ತಕ್ಷಣ ಬೇಷರತ್ತಾಗಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೊಳಿಸಿ: ಮಹಿಳಾ ಸಂಘಟನೆಗಳ ಆಗ್ರಹ

Date:

ಸಂವಿಧಾನದ 106ನೇ ತಿದ್ದುಪಡಿ 2023ರ ಮೂಲಕ ತರಲಾದ ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಕಾಯ್ದೆ, 2023) ಅನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಮತ್ತು ಅದರ ಅನುಷ್ಠಾನವನ್ನು ವಿಳಂಬಗೊಳಿಸುತ್ತಿರುವ ಬಗ್ಗೆ ‘ಮಹಿಳಾ ಮೀಸಲಾತಿಗಾಗಿ ರಾಷ್ಟ್ರೀಯ ಮೈತ್ರಿಕೂಟ’ (NCWR) – ಕರ್ನಾಟಕ ತೀವ್ರ ಕಳವಳ ವ್ಯಕ್ತಪಡಿಸಿದೆ. NCWR ಅಭಿಯಾನಕ್ಕೆ ಕರ್ನಾಟಕದ ಮಹಿಳಾ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ಪ್ರಗತಿಪರ ಚಿಂತಕರು ಕೈಜೋಡಿಸಿದ್ದಾರೆ.

- Advertisement -

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಪ್ರಾತಿನಿಧ್ಯಕ್ಕಾಗಿ ಕಳೆದ ಸುಮಾರು ಮೂರು ದಶಕಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಆದರೆ ಪ್ರಸ್ತುತ ರೂಪದಲ್ಲಿರುವ ಈ ಕಾಯ್ದೆಯು ತಕ್ಷಣದ ಸಬಲೀಕರಣದ ಬದಲು ಕೇವಲ ಒಂದು ಖಾಲಿ ಭರವಸೆಯಂತೆ ಕಾಣುತ್ತಿದೆ. ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಭವಿಷ್ಯದ ಜನಗಣತಿ ಮತ್ತು ವಿವಾದಾತ್ಮಕ ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಷನ್) ಪ್ರಕ್ರಿಯೆಯೊಂದಿಗೆ ಸ್ಪಷ್ಟವಾಗಿ ಜೋಡಿಸುವ ಮೂಲಕ, ಕೇಂದ್ರ ಸರ್ಕಾರವು ಮಹಿಳೆಯರ ರಾಜಕೀಯ ಹಕ್ಕುಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಂತಾಗಿದೆ ಎಂದು NCWR ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನೂ ಓದಿ: ದಾವಣಗೆರೆ | ಸೌಜನ್ಯ ಇತರ ಸಂತ್ರಸ್ತ ಮಹಿಳೆಯರ ಕೊಂದವರು ಯಾರು? ಮಹಿಳಾ ಸಂಘಟನೆಗಳ ಹೋರಾಟ

