ಲಂಬಾಣಿಗಳು ಅಲೆಮಾರಿಗಳಲ್ಲ, 5% ಗುಳುಂ ಮಾಡಲು ಯತ್ನಿಸದಿರಿ: ಎಸ್‌. ಮಾರೆಪ್ಪ

Date:

"ಅಲೆಮಾರಿಗಳಿಗೆ ನೀಡಲಾಗಿದ್ದ ಒಂದು ಪರ್ಸೆಂಟ್ ಮೀಸಲಾತಿಯನ್ನು ಅಕ್ರಮ ಮಾರ್ಗದಿಂದ ಕಸಿದುಕೊಳ್ಳಲಾಗಿದೆ" ಎಂದು ಜಸ್ಟಿಸ್ ನಾಗಮೋಹನ ದಾಸ್ ಆಯೋಗದೊಂದಿಗೆ ಕೆಲಸ ಮಾಡಿರುವ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

“ಲಂಬಾಣಿಗಳು ತಮ್ಮನ್ನು ಅಲೆಮಾರಿಗಳೆಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ನೀವು 36,000 ಉದ್ಯೋಗಗಳನ್ನು ಪಡೆದುಕೊಂಡಿದ್ದೀರಿ, ಹೇಗೆ ಅಲೆಮಾರಿಗಳಾಗುತ್ತೀರಿ? ಅಲೆಮಾರಿಗಳಲ್ಲಿ 600ಕ್ಕೂ ಹೆಚ್ಚು ಜನ ಉದ್ಯೋಗ ಪಡೆದಿಲ್ಲ. ಈಗಲೂ 12 ಅಲೆಮಾರಿ ಸಮುದಾಯಗಳು ಒಂದೇ ಒಂದು ಸವಲತ್ತನ್ನೂ ತೆಗೆದುಕೊಂಡಿಲ್ಲ” ಎಂದು ಒಳಮೀಸಲಾತಿ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು.

- Advertisement -

ಕರ್ನಾಟಕದ ಒಳಮೀಸಲಾತಿ ವಂಚಿತ 49 ಅಲೆಮಾರಿ ಮತ್ತು 10 ಸೂಕ್ಷ್ಮ ಸಮುದಾಯಗಳ  ಐಕ್ಯ ಸಂಘಟನೆಯಾಗಿ ಹೊಮ್ಮಿರುವ ‘ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ’ವು ಇಂದು (ಬುಧವಾರ) ಹಮ್ಮಿಕೊಂಡಿದ್ದ ‘ಬೆಂಗಳೂರು ಚಲೋ- ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

“ಲಂಬಾಣಿಗಳು ಅಲೆಮಾರಿಗಳಲ್ಲ. ಅಲೆಮಾರಿಗಳಿಗೂ ನಿಮಗೂ ಸಂಬಂಧವಿಲ್ಲ. ನೀವು ಅಡವಿಯಲ್ಲಿ ಇದ್ದಿರಬಹುದು. ನಿಮಗೆ ಸಂಪತ್ತು, ಭೂಮಿ, ಹಣ್ಣು-ಹಂಪಲು ಇತ್ತು. ನೀವು ಅಲೆಮಾರಿಗಳಾಗಲ್ಲ. ನಾವು ಅಲೆಮಾರಿಗಳೆಂದು ಹೇಳಿಕೊಂಡು ಐದು ಪರ್ಸೆಂಟ್ ಗುಳುಂ ಮಾಡಲು ಪ್ರಯತ್ನಿಸಬೇಡಿ” ಎಂದು ಎಚ್ಚರಿಸಿದರು.

“ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಅಲೆಮಾರಿಗಳಿಗೆ ಪಾಲು ಸಿಗುತ್ತದೆ ಎಂದು ಭಾವಿಸಬಾರದು. ಅಷ್ಟು ಸುಲಭವಾಗಿ ಅಲೆಮಾರಿಗಳ ಹಕ್ಕು ದೊರಕುವುದಿಲ್ಲ. ಹೆಚ್ಚಿನ ಜನಸಂಖ್ಯೆ ಇದ್ದರೂ ಮಾದಿಗರು 30 ವರ್ಷ ಹೋರಾಟ ಮಾಡಿದರು. ಈ ಹೋರಾಟ ದೀರ್ಘಕಾಲೀನವಾಗಿ ಇರಬೇಕು. ಚಳಿಗಾಲದ ಅಧಿವೇಶನದವರೆಗೂ ಹೋರಾಟ ಸತತವಾಗಿ ನಡೆಯಬೇಕು. ಖಂಡಿತವಾಗಿಯೂ ಇದು ಸಾಧ್ಯವಿದೆ. ದಿನನಿತ್ಯ ಅನುಭವಿಸುವ ಕಷ್ಟದ ಮುಂದೆ ಈ ಮೂರು ತಿಂಗಳ ಸಂಕಷ್ಟ ಏನೂ ಅಲ್ಲ” ಎಂದು ಅಭಿಪ್ರಾಯಪಟ್ಟರು.

