾನು ” ಮೂರು ಅರ್ಧಗಳ ಮುದುಕ” ಎಂದು ಕರೆದು ಕೊಳ್ಳುತ್ತಿದ್ದ- “ಅರ್ಧ ಕಾಣಿಸುವ ಕಣ್ಣು, ಅರ್ಧಂಬರ್ಧ ಕೇಳಿಸುವ ಕಿವಿ, ಹಾಗೂ ಅರೆಬರೆ ಕೇಳಿದ ದನಿ” !

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು; ರೂ.264.61 ಲಕ್ಷ ಪರಿಹಾರ ಬಾಕಿ!

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು...

ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ‘ಗ್ಲೆನ್ ಮ್ಯಾಕ್ಸ್‌ವೆಲ್’ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

"ಆಸ್ಟ್ರೇಲಿಯಾ ತಂಡದ ಬ್ಯಾಗಿ ಗ್ರೀನ್ ಮತ್ತು ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು...