ಬಿಜೆಪಿ ಪ್ರಭಾವಿ ನಾಯಕಿ, ಮಾಜಿ ಸಂಸದೆ ಈಗ ಕರ್ನಾಟಕದ ನೂತನ ರಾಜ್ಯಪಾಲೆ

Date:

ಕರ್ನಾಟಕದ ರಾಜಭವನಕ್ಕೆ ಮತ್ತೊಬ್ಬ ಬಿಜೆಪಿ ಹಿನ್ನೆಲೆಯ ರಾಜಕಾರಣಿ ಪ್ರವೇಶಿಸುತ್ತಿದ್ದಾರೆ. ಅಕ್ಟೋಬರ್ 12ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ನೇಮಿಸಿದ್ದಾರೆ. ಥಾವರ್‌ಚಂದ್ ಗೆಹ್ಲೋಟ್ ಅವರು ರಾಜಭವನದಿಂದ ಹೊರನಡೆದಿದ್ದು, ಆ ಹುದ್ದಗೆ ಸುಧಾ ಯಾದವ್ ನೇಮಕಗೊಂಡಿದ್ದಾರೆ.

- Advertisement -

ಸುಧಾ ಯಾದವ್ ಅವರು ಮೂಲತಃ ಬಿಜೆಪಿ ನಾಯಕಿ. ಪಕ್ಷದ ಅತ್ಯುನ್ನತ ನೀತಿ ನಿರ್ಧಾರ ಮತ್ತು ನಾಯಕತ್ವ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸದೀಯ ಮಂಡಳಿಯ ಸದಸ್ಯೆಯಾಗಿದ್ದವರು. ಹೀಗಾಗಿ, ಅವರ ನೇಮಕವನ್ನು ಕೇವಲ ಒಬ್ಬ ಅನುಭವಿ ಮಹಿಳಾ ನಾಯಕಿಗೆ ದೊರೆತ ಸಾಂವಿಧಾನಿಕ ಅವಕಾಶವೆಂದು ಮಾತ್ರ ನೋಡಲಾಗದು. ಕೇಂದ್ರದ ಆಡಳಿತಾರೂಢ ಪಕ್ಷ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಡುವಿನ ಸಂಬಂಧದ ದೃಷ್ಟಿಯಿಂದಲೂ ಈ ನೇಮಕಾತಿಯನ್ನು ಗಮನಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

1965ರ ಅಕ್ಟೋಬರ್ 16ರಂದು ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದಲ್ಲಿ ಜನಿಸಿದ ಸುಧಾ ಯಾದವ್, ರಾಜಕೀಯ ಪ್ರವೇಶಿಸುವ ಮೊದಲು ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಅವರು 1987ರಲ್ಲಿ ರೂರ್ಕಿಯ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಮತ್ತು 1992ರಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸುಧಾ ಯಾದವ್ ಅವರ ಪತಿ ಪತಿ ಸುಖಬೀರ್ ಸಿಂಗ್ ಯಾದವ್ ಗಡಿ ಭದ್ರತಾ ಪಡೆಯ ಉಪ ಕಮಾಂಡೆಂಟ್ ಆಗಿದ್ದರು. 1999ರಲ್ಲಿ ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದರು. ಇದೇ ಸಮಯದಲ್ಲಿ, ಮೋದಿ ಅವರು ಬಿಜೆಪಿ ಹರಿಯಾಣ ರಾಜ್ಯ ಉಸ್ತುವಾರಿಯಾಗಿದ್ದರು. ಆ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮಹೇಂದ್ರಗಢ ಕ್ಷೇತ್ರದಿಂದ ಸುಧಾ ಯಾದವ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಮೋದಿ ಪ್ರಸ್ತಾಪಿಸಿದ್ದರು. ಇದರೊಂದಿಗೆ, ರಾಜಕೀಯ ಪ್ರವೇಶಿಸಿದ ಸುಧಾ, ಅಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

ಆದಾಗ್ಯೂ, 2004ರ ಚುನಾವಣೆಯಲ್ಲಿ ಅವರು ಮಹೇಂದ್ರಗಢ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು ಬಳಿಕ, 2009ರಲ್ಲಿ ಗುರ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿ, ಅಲ್ಲಿಯೂ ಸೋಲು ಅನುಭವಿಸಿದರು.