ಇತ್ತೀಚೆಗೆ ಏಪ್ರಿಲ್ 16, 2026ರಂದು ಸರ್ಕಾರವು ಕೈಗೊಂಡ ಶಾಸನಾತ್ಮಕ ಕ್ರಮಗಳಿಂದಾಗಿ ಈ ಜಾಗೃತಿ ಮತ್ತು ಸಂಘಟನೆಯ ತುರ್ತು ಮತ್ತಷ್ಟು ಹೆಚ್ಚಾಗಿದೆ. ಸರ್ಕಾರವು 2023ರ ಕಾಯ್ದೆಯನ್ನು ಸಂವಿಧಾನದ (131 ನೇ ತಿದ್ದುಪಡಿ) ವಿಧೇಯಕ ಸೇರಿದಂತೆ ಕೇಂದ್ರೀಕರಣಗೊಳಿಸುವ ಇತರ ಕಾನೂನುಗಳ ಸರಣಿಯೊಂದಿಗೆ ಜೋಡಿಸಲು ಅತ್ಯಂತ ಗಡಿಬಿಡಿಯಲ್ಲಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲು ಯತ್ನಿಸಿತ್ತು. ಅಲ್ಲದೆ, ಇದನ್ನು 2026ರ ನಂತರದ ಜನಗಣತಿಯಿಂದ ಮುಕ್ತಗೊಳಿಸುವ (ಡಿಕಪ್ಲಿಂಗ್) ಮೂಲಕ ಮತ್ತು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ವಿಸ್ತರಿಸುವ ಮೂಲಕ ಮಾಡಲು ಕೇಂದ್ರ ಮುಂದಾಗಿತ್ತು. ಮಹಿಳೆಯರ ಹಕ್ಕುಗಳನ್ನು ಸಂಸತ್ತಿನ ಸ್ಥಾನಗಳ ವಿಸ್ತರಣೆಯೊಂದಿಗೆ ಜೋಡಿಸುವುದು ಭಾರತೀಯ ಒಕ್ಕೂಟ ವ್ಯವಸ್ಥೆಯ ಮೂಲ ರಚನೆಗೆ ಧಕ್ಕೆ ತರುತ್ತದೆ ಮತ್ತು ಉತ್ತರ-ದಕ್ಷಿಣ ರಾಜ್ಯಗಳ ನಡುವೆ ತೀವ್ರ ಪ್ರಾತಿನಿಧ್ಯದ ಅಸಮತೋಲನವನ್ನು ಸೃಷ್ಟಿಸುತ್ತದೆ ಎಂಬುದನ್ನು ಗುರುತಿಸಿ, ಈ ನಿರ್ಣಯವನ್ನು ಯಶಸ್ವಿಯಾಗಿ ಪ್ರತಿರೋಧಿಸಿದ ಪ್ರಜಾಪ್ರಭುತ್ವ ಶಕ್ತಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಮಹಿಳಾ ಸಂಘಟನೆಗಳು ಹೇಳಿದೆ.

ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, NCWR-ಕರ್ನಾಟಕವು ರಾಜ್ಯಾದ್ಯಂತ ಸಾರ್ವಜನಿಕ ಸಮಾಲೋಚನೆ ಮತ್ತು ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತರುವ ಆಗ್ರಹ ಮುಂದಿಡಲು, ಲಭ್ಯವಿರುವ ಎಲ್ಲ ವೇದಿಕೆಗಳಲ್ಲಿ ಮೌನ ವಹಿಸದೆ ಧ್ವನಿ ಎತ್ತಬೇಕು ಮತ್ತು ಸಂಸತ್ತಿನಲ್ಲಿ ವ್ಯವಸ್ಥಿತ ಹಾಗೂ ಗಂಭೀರ ಚರ್ಚೆಗೆ ಒತ್ತಾಯಿಸಬೇಕೆಂದು ರಾಜ್ಯದ ಎಲ್ಲ ಸಂಸದೆಯರು-ಸಂಸದರು (MPs) ಮತ್ತು ಶಾಸಕಿಯರು-ಶಾಸಕರಿಗೆ (MLAs) NCWR ಕರೆ ನೀಡಿದೆ.

women1 2

ಸಮಾಲೋಚನಾ ಸಭೆಯ ನಿರ್ಣಯ:

ಯಾವುದೇ ಷರತ್ತುಗಳಿಲ್ಲದೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂಬ ನಿಟ್ಟಿನಲ್ಲಿ, ಕರ್ನಾಟಕ ವಿಧಾನಸಭೆಯ ಮುಂಬರುವ ಮುಂಗಾರು ಅಧಿವೇಶನದಲ್ಲಿ ಸ್ಪಷ್ಟವಾದ ನಿರ್ಣಯವನ್ನು ಅಂಗೀಕರಿಸುವಂತೆ ಒತ್ತಾಯಿಸಲು ಈ ತಂಡದ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಹಾಗೂ ಸರ್ಕಾರದ ಇತರ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ.

ಪ್ರಮುಖ ಬೇಡಿಕೆಗಳು:

ತಕ್ಷಣದ ಅನುಷ್ಠಾನ: ಮಹಿಳಾ ಮೀಸಲಾತಿ ಕಾಯ್ದೆ, 2023 ಅನ್ನು ತಕ್ಷಣವೇ ಜಾರಿಗೆ ತರಬೇಕು.