Alemari 4 3

ಇದನ್ನೂ ಓದಿರಿ: ‘ನ್ಯಾಯ ಸಿಗದೆ ಬೆಂಗಳೂರು ತೊರೆಯುವುದಿಲ್ಲ’: ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟ ಘೋಷಣೆ

ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಅವರ ಆಯೋಗದಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್‌ ಮಾತನಾಡಿ, “ಅಲೆಮಾರಿಗಳಿಗೆ ಒಂದು ಪರ್ಸೆಂಟ್‌ಗಿಂತ ಹೆಚ್ಚು ಸಿಗಬೇಕಿತ್ತು. ಆದರೆ ಒಂದಕ್ಕಿಂತ ಹೆಚ್ಚು ಕೊಟ್ಟರೆ ತಾಂತ್ರಿಕ ಕಾರಣದಿಂದ ಉಳಿಯುವುದಿಲ್ಲ ಎಂದು ನಾಗಮೋಹನ ದಾಸ್ ಅವರು ನಿರ್ಧರಿಸಿ ಒಂದು ಪರ್ಸೆಂಟ್ ಕೊಟ್ಟರು. ಆದರೆ ಆ ಒಂದು ಪರ್ಸೆಂಟ್ ಮೀಸಲಾತಿಯನ್ನು ಅಕ್ರಮ ಮಾರ್ಗದಿಂದ ಕಸಿದುಕೊಳ್ಳಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಈ ರೀತಿಯ ಸಂದರ್ಭ ಸೃಷ್ಟಿ ಮಾಡಿರುವ ಸರ್ಕಾರಕ್ಕೆ ಮತ್ತು ಕ್ಯಾಬಿನೆಟ್‌ಗೆ ಅವಮಾನ ಆಗಬೇಕು. ಈ ಸಂದರ್ಭದಲ್ಲಿ ನಮಗೂ ನಾಚಿಕೆ ಆಗಬೇಕು. ಯಾಕೆಂದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಈ ಸರ್ಕಾರದ ಪರವಾಗಿ ನಾವು ವಕಾಲತ್ತು ವಹಿಸಿದ್ದೇವೆ. ಅಲೆಮಾರಿಗಳು ಬೀದಿಗೆ ಬರಲು ನಾವು ಕಾರಣವಾಗಿದ್ದೇವೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಅಲೆಮಾರಿಗಳ ಒಗ್ಗಟ್ಟು ಪ್ರದರ್ಶನ; ಒಳಮೀಸಲಾತಿಗಾಗಿ ಹರಿದುಬಂದ ಹೋರಾಟದ ಸಾಗರ

ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರು ಟೆಂಟ್‌ಗಳ ಟೇಪ್ ಕಪ್ ಮಾಡುವ ಮೂಲಕ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿದರು. ದೊಂಬರು ಸಮುದಾಯದ ಪ್ರೊ. ಎ.ಎಸ್.ಪ್ರಭಾಕರ, ಬುಡ್ಗ ಜಂಗಮ ಸಮುದಾಯದ ಬಾಲಗುರುಮೂರ್ತಿ, ಹಂದಿಜೋಗಿ ಸಮುದಾಯದ ವೆಂಕಟರಮಣಯ್ಯ, ರಾಜೇಂದ್ರಕುಮಾರ್, ಸಿಂಧೊಳ್ಳು ಜನಾಂಗದ ಹನುಮಂತಪ್ಪ, ಗೋಸಂಗಿ ಸಮುದಾಯದ ಚಾವಡಿ ಲೋಕೇಶ್, ಬುಡ್ಗ ಜಂಗಮರಾದ ಶೇಷಪ್ಪ, ಸಣ್ಣಮಾರಪ್ಪ, ಅಗೇರ್ ಸಮುದಾಯದ ಜಗದೀಶ್, ಘಂಟಿಚೋರ್ ಸಮುದಾಯದ ಸುರೇಶ್, ಮಾಂಗ್‌ ಗಾರುಡಿ ಸಮುದಾಯದ ಅನಿಲ್ ಕುಮಾರ್ ಕಾಂಬ್ಳೆ, ಅರುಂಧತಿಯಾರ್ ಸಮಾಜದ ಆರ್.ಕೃಷ್ಣ, ಶಿಳ್ಳೇಕ್ಯಾತ ಸಮುದಾಯದ ಮಂಜುನಾಥ್, ದಕ್ಕಲಿಗ ಸಮುದಾಯದ ಶಾಂತರಾಜು, ಸುಡುಗಾಡುಸಿದ್ದ ಸಮುದಾಯದ ಲೋಹಿತಾಶ್ವ, ಚಿಂತಕ ಶಿವಸುಂದರ್, ಬರೆಹಗಾರ ವಡ್ಡಗೆರೆ ನಾಗರಾಜಯ್ಯ, ನಟ, ಹೋರಾಟಗಾರ ಚೇತನ್‌ ಅಹಿಂಸಾ, ಲೇಖಕ ಹುಲಿಕುಂಟೆ ಮೂರ್ತಿ, ದಲಿತ ಮುಖಂಡ ಬಿ.ಗೋಪಾಲ್, ಸಾಮಾಜಿಕ ಕಾರ್ಯಕರ್ತ ಡಾ.ಎಚ್.ವಿ.ವಾಸು, ದಸಂಸ ಮುಖಂಡ ಹೆಣ್ಣೂರು ಶ್ರೀನಿವಾಸ್, ಒಳಮೀಸಲಾತಿ ಹೋರಾಟಗಾರರಾದ ಬಸವರಾಜ ಕೌತಾಳ್, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕಿ, ಚಂದ್ರು ತರಹುಣಸೆ ಸೇರಿದಂತೆ ಹತ್ತಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹತ್ತು ಸಾವಿರಕ್ಕೂ ಹೆಚ್ಚು ಅಲೆಮಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು. ನ್ಯಾಯ ಸಿಗುವವರೆಗೂ ಬೆಂಗಳೂರು ತೊರೆಯುವುದಿಲ್ಲ ಎಂದು ಸಮಾವೇಶ ನಿರ್ಧರಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟ ಜನರ ಹಕ್ಕಿನ ಹೋರಾಟ: ಪ್ರಕಾಶ್ ರಾಜ್

“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...