ಸತತ ಎರಡು ಸೋಲು ಕಂಡ ಸುಧಾ ಅವರಿಗೆ ಬಿಜೆಪಿ ಸಂಘಟನೆಯ ಜವಾಬ್ದಾರಿ ವಹಿಸಿತ್ತು. ಅದರಲ್ಲೂ, ಮೋದಿ ಪ್ರಧಾನಿಯಾದ ಬಳಿಕ, ಅವರು ಬಿಜೆಪಿಯೊಳಗೆ ಭಾರೀ ಸಕ್ರಿಯವಾಗಿ ಕೆಲಸ ಮಾಡಲಾರಂಭಿಸಿದ್ದರು. 2015ರಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. 2019ರಿಂದ 2022ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ನೇಮಕಗೊಂಡಿದ್ದರು.

ಆ ನಂತರ, 2022ರಲ್ಲಿ ಅವರನ್ನು ಬಿಜೆಪಿಯ ಅತ್ಯುನ್ನತ ಸಮಿತಿ ‘ಸಂಸದೀಯ ಮಂಡಳಿ’ಗೆ ಸದಸ್ಯೆಯಾಗಿ ನೇಮಿಸಲಾಯಿತು. ಸುಷ್ಮಾ ಸ್ವರಾಜ್ ನಂತರ ಈ ಮಂಡಳಿಯಲ್ಲಿ ಸ್ಥಾನ ಪಡೆದ ಎರಡನೇ ಮಹಿಳೆ ಸುಧಾ ಅವರು.

ಸುಧಾ ಯಾದವ್ ಅವರ ರಾಜಕೀಯ ದೃಷ್ಟಿಕೋನವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನುವಾದಿ ಸಿದ್ಧಾಂತವನ್ನು ಅಪ್ಪಿಕೊಂಡಿದೆ.  2022ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ‘ಜಾತಿಗಣತಿ’ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. “ಜಾತಿಗಣತಿ ನಡೆಸಿದರೆ ಸಮಾಜದಲ್ಲಿ ಮತ್ತಷ್ಟು ವಿಭಜನೆ ಉಂಟಾಗುತ್ತದೆ” ಎಂದು ಪ್ರತಿಪಾದಿಸಿದ್ದರು.

ಈ ಲೇಖನ ಓದಿದ್ದೀರಾ?: ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಈಗ, ಅವರನ್ನು ಕರ್ನಾಟಕದ ರಾಜ್ಯಪಾಲೆಯಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಡಿ.ಕೆ ಶಿವಕುಮಾರ್ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಈ ಎರಡು ಪಕ್ಷಗಳ ನಡುವೆ ರಾಜಕೀಯ ಮತ್ತು ಆಡಳಿತಾತ್ಮಕ ವೈರುಧ್ಯಗಳಿವೆ. ಹಿಂದಿನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅವಧಿಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಕೆಲವು ಮಸೂದೆಗಳು ಮತ್ತು ಇತರ ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳು ಬಹಿರಂಗವಾಗಿಯೇ ನಡೆದಿದ್ದವು. ಈಗ, ಕಟ್ಟಾ ಮೋದಿ ಪ್ರಚಾರಕಿ, ಬಿಜೆಪಿ ನಾಯಕಿ ಸುಧಾ ಯಾದವ್ ಅವರನ್ನು ಹೊಸ ರಾಜ್ಯಪಾಲೆಯಾಗಿ ನೇಮಿಸಿರುವುದು, ರಾಜಭವನ–ಸರ್ಕಾರ ನಡುವಿನ ತಿಕ್ಕಾಟ ಮತ್ತಷ್ಟು ಹೆಚ್ಚಬಹುದು ಎಂದೇ ಹೇಳಲಾಗುತ್ತಿದೆ.

