ಯುವಜನರ ಉಜ್ವಲ ಭವಿಷ್ಯಕ್ಕೆ ಹೊಸ ದಿಕ್ಸೂಚಿ:’ಬೆಂಗಳೂರು ಕೌಶಲ್ಯ ಶೃಂಗಸಭೆ’ಯ 2ನೇ ಆವೃತ್ತಿಗೆ ಅದ್ಧೂರಿ ಚಾಲನೆ

Date:

ಯುವಜನರನ್ನು ಕೇವಲ ಇಂದಿನ ಉದ್ಯೋಗಗಳಿಗೆ ಮಾತ್ರವಲ್ಲದೆ, ಭವಿಷ್ಯದ (2030ರ) ಅವಕಾಶಗಳಿಗೆ ಸಜ್ಜುಗೊಳಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಕೌಶಲ್ಯಾಭಿವೃದ್ಧಿಯನ್ನು ಕೇವಲ ತರಬೇತಿ ಪಡೆದ ಜನರ ಸಂಖ್ಯೆಯಿಂದ ಅಳೆಯಲಾಗದು; ಬದಲಾಗಿ ಎಷ್ಟು ಯುವಜನರಿಗೆ ಅರ್ಥಪೂರ್ಣ ಉದ್ಯೋಗ ದೊರೆತಿದೆ ಮತ್ತು ಕೈಗಾರಿಕೆಗಳಿಗೆ ಬೇಕಾದ ನಿಜವಾದ ಕೌಶಲ್ಯ ದೊರೆತಿದೆ ಎಂಬುದರ ಮೇಲೆ ಅಳೆಯಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ತಿಳಿಸಿದರು.

- Advertisement -

ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ಯುವಜನರನ್ನು ಸಿದ್ಧಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2026’ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಕೈಗಾರಿಕಾ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಅಂತರ ತಗ್ಗಿಸಲು, ಕೈಗಾರಿಕೆಗಳು ಕೌಶಲ್ಯ ರೂಪಿಸುವಲ್ಲಿ (co-creators of skills) ನೇರ ಪಾಲುದಾರರಾಗಬೇಕು ಎಂದು ಅವರು ಒತ್ತಿ ಹೇಳಿದರು. ಕೇವಲ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಉದ್ಯೋಗ ಅವಕಾಶಗಳನ್ನು ವಿಸ್ತರಿಸಬೇಕು.ಕೌಶಲ್ಯಾಭಿವೃದ್ಧಿಯ ಪ್ರಯೋಜನವು ಎಲ್ಲರಿಗೂ, ಅಂದರೆ ಗ್ರಾಮೀಣ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಅಂಗವಿಕಲರು ಸೇರಿದಂತೆ ಸಮಾಜದ ಎಲ್ಲ ಸ್ತರಗಳಿಗೂ ತಲುಪಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ವಿವರಿಸಿದರು

91230

“ಕೃತಕ ಬುದ್ಧಿಮತ್ತೆ (AI) ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಿಂದ ಉದ್ಯೋಗ ಮಾರುಕಟ್ಟೆ ವೇಗವಾಗಿ ಬದಲಾಗುತ್ತಿದ್ದು, ಭವಿಷ್ಯದ ಅವಕಾಶಗಳಿಗಾಗಿ ಯುವಜನರನ್ನು ಸಜ್ಜುಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ,.ಈ ಶೃಂಗಸಭೆಯು ಯುವಜನರು, ಉದ್ಯಮ ರಂಗ ಹಾಗೂ ಜಾಗತಿಕ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಮುಖ ಕಾರ್ಯಕ್ರಮವಾಗಿದೆ.