ಇತರ ನಿಬಂಧನೆಗಳಿಂದ ಮುಕ್ತಗೊಳಿಸಬೇಕು: ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ (ಡೆಲಿಮಿಟೇಷನ್) ನಿಬಂಧನೆಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು (ಡಿಲಿಂಕ್ ಮಾಡಬೇಕು) ಎಂದು ನಾವು ಒತ್ತಾಯಿಸುತ್ತೇವೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ : ಬಿಜೆಪಿಯ ಪಾಲಿಟಿಕಲ್‌ ಮಾರ್ಕೆಟಿಂಗ್‌ ತಂತ್ರ

ಈ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಆಳವಾದ ಕಳವಳವನ್ನು NCWR ವ್ಯಕ್ತಪಡಿಸಿದೆ.

“ಮಹಿಳಾ ಸಬಲೀಕರಣದ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಸಂಸದೀಯ ಸ್ಥಾನಗಳ ವಿಸ್ತರಣೆಯನ್ನು ಬಲವಂತವಾಗಿ ಹೇರಬಾರದು. ಪ್ರಾತಿನಿಧ್ಯದ ಯಾವುದೇ ರೀತಿಯ ಮರುರಚನೆಯು ರಾಜ್ಯಗಳು ಮತ್ತು ಎಲ್ಲಾ ಪಾಲುದಾರರನ್ನು ಒಳಗೊಂಡ ಸ್ವತಂತ್ರ, ಪಾರದರ್ಶಕ ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕವೇ ನಡೆಯಬೇಕು” ಎಂದು ಒತ್ತಾಯಿಸಿದೆ.

“ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವ, ಒಕ್ಕೂಟ ಸಮತೋಲನವನ್ನು ಹಾಳುಗೆಡವುವ ಅಥವಾ ಅಧಿಕಾರವನ್ನು ಕೇಂದ್ರೀಕರಿಸುವ ಪ್ರಕ್ರಿಯೆಗಳನ್ನು ಜನರ ಮುಂದೆ ಮಾನ್ಯಗೊಳಿಸುವುದಕ್ಕಾಗಿ, ಮಹಿಳಾ ಮೀಸಲಾತಿಯ ಈ ಐತಿಹಾಸಿಕ ಹೋರಾಟವನ್ನು ದುರುಪಯೋಗ ಪಡಿಸಿಕೊಳ್ಳಬಾರದು” ಎಂದು ಹೇಳಿದೆ.

“33% ಮಹಿಳಾ ಸ್ಥಾನಗಳನ್ನು ಗುರುತಿಸಲು ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಬೇಕು. ಮೀಸಲು ಸ್ಥಾನಗಳನ್ನು ಗುರುತಿಸುವ ಪ್ರಕ್ರಿಯೆಯು ಕೇಂದ್ರೀಕೃತ ನಿರ್ಧಾರವಾಗಬಾರದು. ಇದು ರಾಜ್ಯಗಳು, ಸಮುದಾಯಗಳು ಮತ್ತು ಮಹಿಳಾ ಸಂಘಟನೆಗಳನ್ನು ಒಳಗೊಂಡಿರಬೇಕು; ಹಾಗೆಯೇ ತೀರಾ ವಂಚಿತರಾದ ಮಹಿಳೆಯರ—ಅಂದರೆ ಈಗಾಗಲೇ ಸಾಂವಿಧಾನಿಕವಾಗಿ ಮೀಸಲಾತಿಯ ಚೌಕಟ್ಟಿನಲ್ಲಿರುವ ದಲಿತ ಮತ್ತು ಆದಿವಾಸಿ ಸಮುದಾಯಗಳ ಮಹಿಳೆಯರ ಹೊರತಾಗಿ ಹೊರಗುಳಿದಿರುವ ಒಬಿಸಿ (OBC), ಅಲ್ಪಸಂಖ್ಯಾತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಇತರ ಅಂಚಿನಲ್ಲಿರುವ ಮಹಿಳೆಯರ—ಅರ್ಥಪೂರ್ಣ ಪ್ರಾತಿನಿಧ್ಯವನ್ನು ಖಾತರಿಪಡಿಸಬೇಕು” ಎಂದು ಆಗ್ರಹಿಸಿದೆ.

