ವಚನ ಸಾಹಿತ್ಯ ಸಂರಕ್ಷಕ ಫ.ಗು.ಹಳಕಟ್ಟಿ

Date:

ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ. ಎಂ. ಶ್ರೀಕಂಠಯ್ಯ ಅವರು ವಿಜಯಪುರಕ್ಕೆ ಬಂದಾಗ, “ಇತಿಹಾಸ ಪ್ರಸಿದ್ಧ ಗೋಳಗುಮ್ಮಟವನ್ನು ನೋಡುತ್ತೀರಾ?” ಎಂದು ಕೇಳಿದರು. ಆಗ ಅವರು “ಮೊದಲು ನಾನು ವಚನಗುಮ್ಮಟವನ್ನು ನೋಡಬೇಕು” ಎಂದು ಉತ್ತರಿಸಿದ್ದರೆಂದು ಪ್ರಸಿದ್ಧ ಘಟನೆ ಹೇಳುತ್ತದೆ. ಆ ವಚನಗುಮ್ಮಟವೇ ವಚನಪಿತಾಮಹ ರಾವಬಹದ್ದೂರ್ ಡಾ. ಫ. ಗು. ಹಳಕಟ್ಟಿ.

- Advertisement -

1880ರ ಜುಲೈ 2ರಂದು ಧಾರವಾಡದಲ್ಲಿ ಗುರುಬಸಪ್ಪ ಹಳಕಟ್ಟಿ ಮತ್ತು ದಾನಾದೇವಿ ದಂಪತಿಗಳ ಪುತ್ರರಾಗಿ ಜನಿಸಿದ ಹಳಕಟ್ಟಿಯವರಿಗೆ ಸಾಹಿತ್ಯದ ಅಭಿರುಚಿ ಕುಟುಂಬ ಪರಂಪರೆಯಿಂದಲೇ ಬಂದಿತ್ತು. ತಂದೆ ಗುರುಬಸಪ್ಪ ಅವರು ಲೇಖಕರಾಗಿದ್ದು, ಅನೇಕ ಐತಿಹಾಸಿಕ ಹಾಗೂ ಸಾಮಾಜಿಕ ಕೃತಿಗಳನ್ನು ರಚಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಹಳಕಟ್ಟಿಯವರು, ನಂತರ ಮುಂಬೈನ ಸೇಂಟ್ ಝೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಕನ್ನಡದ ಮೇಲಿನ ನಿರ್ಲಕ್ಷ್ಯ ಮತ್ತು ಇತರ ಭಾಷೆಗಳ ಅಭಿಮಾನವನ್ನು ಕಂಡ ಅವರು, ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಜೀವನವನ್ನೇ ಮುಡಿಪಾಗಿಡುವ ಸಂಕಲ್ಪ ಮಾಡಿದರು. ಆಲೂರು ವೆಂಕಟರಾಯರಂತಹ ಕನ್ನಡ ಚಿಂತಕರು ಅವರ ಮೇಲೆ ಅಪಾರ ಪ್ರಭಾವ ಬೀರಿದರು.

1904ರಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದ ಅವರು, ಬಳಿಕ ವಿಜಯಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ವಕೀಲರಾಗಿದ್ದರೂ, ಸಾರ್ವಜನಿಕ ಬದುಕು, ಶಿಕ್ಷಣ, ಕನ್ನಡ ಮತ್ತು ಸಮಾಜ ಸೇವೆಯೇ ಅವರ ನಿಜವಾದ ಧ್ಯೇಯವಾಗಿತ್ತು. ನಗರಸಭೆ, ಜಿಲ್ಲಾ ಅಭಿವೃದ್ಧಿ ಮಂಡಳಿ, ಸಾರ್ವಜನಿಕ ಅಭಿಯೋಜಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮುಂಬೈ ವಿಧಾನಪರಿಷತ್ ಸದಸ್ಯರಾಗಿ ಕನ್ನಡದ ಪರವಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು.

ಹಳಕಟ್ಟಿ ಅವರ ಜೀವನದ ಅತ್ಯಂತ ಮಹತ್ತರ ಸಾಧನೆ ವಚನ ಸಾಹಿತ್ಯದ ಸಂರಕ್ಷಣೆ. ಆ ಕಾಲದಲ್ಲಿ ಮನೆ-ಮನೆಗಳಲ್ಲಿ, ಮಠಗಳಲ್ಲಿ, ದೇವಾಲಯಗಳಲ್ಲಿ, ತಾಳೆಓಲೆಗಳಲ್ಲಿ ಅಡಗಿದ್ದ ವಚನ ಸಾಹಿತ್ಯವನ್ನು ಹುಡುಕುತ್ತ ಅವರು ನಾಡಿನ ಮೂಲೆ-ಮೂಲೆ ಸಂಚರಿಸಿದರು. 1920ರಲ್ಲಿ ವಿಜಯಪುರದಲ್ಲಿ ಸಂಗ್ರಹಿಸಿದ ಅಪರೂಪದ ವಚನ ಹಸ್ತಪ್ರತಿಗಳ ಪ್ರದರ್ಶನ ಏರ್ಪಡಿಸಿ, ಅವುಗಳ ಮಹತ್ವವನ್ನು ಜನರಿಗೆ ಪರಿಚಯಿಸಿದರು.

