SIR ಪೆಡಂಭೂತ | 43.81 ಲಕ್ಷ ಮತದಾರರಿಗೆ ಬರಲಿವೆ ನೋಟಿಸ್‌; ಬೆಂಗಳೂರಿನಲ್ಲೇ ಅರ್ಧಕ್ಕಿಂತ ಹೆಚ್ಚು

Date:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಈಗ ಮತದಾರರ ಮನೆ ಬಾಗಿಲಿಗೆ ಆತಂಕ ತಂದಿಟ್ಟಿದೆ. ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ 1.8 ಕೋಟಿ ಮತದಾರರನ್ನು ಎಎಸ್‌ಡಿಡಿಒ ಅಡಿಯಲ್ಲಿ ಯಾವುದೇ ನೋಟಿಸ್‌ ಕೊಡದೆ ಡಿಲೀಟ್ ಮಾಡಿರುವ ಚುನಾವಣಾ ಆಯೋಗ ಮತದಾರರ ಸಂಖ್ಯೆಯನ್ನು 4.46 ಕೋಟಿಗೆ ಇಳಿಸಿದೆ. ಇದೀಗ, ಈ ಮತದಾರರ ಪೈಕಿ ಬರೋಬ್ಬರಿ 43.81 ಲಕ್ಷ ಮಂದಿಯನ್ನು ಅನುಮಾನದಿಂದ ನೋಡುತ್ತಿದೆ. 43.81 ಲಕ್ಷ ಮತದಾರರಿಗೆ ನೋಟಿಸ್‌ ಕಳಿಸಲು ಆಯೋಗ ಮುಂದಾಗಿದೆ. ಶುಕ್ರವಾರದಿಂದಲೇ ನೋಟಿಸ್‌ ಕಳಿಸುವ ಪ್ರಕ್ರಿಯೆ ಆರಂಭಿಸಿರುವುದಾಗಿ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

43.81 ಲಕ್ಷ ಮತದಾರಿಗೆ ನೋಟಿಸ್‌ ಕಳಿಸುವುದು ಎಂದರೆ, ರಾಜ್ಯದ 9.8%ರಷ್ಟು ಮತದಾರರನ್ನು ಆಯೋಗವು ಅತಂತ್ರಕ್ಕೆ ದೂಡಿದೆ ಎಂದರ್ಥ. ನೋಟಿಸ್‌ ಪಡೆಯುವ ಈ ಎಲ್ಲ ಮತದಾರರು ತಾವು ಈ ದೇಶದ ನಾಗರಿಕರು ಎಂಬುದನ್ನು ಸಾಬೀತು ಮಾಡಲು ದಾಖಲೆಗಳನ್ನು ಹೊತ್ತು ಅಧಿಕಾರಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಆಯೋಗವು ನೋಟಿಸ್‌ ನೀಡಲಿರುವ ಮತದಾರರಲ್ಲಿ ಅತೀ ಹೆಚ್ಚು ಮತದಾರರು ಬೆಂಗಳೂರು ಭಾಗದವರಾಗಿದ್ದಾರೆ. ನೋಟಿಸ್‌ ಪಡೆಯಲಿರುವ ಒಟ್ಟು 43.81 ಲಕ್ಷ ಮತದಾರರಲ್ಲಿ ಸುಮಾರು 55%ರಷ್ಟು (ಒಟ್ಟು 24,05,717) ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಈ ಪೈಕಿ, ಬೆಂಗಳೂರು ನಗರದಲ್ಲಿ 9,45,798, ಬಿಬಿಎಂಪಿ ಉತ್ತರದಲ್ಲಿ 6,12,963, ಬಿಬಿಎಂಪಿ ಕೇಂದ್ರದಲ್ಲಿ 4,29,345 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ 4,17,611 ಮತದಾರರಿಗೆ ಆಯೋಗವು ನೋಟಿಸ್‌ ಕಳಿಸಲಿದೆ.  