ಸುಧಾ ಯಾದವ್ ಅವರು ಇದುವರೆಗೆ ಪ್ರಮುಖವಾಗಿ ಹರಿಯಾಣ ಮತ್ತು ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಹೀಗಾಗಿ, ಕರ್ನಾಟಕದ ಭಾಷಾ ರಾಜಕಾರಣ, ಪ್ರಾದೇಶಿಕ ಹಕ್ಕುಗಳು, ಕೇಂದ್ರ–ರಾಜ್ಯ ಸಂಬಂಧಗಳು ಹಾಗೂ ರಾಜ್ಯದ ಸಾಮಾಜಿಕ ಚಳವಳಿಗಳ ಕುರಿತು ಅವರಿಗೆ ಗ್ರಹಿಕೆ ಇಲ್ಲದಿರುವ ಸಾಧ್ಯತೆಗಳೇ ಹೆಚ್ಚು.

ಇಂತಹ ಸಂದರ್ಭದಲ್ಲಿ ರಾಜ್ಯಪಾಲೆಯಾಗಿ ಅವರು ಕನ್ನಡ ಭಾಷೆ, ರಾಜ್ಯದ ಆಡಳಿತಾತ್ಮಕ ಆದ್ಯತೆಗಳು, ವಿಧಾನಸಭೆಯ ಸಾಂವಿಧಾನಿಕ ಅಧಿಕಾರ ಹಾಗೂ ಚುನಾಯಿತ ಸರ್ಕಾರದ ನಿರ್ಧಾರಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಗಮನಿಸಬೇಕಿದೆ.

ಮುಖ್ಯವಾಗಿ, ರಾಜ್ಯಪಾಲರ ಹುದ್ದೆ ಪಕ್ಷದ ರಾಜಕೀಯ ಹುದ್ದೆಯಲ್ಲ. ಸಂವಿಧಾನದ 163ನೇ ವಿಧಿಯ ಪ್ರಕಾರ, ನಿರ್ದಿಷ್ಟ ವಿವೇಚನಾಧಿಕಾರದ ಸಂದರ್ಭಗಳನ್ನು ಹೊರತುಪಡಿಸಿ, ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕು.

ಆದರೆ, ಮೋದಿ ಆಡಳಿತದಲ್ಲಿ ಬಹುತೇಕ ರಾಜ್ಯಗಳ ರಾಜ್ಯಪಾಲರು ಕೇಂದ್ರ ಸರ್ಕಾರದ ಅಣತಿಯಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಅಜೆಂಡಾಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿರುವಾಗ, ಬಿಜೆಪಿಯ ಪ್ರಬಲ ನಾಯಕಿ ಸುಧಾ ಯಾದವ್ ಅವರು ರಾಜ್ಯಪಾಲೆಯಾಗಿ ಮೋದಿ-ಶಾ ಅಣತಿಯಂತೆಯೇ ಕೆಲಸ ಮಾಡುತ್ತಾರೆ ಎಂಬುದು ಸ್ಪಷ್ಟವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್

ರಾಷ್ಟ್ರಪತಿ ಭವನವು ಸೋಮವಾರ ಹೊರಡಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿಯವರು ಕರ್ನಾಟಕ...

ಹಿರಿಯ ನಾಗರಿಕರಿಗೆ ಮಾನಸಿಕ ಕಿರುಕುಳ ನೀಡಿದರೆ 3 ವರ್ಷ ಜೈಲು: ಕೇರಳಂನಲ್ಲಿ ಹೊಸ ಕಾನೂನು

ವಯೋವೃದ್ಧರ ರಕ್ಷಣೆಗೆ ಮುಂದಾಗಿರುವ ಕೇರಳಂ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು,...

ಬೀದರ್‌ | ಉದ್ಯೋಗಾರ್ಹತೆ ಹೆಚ್ಚಿಸಲು ಐಸಿಟಿ ಅಕಾಡೆಮಿ ತರಬೇತಿ ಸಹಕಾರಿ

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಇಂತಹ ಉದ್ಯೋಗ ಕೌಶಲ್ಯ ತರಬೇತಿ...

ಪಂಜಾಬ್ ಸಿಎಂ ಕಚೇರಿಗೆ ಭ್ರಷ್ಟಾಚಾರದ ನಂಟು: ಸಿಬಿಐ ಎಫ್‌ಐಆರ್ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ (ಒಎಸ್‌ಡಿ) ಬೆಸೆದುಕೊಂಡಿರುವ ಭ್ರಷ್ಟಾಚಾರ...