1925ರಲ್ಲಿ ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ “ಹಿತಚಿಂತಕ ಮುದ್ರಣಾಲಯ” ಸ್ಥಾಪಿಸಿ, ವಚನ ಸಾಹಿತ್ಯವನ್ನು ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಐತಿಹಾಸಿಕ ಕಾರ್ಯ ಕೈಗೊಂಡರು. ಇದೊಂದು ನಿಜವಾದ ವಚನ ಕ್ರಾಂತಿಯಾಗಿತ್ತು. ಹಳಕಟ್ಟಿಯವರ ಸಂಶೋಧನೆಯ ಮೊದಲು ಸುಮಾರು 50 ವಚನಕಾರರು ಮಾತ್ರ ಪರಿಚಿತರಾಗಿದ್ದರು. ಆದರೆ ಅವರ ಅವಿರತ ಪರಿಶ್ರಮದಿಂದ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

1923ರಿಂದ 1939ರ ನಡುವೆ ಪ್ರಕಟವಾದ “ವಚನ ಸಾಹಿತ್ಯ ಸಾರ” ಹಲವು ಸಂಪುಟಗಳು ಇಂದಿಗೂ ವಚನ ಸಾಹಿತ್ಯದ ಅಮೂಲ್ಯ ಗ್ರಂಥಗಳಾಗಿವೆ. ಒಟ್ಟಾರೆ ಅವರು ಸಂಪಾದಿಸಿ ಪ್ರಕಟಿಸಿದ ಹಾಗೂ ಸ್ವತಃ ರಚಿಸಿದ ಕೃತಿಗಳು 175ಕ್ಕೂ ಹೆಚ್ಚು. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಸೇರಿದಂತೆ ಅನೇಕ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ.

ಪತ್ರಿಕೋದ್ಯಮದಲ್ಲಿಯೂ ಅವರು ಮಹತ್ವದ ಸಾಧನೆ ಮಾಡಿದರು. 1926ರಲ್ಲಿ ಸಂಶೋಧನಾ ಪತ್ರಿಕೆ “ಶಿವಾನುಭವ” ಆರಂಭಿಸಿ, 1927ರಲ್ಲಿ “ನವ ಕರ್ನಾಟಕ” ವಾರಪತ್ರಿಕೆಯನ್ನು ಪ್ರಕಟಿಸಿದರು. ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರಾಗಿ ವಚನ ಮತ್ತು ಕನ್ನಡ ಸಾಹಿತ್ಯದ ಪ್ರಸಾರಕ್ಕೆ ಅವರು ಅಮೂಲ್ಯ ಕೊಡುಗೆ ನೀಡಿದರು.

ಸಂಘಟನೆ ಹಾಗೂ ಸಮಾಜ ನಿರ್ಮಾಣದಲ್ಲಿಯೂ ಹಳಕಟ್ಟಿಯವರ ಸೇವೆ ಅಪಾರ. 1910ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ.) ಸ್ಥಾಪಿಸಿದರು. 1912ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿ, ಶಿಕ್ಷಣ, ಸಹಕಾರ, ಕೃಷಿ, ನೇಕಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಮಹತ್ವದ್ದಾಗಿದೆ.

ಹಳಕಟ್ಟಿಯವರ ಸೇವೆಯನ್ನು ಗುರುತಿಸಿ ಮುಂಬೈ ವಿಧಾನಪರಿಷತ್ ಸದಸ್ಯತ್ವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1926), ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ (1928), ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಲಭಿಸಿದವು.

ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ವಿಶ್ವಕ್ಕೆ ಪರಿಚಯಿಸಿದವರೂ ಅವರೇ. ವಚನ ಗಾಯನಕ್ಕೆ ಉತ್ತೇಜನ ನೀಡಿ, ಶ್ರೇಷ್ಠ ಸಂಗೀತಗಾರರಿಂದ ಧ್ವನಿಮುದ್ರಣ ಮಾಡಿಸುವ ಮೂಲಕ ವಚನ ಸಾಹಿತ್ಯದ ಪ್ರಸಾರಕ್ಕೆ ಹೊಸ ಆಯಾಮ ನೀಡಿದರು. 1964ರ ಜೂನ್ 27ರಂದು ಅವರು ಲಿಂಗೈಕ್ಯರಾದರೂ, ಅವರಿಂದ ಉಳಿದಿರುವ ವಚನ ಸಾಹಿತ್ಯದ ಸಂಪತ್ತು, ಶಿಕ್ಷಣ ಸಂಸ್ಥೆಗಳು, ಸಹಕಾರಿ ಚಳವಳಿ ಹಾಗೂ ಕನ್ನಡ ಸೇವೆ ಇಂದಿಗೂ ಜೀವಂತವಾಗಿದೆ. ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆಯು ನಂತರ ಅವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಪ್ರಕಟಿಸಿರುವುದು ಅವರ ಕಾರ್ಯದ ಮಹತ್ವವನ್ನು ಸಾರುತ್ತದೆ.

ವಚನಗಳನ್ನು ಉಳಿಸಿ, ಶರಣರ ಚಿಂತನೆಗಳನ್ನು ಜನಜನಿತಗೊಳಿಸಿ, ಕನ್ನಡ ಸಾಹಿತ್ಯದ ಅಮೂಲ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಮಹಾನ್ ಸಾಧಕ ಡಾ. ಫ. ಗು. ಹಳಕಟ್ಟಿ ಅವರ ಸ್ಮರಣೆ ಕನ್ನಡಿಗರ ಸಾಂಸ್ಕೃತಿಕ ಕರ್ತವ್ಯವಾಗಿದೆ.

ಬರಹ : ಮಂಜುನಾಥ ಸುಳ್ಳೊಳ್ಳಿ, ಜಿಲ್ಲಾ ವಾರ್ತಾಧಿಕಾರಿಗಳು, ಬೀದರ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...