ಪ್ರಧಾನಿಗಳು ರೈತರ ಆದಾಯ ಡಬಲ್ ಮಾಡಲಿಲ್ಲ; ಯುದ್ಧ ನಡೆಯುತ್ತಿದ್ದಾಗಲೂ ರೈತರು ವಿಶ್ರಾಂತಿ ಪಡೆಯಲಿಲ್ಲ-ಸಿಎಂ

Date:

ಪ್ರಧಾನಿ ದೇಶವನ್ನು, ಮುಖ್ಯಮಂತ್ರಿ ರಾಜ್ಯವನ್ನು ಹಾಗೂ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸಿದರೆ, ರೈತ ಇಡೀ ಜಗತ್ತನ್ನೇ ಪ್ರತಿನಿಧಿಸುತ್ತಾನೆ. ಹೀಗಾಗಿ ವೈದ್ಯರಿಗೆ ‘ಡಾಕ್ಟರ್’, ಎಂಜಿನಿಯರ್‌ಗಳಿಗೆ ‘ಇಆರ್’ ಎಂದು ಪದನಾಮ ನೀಡುವಂತೆ, ರೈತರಿಗೂ ಅವರ ಹೆಸರಿನ ಮೊದಲು ವೃತ್ತಿ ಪದನಾಮ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ, ರೈತರ ಬದುಕು, ಸರ್ಕಾರದ ಹೊಸ ಯೋಜನೆಗಳು ಹಾಗೂ ಪ್ರಸ್ತುತ ಬರ ಪರಿಸ್ಥಿತಿಯ ಕುರಿತು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

​ಅನ್ನದೇವರಿಗಿಂತ ಮಿಗಿಲಾದ ದೇವರು ಮತ್ತೊಂದಿಲ್ಲ ಎಂದ ಅವರು, ಕರ್ಮವೇ ರೈತನ ಧರ್ಮ, ಶ್ರಮವೇ ಆತನ ಶಕ್ತಿ ಎಂದು ಬಣ್ಣಿಸಿದರು. ಕೇವಲ ಹಸಿರು ಶಾಲು ಹಾಕಿಕೊಂಡವರೆಲ್ಲಾ ರೈತರಾಗುವುದಿಲ್ಲ; ಹೊಲ ಉಳಿದು, ಗೊಬ್ಬರ ಹಾಕಿ, ಬಿತ್ತನೆ ಮಾಡಿ ಕಟಾವು ಮಾಡುವವನು ಮಾತ್ರ ನಿಜವಾದ ರೈತ. ಇಂಜಿನಿಯರ್‌ಗಳಿಗಿಂತಲೂ ಅಚ್ಚುಕಟ್ಟಾಗಿ ಗೆರೆ ಎಳೆದಂತೆ ಉಳುಮೆ ಮಾಡುವ ಕೌಶಲ ರೈತರು ಮತ್ತು ಮಹಿಳಾ ಕಾರ್ಮಿಕರಲ್ಲಿದೆ ಎಂದು ಶ್ಲಾಘಿಸಿದರು.

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿನ ಕೊರತೆಯಿದ್ದರೂ ರೈತರು ಆತ್ಮಹತ್ಯೆಗೆ ಶರಣಾಗದೆ, ಹೊಸಕೋಟೆ, ಬಿಜಾಪುರ, ಬಾಗಲಕೋಟೆ ಮುಂತಾದ ಕಡೆ ಹೂವು, ತರಕಾರಿ, ದ್ರಾಕ್ಷಿ ಮತ್ತು ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡಿರುವ ರೈತರ ಆತ್ಮಸ್ಥೈರ್ಯವನ್ನು ಅವರು ಕೊಂಡಾಡಿದರು. ಯುದ್ಧ, ಕರೋನಾದಂತಹ ವಿಪತ್ತೇ ಬರಲಿ, ರೈತರು ಮಾತ್ರ ವಿಶ್ರಾಂತಿ ಪಡೆಯುವುದಿಲ್ಲ ಎಂದು ಸ್ಮರಿಸಿದರು.

