ದಲಿತ ಯುವಕರ ಮೇಲೆ ದಲಿತ ಸಮುದಾಯದವರಿಂದಲೇ ಅಮಾನವೀಯ ಹಲ್ಲೆ, ಬಾಯಿಗೆ ಮೂತ್ರ ವಿಸರ್ಜನೆ

Date:

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕೂಲಿ ಕಾರ್ಮಿಕರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ, ಮಾರಣಾಂತಿಕವಾಗಿ ಥಳಿಸಿದರಲ್ಲದೆ, ಕುಡಿಯಲು ನೀರು ಕೇಳಿದಾಗ ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ವರದಿಯಾಗಿದೆ. ಹಲ್ಲೆಗೊಳಗಾದವರು ಹಾಗೂ ದೌರ್ಜನ್ಯ ಎಸಗಿದ ಆರೋಪಿಗಳು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

- Advertisement -

ತಾಲ್ಲೂಕಿನ ಪತ್ತೇಪುರ ಗ್ರಾಮದ ನಿವಾಸಿಗಳಾದ ಶ್ರೀಶೈಲ ಹೊಸಮನಿ (31) ಮತ್ತು ಜಗದೀಶ ಹರಿಜನ (35) ಹಲ್ಲೆಗೊಳಗಾದ ಸಂತ್ರಸ್ತರು. ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಪಟ್ಟಣದ ಅಂಬೇಡ್ಕರ್‌ ನಗರದ ನಿವಾಸಿಗಳಾದ ನಾಗೇಶ ಕಟ್ಟಿಮನಿ, ಪರಶುರಾಮ (ಮಾರಿಗುಡಿ), ಪರಶುರಾಮ ಕಟ್ಟಿಮನಿ, ಸಂಜಯ ಕಟ್ಟಿಮನಿ ಹಾಗೂ ರವಿ ಎಂಬ ಐವರ ವಿರುದ್ಧ ಭಾನುವಾರ (ಅ. 11) ತಾಳಿಕೋಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ದೂರಿನಲ್ಲಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್‌ 7ರಂದು ರಾತ್ರಿ 7.20ರ ಸುಮಾರಿಗೆ ತಾಳಿಕೋಟೆಯ ಪ್ರವಾಸಿ ಮಂದಿರದಲ್ಲಿರುವ ಸ್ನೇಹಿತ ಸಂಗಮೇಶ ಬಾಬು ಇಸ್ಲಾಮಪುರ ಎಂಬಾತನನ್ನು ಭೇಟಿಯಾಗಲು ಶ್ರೀಶೈಲ ಹಾಗೂ ಜಗದೀಶ ತೆರಳಿದ್ದರು. ಈ ವೇಳೆ ಅಲ್ಲಿಗಾಗಮಿಸಿದ ಆರೋಪಿಗಳು ಸಣ್ಣ ವಿಚಾರವೊಂದಕ್ಕೆ ಜಗಳ ತೆಗೆದು, ಇಬ್ಬರನ್ನೂ ಪ್ರವಾಸಿ ಮಂದಿರದ ಕೊಠಡಿಯೊಳಗೆ ಕೂಡಿಹಾಕಿದ್ದಾರೆ. ಬಳಿಕ ಬಿದಿರಿನ ದೊಣ್ಣೆಗಳಿಂದ ಮೈಮೇಲೆ ಬಾಸುಂಡೆ ಬರುವಂತೆ ಮನಬಂದಂತೆ ಬಡಿದು, ಬೂಟುಗಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾರೆ.

ತೀವ್ರ ಪೆಟ್ಟುಬಿದ್ದು ಬಾಯಾರಿಕೆಯಿಂದ ನೀರು ಕೇಳಿದಾಗ, ಆರೋಪಿಗಳ ಪೈಕಿ ಪರಶುರಾಮ ಕಟ್ಟಿಮನಿ ಎಂಬಾತ ಸಂತ್ರಸ್ತನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಬಾಯಲ್ಲಿ ನೀರು ತುಂಬಿಕೊಂಡು ಮುಖದ ಮೇಲೆ ಉಗುಳಿ ಅವಮಾನಿಸಿದ್ದಾನೆ. ಮತ್ತೊಬ್ಬ ಸಂತ್ರಸ್ತ ಜಗದೀಶನ ಗಡ್ಡವನ್ನು ಕತ್ತರಿಯಿಂದ ಕತ್ತರಿಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಜೊತೆಗೆ ಇಬ್ಬರ ಮೈಮೇಲಿನ ಬಟ್ಟೆಯನ್ನೆಲ್ಲಾ ಹರಿದುಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಲ್ಲೆಯ ಜೊತೆಗೆ ಸಂತ್ರಸ್ತರನ್ನು ದೋಚಲಾಗಿದೆ. ಜಗದೀಶನ ಪ್ಯಾಂಟ್‌ ಜೇಬಿನಲ್ಲಿದ್ದ ₹1.14 ಲಕ್ಷ ನಗದು, ಕೈಯಲ್ಲಿದ್ದ ಬೆಳ್ಳಿಯ ಬ್ರೇಸ್‌ಲೆಟ್, ಮೊಬೈಲ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಅನ್ನು ಆರೋಪಿಗಳು ಕಸಿದುಕೊಂಡಿದ್ದು, ಮೊಬೈಲ್ ಫೋನ್ ಅನ್ನು ಒಡೆದುಹಾಕಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರೂ ಕಾರ್ಮಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಮನೆಗೆ ಮರಳಿದ್ದಾರೆ. “ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಜ್ಯೋತಿ ಖೋತ್‌ ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿರಿಯ ನಾಗರಿಕರಿಗೆ ಮಾನಸಿಕ ಕಿರುಕುಳ ನೀಡಿದರೆ 3 ವರ್ಷ ಜೈಲು: ಕೇರಳಂನಲ್ಲಿ ಹೊಸ ಕಾನೂನು

ವಯೋವೃದ್ಧರ ರಕ್ಷಣೆಗೆ ಮುಂದಾಗಿರುವ ಕೇರಳಂ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು,...

ಬೀದರ್‌ | ಉದ್ಯೋಗಾರ್ಹತೆ ಹೆಚ್ಚಿಸಲು ಐಸಿಟಿ ಅಕಾಡೆಮಿ ತರಬೇತಿ ಸಹಕಾರಿ

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಇಂತಹ ಉದ್ಯೋಗ ಕೌಶಲ್ಯ ತರಬೇತಿ...

ಪಂಜಾಬ್ ಸಿಎಂ ಕಚೇರಿಗೆ ಭ್ರಷ್ಟಾಚಾರದ ನಂಟು: ಸಿಬಿಐ ಎಫ್‌ಐಆರ್ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ (ಒಎಸ್‌ಡಿ) ಬೆಸೆದುಕೊಂಡಿರುವ ಭ್ರಷ್ಟಾಚಾರ...