“ಪಂಚಾಯತ್‌ ರಾಜ್‌ ಕಾಯ್ದೆಯ 73-74ರ ತಿದ್ದುಪಡಿಯಿಂದ ರೂಪುಗೊಂಡ ಹೊಸ ಮಾದರಿಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನಿರ್ಧರಿಸುವ ಕೆಲವು ಮಾದರಿಗಳು ಈಗಾಗಲೇ ಅಸ್ತಿತ್ವದಲ್ಲಿವೆ, ಇದನ್ನು ತಳಹದಿಯಾಗಿ ಪರಿಗಣಿಸಿ, ಅದನ್ನು ಇನ್ನಷ್ಟು ವಿಸ್ತರಿಸಿ ಧಾರ್ಮಿಕ ಅಲ್ಪಸಂಖ್ಯಾತರು, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮೊದಲಾದ ಎಲ್ಲರಿಗೂ ಅದು ಅನ್ವಯಿಸುವಂತೆ ಸುಧಾರಿಸುವ ಪ್ರಯತ್ನ ಅಗತ್ಯವಾಗಿದೆ” ಎಂದು ಅಭಿಪ್ರಾಯಿಸಿದೆ.

“ಸರಿಯಾದ ರಕ್ಷಣಾತ್ಮಕ ಕ್ರಮಗಳು ಇಲ್ಲದಿದ್ದರೆ, ಮಹಿಳಾ ಮೀಸಲಾತಿಯು ಕೇವಲ ಜಾತಿ, ವರ್ಗ ಮತ್ತು ರಾಜಕೀಯ ಪ್ರಭಾವದ ಮೂಲಕ ಈಗಾಗಲೇ ಸೌಲಭ್ಯಗಳನ್ನು ಹೊಂದಿರುವ ವರ್ಗಕ್ಕೆ ಮಾತ್ರ ಪ್ರಯೋಜನವನ್ನು ನೀಡುವ ಅಪಾಯವಿರುತ್ತದೆ. ಇದು ಹಾಲಿ ಇರುವ ಅಧಿಕಾರ ರಚನೆಗಳನ್ನು ಬದಲಾಯಿಸುವ ಬದಲು, ಅವುಗಳನ್ನೇ ಮತ್ತೊಮ್ಮೆ ಮರುಸೃಷ್ಟಿಸಲು ಕಾರಣವಾಗುತ್ತದೆ” ಎಂದು ಹೇಳಿದೆ.

“ಮಹಿಳಾ ಮೀಸಲಾತಿ ಕಾಯ್ದೆ 2023ನ್ನು ಯಾವುದೇ ವಿಳಂಬವಿಲ್ಲದೆ ಮತ್ತು ಇನ್ನಿತರ ನಿಬಂಧನೆಗಳಿಲ್ಲದೆ ಜಾರಿಗೊಳಿಸುವಂತೆ ಒತ್ತಡ ಹೇರುವ ಕೆಲಸ ಜನಪ್ರತಿನಿಧಿಗಳಿಂದಲೇ ಮೊದಲಾಗಬೇಕು. ಅದಕ್ಕಾಗಿ, ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ ಮತ್ತು ‘ಮಹಿಳಾ ಮೀಸಲಾತಿಗಾಗಿ ರಾಷ್ಟ್ರೀಯ ಒಕ್ಕೂಟ’ (NCWR) – ಕರ್ನಾಟಕದ ವತಿಯಿಂದ ಎಲ್ಲ ಸಂಸದರು, ಸಚಿವರು, ಶಾಸಕರು, ಜಾತ್ಯತೀತ ಪಕ್ಷಗಳ ಪದಾಧಿಕಾರಿಗಳು, ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು ಮೊದಲಾಗಿ ಎಲ್ಲರನ್ನೂ ಸಂಪರ್ಕಿಸುತ್ತೇವೆ, ವಿಶೇಷವಾಗಿ ಮಹಿಳಾ ಪ್ರತಿನಿಧಿಗಳನ್ನು ಈ ವಿಚಾರದಲ್ಲಿ ಮುಂದಾಳತ್ವ ವಹಿಸುವಂತೆ ಮನವರಿಕೆ ಮಾಡುವ ಕೆಲಸವನ್ನು ತಕ್ಷಣದಲ್ಲಿ ಆರಂಭಿಸುತ್ತೇವೆ” ಎಂದು ಮಹಿಳಾಪರ ಹೋರಾಟಗಾರರು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...