​ರೈತರ ಆದಾಯ ಹೆಚ್ಚಿಸಲು ಸರ್ಕಾರ ರೂಪಿಸುತ್ತಿರುವ ‘ತೇಗ ಸಿರಿ’ ಮತ್ತು ‘ನೇಗಿಲಯೋಗಿ’ ಯೋಜನೆಗಳ ಬಗ್ಗೆ ವಿವರಿಸಿದ ಅವರು, ರೈತರು ಜಮೀನಿನ ಇಕ್ಕೆಲಗಳಲ್ಲಿ ತೇಗದ ಗಿಡ ಬೆಳೆಸಿದರೆ ಶೇ. 70ರಷ್ಟು ಆದಾಯ ರೈತರಿಗೆ ಸಿಗುವಂತೆ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ ಎಂದರು.

ಅಲ್ಲದೆ, ಪ್ರತಿ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಸಣ್ಣ ರೈತರ ಭೂಮಿಯನ್ನು ಸರ್ಕಾರವೇ ಉಳುಮೆ ಮಾಡಿಕೊಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇದೇ ವೇಳೆ ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ಮಾತನಾಡಿದ ಅವರು, ಕಾಡಿನೊಂದಿಗೆ ಬದುಕುತ್ತಿರುವವರ ಹಕ್ಕುಗಳನ್ನು ಕಸಿದುಕೊಳ್ಳಲಾಗದು, ಪರಿಸರದ ಜೊತೆಗೆ ರೈತರ ಆಸ್ತಿ ಹಕ್ಕೂ ಉಳಿಯಬೇಕು ಎಂಬುದು ಸರ್ಕಾರದ ಬದ್ಧತೆಯಾಗಿದೆ. ಅರಣ್ಯದಂಚಿನ ರೈತರಿಗೆ ಯಾವುದೇ ನೋಟಿಸ್ ನೀಡದಂತೆ ಸೂಚಿಸಿರುವುದಾಗಿ ತಿಳಿಸಿದರು.

​ರಾಜ್ಯದ 200 ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದು, ಈ ಬಾರಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ದೊರೆತಿಲ್ಲ ಎಂದರು. ನ್ಯಾಯಾಲಯದ ಸೂಚನೆಯಂತೆ ನೀರು ಬಿಡಲಾಗುತ್ತಿದ್ದು, ಮಂಡ್ಯದ ರೈತರು ಸಹ ತಾಳ್ಮೆ ಕಳೆದುಕೊಂಡಿಲ್ಲ ಎಂದು ವಾಸ್ತವ ಪರಿಸ್ಥಿತಿ ತೆರೆದಿಟ್ಟರು.

ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ತಮಿಳುನಾಡಿಗೆ ಮನವರಿಕೆಯಾಗಿದ್ದು, ಸುಪ್ರೀಂಕೋರ್ಟ್ ಸಹ ರಾಜ್ಯದ ಪರವಾಗಿ ತೀರ್ಪು ನೀಡಿದೆ. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರೈತರ ಆದಾಯ ದುಪ್ಪಟ್ಟು ಮಾಡದ ಪ್ರಧಾನಿ, ರೈತ ವಿರೋಧಿ ಕಾಯ್ದೆಗಳನ್ನು ತಂದಿದ್ದರು. ಆದರೆ ಪ್ರಸ್ತುತ ರಾಜ್ಯ ಸರ್ಕಾರವು ರೈತರಿಗಾಗಿ 1,200 ಕೋಟಿ ರೂ. ನೀಡುತ್ತಿದೆ ಎಂದರು.

​ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಲಾಗುತ್ತಿದ್ದು, ಡ್ರೋಣ್ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸುವ ಮೂಲಕ ರೈತರಿಗೆ ವೈಜ್ಞಾನಿಕ ಸಲಹೆ ನೀಡಲು 5-6 ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಣ್ಣು, ಹೂವು ರಫ್ತು ಮಾಡುವ ರೈತರಿಗೆ ವಿದ್ಯುತ್ ರಿಯಾಯಿತಿ ಮತ್ತು ದಾಸ್ತಾನು ಸೌಲಭ್ಯ ಒದಗಿಸುವ ಚಿಂತನೆಯೂ ಇದೆ. ಶೈಕ್ಷಣಿಕ ವಲಯದಲ್ಲಿ 25-30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಿದ್ದು, ಕೃಷಿ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮಂಡ್ಯ ಸೇರಿದಂತೆ ವಿವಿಧೆಡೆ 4-5 ಕೃಷಿ ಹಾಗೂ ಪಶುವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