ಕೇವಲ ತರಬೇತಿ ಪಡೆದವರ ಸಂಖ್ಯೆಗಿಂತ, ಎಷ್ಟು ಯುವಜನರಿಗೆ ಗುಣಮಟ್ಟದ ಹಾಗೂ ಅರ್ಥಪೂರ್ಣ ಉದ್ಯೋಗ ದೊರಕಿದೆ ಎಂಬುದು ನಮಗೆ ಹೆಚ್ಚು ಮುಖ್ಯವಾಗಿದೆ. ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು, ಕೈಗಾರಿಕೆಗಳ ನೇರ ಸಹಭಾಗಿತ್ವದೊಂದಿಗೆ ಯುವಜನರಿಗೆ ಅಗತ್ಯ ಕೌಶಲ್ಯ ಒದಗಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕರ್ನಾಟಕವು ಪ್ರಪಂಚದ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದು, 400ಕ್ಕೂ ಹೆಚ್ಚು ಆರ್&ಡಿ ಕೇಂದ್ರಗಳನ್ನು ಹಾಗೂ ದೇಶದ ಶೇ. 40ಕ್ಕೂ ಹೆಚ್ಚು ಆರ್&ಡಿ ಪ್ರತಿಭೆಗಳನ್ನು ಹೊಂದಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಕೇಂದ್ರಗಳು, ಶೇ. 70ರಷ್ಟು ಚಿಪ್ ವಿನ್ಯಾಸಕರು ಮತ್ತು 1,100ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕಾರ್ಯನಿರ್ವಹಿಸುತ್ತಿದ್ದು, ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ವಿಚಾರದಲ್ಲಿ ಕರ್ನಾಟಕವು ಜಗತ್ತಿನಲ್ಲಿ 8ನೇ ಸ್ಥಾನದಲ್ಲಿದೆ ಎಂದರು.

​ಐಟಿ, ಜೈವಿಕ ತಂತ್ರಜ್ಞಾನ, ಇಎಸ್‌ಡಿಎಂ, ಎವಿಜಿಸಿ, ಸೈಬರ್ ಭದ್ರತೆ, ಸ್ಪೇಸ್ ಟೆಕ್, ಜಿಸಿಸಿ ಮತ್ತು ಕೌಶಲ್ಯಾಭಿವೃದ್ಧಿಯಂತಹ ಅನೇಕ ಪ್ರಮುಖ ನೀತಿಗಳನ್ನು ರೂಪಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ನೂತನ ಕೌಶಲ್ಯಾಭಿವೃದ್ಧಿ ನೀತಿಗಾಗಿ 4,425 ಕೋಟಿ ರೂ. ಮೀಸಲಿಡಲಾಗಿದ್ದು, ಉತ್ತಮ ಗಾರ್ಡನರ್‌ನಿಂದ ಹಿಡಿದು ಕ್ವಾಂಟಮ್ ರಿಸರ್ಚ್ ಇಂಜಿನಿಯರ್‌ವರೆಗೆ ಕೆಳಹಂತದಿಂದ ಉನ್ನತ ಹಂತದವರೆಗಿನ ಎಲ್ಲರಿಗೂ ತರಬೇತಿ ನೀಡುವ ಸಮಗ್ರ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ವಿಷನ್ ಗ್ರೂಪ್ ಅಧ್ಯಕ್ಷರಾದ ಸುಬ್ರತೋ ಬಾಗ್ಚಿ ಮಾತನಾಡಿ, ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲು ಕೇವಲ ಬೌದ್ಧಿಕ ಸಾಮರ್ಥ್ಯವಿದ್ದರೆ ಸಾಲದು, ಯುವಜನರಿಗೆ ಪ್ರಾಯೋಗಿಕ ಜ್ಞಾನ ಮತ್ತು ಶಿಸ್ತನ್ನು ಕಲಿಸುವ ವ್ಯವಸ್ಥಿತ ಮಾರ್ಗದರ್ಶನದ ಹಾಗೂ ನಾಯಕತ್ವದ ಅಗತ್ಯವಿದೆ ಎಂದು ಅವರು ವಿವರಿಸಿದರು. ದೇಶದ ಅಭಿವೃದ್ಧಿಗೆ ಐಐಟಿ (IIT) ಮತ್ತು ಐಟಿಐ (ITI) ಎಂಬ ಎರಡು ಕಣ್ಣುಗಳು ಸಮಾನವಾಗಿ ಕಾರ್ಯನಿರ್ವಹಿಸಬೇಕು ಎಂದ ಅವರು, ಕೌಶಲ್ಯ ತರಬೇತಿಯನ್ನು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ನೋಡದೆ ಆರ್ಥಿಕ ಪರಿವರ್ತನೆಯ ಅಸ್ತ್ರವಾಗಿ ಬೆಳೆಸಬೇಕು ಎಂದು ಒತ್ತಿ ಹೇಳಿದರು.