 ಬೆಂಗಳೂರು ನಂತರದಲ್ಲಿ ಅತಿ ಹೆಚ್ಚು ನೋಟಿಸ್‌ಗಳು ಹೋಗಲಿರುವ ಜಿಲ್ಲೆಗಳು; ಮಂಡ್ಯ – 1,50,269, ದಕ್ಷಿಣ ಕನ್ನಡ – 1,50,144, ಕೋಲಾರ – 1,42,184, ಮೈಸೂರು – 1,28,132, ತುಮಕೂರು – 1,11,874, ಕಲಬುರಗಿ – 1,05,486, ಉಡುಪಿ – 97,702, ಚಿಕ್ಕಮಗಳೂರು – 91,612, ಬೆಳಗಾವಿ – 84,415 ಹಾಗೂ ಹಾಸನದ 79,772 ಮತದಾರರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಲಿದೆ. ಈ ಜಿಲ್ಲೆಗಳು ಮಾತ್ರವಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳ ಮತದಾರರೂ ನೋಟಿಸ್‌ ಪಡೆಯಲಿದ್ದಾರೆ.

ನೋಟಿಸ್ ನೀಡುವ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ನಿರ್ವಹಿಸಲು ರಾಜ್ಯಾದ್ಯಂತ ಒಟ್ಟು 4,262 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AERO) ಮತ್ತು ಹೆಚ್ಚುವರಿ AEROಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 336 ನಿಯಮಿತ AEROಗಳು ಮತ್ತು 3,926 ಹೆಚ್ಚುವರಿ AEROಗಳು ಇರಲಿದ್ದಾರೆ ಎಂದು ಆಯೋಗ ತಿಳಿಸಿದೆ.

ನೋಟಿಸ್‌ ಪಡೆದ ಮತದಾರರು ಸಲ್ಲಿಸುವ ಆಕ್ಷೇಪಣಾ ಅರ್ಜಿಗಳನ್ನು ಈ ಎಇಆರ್‌ಒಗಳು ಪರಿಶೀಲನೆ ನಡೆಸಲಿದ್ದಾರೆ. ಮಾತ್ರವಲ್ಲದೆ, ಮತಪಟ್ಟಿಯಲ್ಲಿ ಯಾರ ಹೆಸರನ್ನು ಸೇರಿಸಬೇಕು, ಉಳಿಸಬೇಕು ಅಥವಾ ತೆಗೆದುಹಾಕಬೇಕು ಎಂಬ ನಿರ್ಣಯವನ್ನೂ ಇವರುಗಳೇ ತೆಗೆದುಕೊಳ್ಳಲಿದ್ದಾರೆ.

ಇದೆಲ್ಲದರ ನಡುವೆ, SIR ಪ್ರಕ್ರಿಯೆಯಲ್ಲಿ ಹೆಸರು ತಪ್ಪಿಹೋಗಿರುವವರು, ಹೊಸದಾಗಿ ಹೆಸರು ಸೇರಿಸಬೇಕಾದವರು ಹಾಗೂ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಸರಿಪಡಿಸಿಕೊಳ್ಳಲುಆಗಸ್ಟ್ 29 ಮತ್ತು 30 ಹಾಗೂ ಸೆಪ್ಟೆಂಬರ್ 19 ಮತ್ತು 20ರಂದು ರಾಜ್ಯಾದ್ಯಂತ ವಿಶೇಷ ಮತದಾರರ ನೋಂದಣಿ ಅಭಿಯಾನ ನಡೆಸಲಾಗುತ್ತದೆ. ಈ ಸಮಯದಲ್ಲಿ ಅಗತ್ಯವಿರುವ ಮತದಾರರು ತಮ್ಮ ಬಿಎಲ್‌ಒಗಳನ್ನು ಸಂಪರ್ಕಿಸಿ ಅರ್ಜಿ, ಆಕ್ಷೇಪಣೆಗಳನ್ನು ಸಲ್ಲಿಸಬಹುದು ಆಯೋಗ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...