​ಆರ್ಥಿಕ ನಿರ್ವಹಣೆ ಕುರಿತು ಮಾತನಾಡಿದ ಅವರು, ಗ್ಯಾರಂಟಿ ಹಾಗೂ ಕಲ್ಯಾಣ ಯೋಜನೆಗಳಿಗೆ 1.25 ಲಕ್ಷ ಕೋಟಿ ರೂ. ಖರ್ಚಾಗುತ್ತಿದೆ. ಏತ ನೀರಾವರಿಗೆ ಅಧಿಕ ಹಣ ವ್ಯಯವಾಗುತ್ತಿರುವುದರಿಂದ, ನೀರು ಬಳಸುವ ರೈತರಿಂದ ಎಕರೆಗೆ 100 ರೂ. ಶುಲ್ಕ ವಿಧಿಸುವ ಬಗ್ಗೆ ಚರ್ಚೆಯಾಗಬೇಕಿದೆ ಹಾಗೂ ಬೆಂಗಳೂರಿನ ತೆರಿಗೆಯಿಂದಲೇ ಇಡೀ ರಾಜ್ಯಕ್ಕೆ ಮೂಲಸೌಕರ್ಯ ಒದಗಿಸಬೇಕಿರುವುದರಿಂದ ಜನರ ಸಹಕಾರ ಅಗತ್ಯ ಎಂದರು.

ಕೊನೆಯದಾಗಿ, ಸಿರಿಧಾನ್ಯ, ರಾಗಿ, ಕಾಫಿ, ಸೂರ್ಯಕಾಂತಿ, ಅಡಿಕೆ, ಟೊಮೆಟೊ, ಮೆಣಸಿನಕಾಯಿ, ತೆಂಗು, ದಾಳಿಂಬೆ, ಅನಾನಸ್ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಬೋಧಕರ ಕೊರತೆ: ಪಿಎಚ್‌ಡಿ ವಿದ್ಯಾರ್ಥಿನಿಯರಿಂದಲೇ ಪಿಜಿ ಪಾಠ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ (ಪಿಜಿ) ತರಗತಿಗಳಿಗೆ...

ಧಾಂದಲೆ ನಡೆಯುವ ಚುನಾವಣೆಗಳನ್ನು ಬಹಿಷ್ಕರಿಸಿ: ವಿಪಕ್ಷಗಳಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ

ದೇಶದ ವಿರೋಧ ಪಕ್ಷಗಳಿಗೆ 'ಅಕ್ರಮ/ಧಾಂದಲೆ ನಡೆಯುತ್ತಿರುವ' ಚುನಾವಣೆಗಳಲ್ಲಿ ಭಾಗವಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ...

OBC ಕೆನೆಪದರ ನೀತಿ ರೂಪಿಸಲು ಕಾಲಾವಕಾಶ ಕೇಳಿದ ಕೇಂದ್ರ; ತೀರ್ಪು ಕಾಯ್ದಿರಿಸಿ ಸುಪ್ರೀಂ

OBC ಕ್ರೀಮಿ ಲೇಯರ್‌ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾರ್ಚ್‌ 11ರಂದು ನೀಡಿದ್ದ ತೀರ್ಪನ್ನು...

ಮೀಸಲಾತಿ ದೇಶಕ್ಕೆ ಅತ್ಯಗತ್ಯ, ಅದು ಮುಂದುವರಿಯಲೇಬೇಕು: ಎಬಿವಿಪಿ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೋಲಂಕಿ

ಸಂವಿಧಾನ ಒದಗಿಸಿರುವ ಮೀಸಲಾತಿ ವ್ಯವಸ್ಥೆಯು ಭಾರತದಂತಹ ದೇಶಕ್ಕೆ ಅತ್ಯಗತ್ಯವಾಗಿದ್ದು, ಅದು ಖಂಡಿತವಾಗಿಯೂ...