91231

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಎಂ. ಬಿ. ಪಾಟೀಲ್ ಅವರು ಮಾತನಾಡಿ, ಕರ್ನಾಟಕವು ದೇಶದ ಆರ್ಥಿಕತೆಯ ಪ್ರಮುಖ ಶಕ್ತಿಯಾಗಿ ಮುಂದುವರಿದಿದ್ದು, ಕಳೆದ ವರ್ಷ 13 ಶತಕೋಟಿ ಡಾಲರ್‌ನಷ್ಟು ವಿದೇಶಿ ನೇರ ಹೂಡಿಕೆಯನ್ನು (FDI) ಆಕರ್ಷಿಸಿದೆ. 2032 ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯೊಂದಿಗೆ ಜಿಎಸ್‌ಡಿಪಿ (GSDP) ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರ ಸಕ್ರಿಯವಾಗಿ ಶ್ರಮಿಸುತ್ತಿದೆ ಎಂದರು.

2025-2030ರ ಹೊಸ ಕೈಗಾರಿಕಾ ನೀತಿಯು 7.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸುವ ಹಾಗೂ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಪ್ರಸ್ತುತ, ಈ ಗುರಿಯ ಶೇ. 75 ರಷ್ಟು ಹೂಡಿಕೆ ಪ್ರಸ್ತಾವನೆಗಳು ಈಗಾಗಲೇ ಸರ್ಕಾರಕ್ಕೆ ಸ್ವೀಕೃತವಾಗಿರುವುದು ರಾಜ್ಯದ ಬಂಡವಾಳ ಆಕರ್ಷಣೆಯ ಸಾಮರ್ಥ್ಯವನ್ನು ಎತ್ತಿತೋರಿಸುತ್ತದೆ.ಕೈಗಾರಿಕಾ ವಿಸ್ತರಣೆ ಮತ್ತು ನವೀನ ತಂತ್ರಜ್ಞಾನದ ಅಳವಡಿಕೆಯ ಭಾಗವಾಗಿ, ರಾಜ್ಯದಲ್ಲಿ ಪ್ರಸ್ತುತ 1000 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಮತ್ತು 750 ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಬೃಹತ್ ಸಂಸ್ಥೆಗಳ ಮೂಲಕ 1.2 ಮಿಲಿಯನ್ (12 ಲಕ್ಷ) ನೇರ ಹಾಗೂ 3.1 ಮಿಲಿಯನ್ (31 ಲಕ್ಷ) ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ಆರ್ಥಿಕತೆಗೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳನ್ನು ಪ್ರಸ್ತಾಪಿಸಿದ ಕೆಎಸ್‌ಡಿಸಿ (KSDC) ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯ್ಕ್ ಅವರು, ಈ ವರ್ಷ ಯುವಜನರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯಮಗಳೊಂದಿಗೆ (Industry linkage) ಜೋಡಣೆಯೇ ನಮ್ಮ ಪ್ರಮುಖ ಗುರಿ ಎಂದರು. ಕೇವಲ ತರಬೇತಿ ನೀಡುವುದಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಅವರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಖಾತರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಹಾಗೂ ನಿಗಮವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಸ್ಕಿಲ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ, ದೇಶದ ಕೌಶಲ್ಯ ಭೂಪಟದಲ್ಲಿ ತನ್ನದೇ ಛಾಪು ಮೂಡಿಸಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಇಂಡಿಯಾ ಸ್ಕಿಲ್ಸ್’ ಸ್ಪರ್ಧೆಯಲ್ಲಿ ವಿಜೇತರಾದ ರಾಜ್ಯದ ಪ್ರತಿಭಾವಂತ ಯುವಜನರಿಗೆ ಇದೇ ವೇದಿಕೆಯಲ್ಲಿ ನಗದು ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಬಸವರಾಜ ರಾಯರೆಡ್ಡಿ ಹಾಗೂ ರಿಜ್ವಾನ್ ಅರ್ಷದ್,ಕೆಎಸ್‌ಡಿಎ ಅಧ್ಯಕ್ಷರಾದ ಡಾ. ಇ. ವಿ. ರಮಣ ರೆಡ್ಡಿ, ಬಾಷ್ ಇಂಡಿಯಾದ ಗುರುಪ್ರಸಾದ್ ಮುಡ್ಲಾಪುರ, ಲ್ಯಾಮ್ ರಿಸರ್ಚ್‌ನ ರಂಗೇಶ್ ರಾಘವನ್, ಕೆಎಸ್‌ಡಿಸಿ ಎಂಡಿ ಡಾ. ರವಿ ಎಂ. ತಿರ್ಲಾಪೂರ ಸೇರಿದಂತೆ ಆಯೋಜಕ ಟ್ರೆಸ್ಕಾನ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಕಾರ್ಯಕ್ರಮದಲ್ಲಿ 6,500 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಉದಯೋನ್ಮುಖ ಕೌಶಲ್ಯಗಳು (Emerging Skills), ಎಲ್ಲರಿಗೂ ಕೌಶಲ್ಯಗಳು (Skills for All), ನವೀನತೆ (Innovation), ಹಾಗೂ ಜಾಗತಿಕ ಕೌಶಲ್ಯಗಳು (Global Skills) ಎಂಬ ನಾಲ್ಕು ಮುಖ್ಯ ಭಾಗಗಳಲ್ಲಿ ವಿಸ್ತಾರವಾದ ಚರ್ಚೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ

ಯುವಜನರಿಗೆ ನೇರವಾಗಿ ಉದ್ಯೋಗದಾತರೊಂದಿಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ನವೆಂಬರ್ 5 ರಂದು ‘ಯುವ ಉದ್ಯೋಗ ಸೇತು’ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಮಹತ್ವದ ಪೋರ್ಟಲ್ ಅನ್ನು ಲೋಕಾರ್ಪಣೆ ಮಾಡಲಿದ್ದು, ಇದು ಉದ್ಯೋಗಾಕಾಂಕ್ಷಿಗಳು ಹಾಗೂ ಕೈಗಾರಿಕೆಗಳ ನಡುವಿನ ಅಂತರವನ್ನು ನಿವಾರಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.ಇದು ಉದ್ಯೋಗಾಕಾಂಕ್ಷಿಗಳು ಮತ್ತು ಕೈಗಾರಿಕೆಗಳನ್ನು ಬೆಸೆಯುವ 100 ದಿನಗಳ ಕಾರ್ಯಕ್ರಮವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

36 ಗಂಟೆಗಳ ಸ್ಥಗಿತದ ಬಳಿಕ ಯಥಾಸ್ಥಿತಿಗೆ ಮರಳಿದ ಮೈಕ್ರೋಸಾಫ್ಟ್: ಔಟ್‌ಲುಕ್, ಟೀಮ್ಸ್ ಸೇವೆಗಳ ಯಶಸ್ವಿ ಮರುಸ್ಥಾಪನೆ

ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳನ್ನು ತೀವ್ರವಾಗಿ...

ಖರ್ಗೆ ಗಾಂಭೀರ್ಯವುಳ್ಳ ವ್ಯಕ್ತಿ; ಅವರು ಅಧ್ಯಕ್ಷರಾದಾಗ ನನಗೆ ಅತೀವ ನಿರಾಳವಾಯಿತು: ಆತ್ಮಕಥೆಯಲ್ಲಿ ಸೋನಿಯಾ ಬಣ್ಣನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು "ಗಾಂಭೀರ್ಯವುಳ್ಳ ವ್ಯಕ್ತಿ" (man with...

UGC-NET ಕೀ-ಉತ್ತರ ವಿವಾದ; 4 ಪ್ರಶ್ನೆಗಳ ಮರುಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶ!

ಸ್ಪರ್ಧಾತ್ಮಕ ಪರೀಕ್ಷೆಗಳ ಕೀ-ಉತ್ತರಗಳ ವಿವಾದಗಳಲ್ಲಿ ನ್ಯಾಯಾಂಗದ ಸಂಯಮವು ಸಂಪೂರ್ಣವಾದುದಲ್ಲ. ಯಾವುದೇ ತರ್ಕ...