SIR | ಡಿಲೀಟ್ ಪಟ್ಟಿಯಲ್ಲಿ 52 ಲಕ್ಷ ಅರ್ಹ ಮತದಾರರು; ನಾಗರಿಕ ಸಂಘಟನೆಗಳ ಆರೋಪ

Date:

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ಮತದಾರರಲ್ಲಿ ಲಕ್ಷಾಂತರ ಮಂದಿ ಇನ್ನೂ ಅರ್ಹ ಮತದಾರರೇ ಆಗಿದ್ದಾರೆ. ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾದ 1,07,96,415 ಮತದಾರರ ಪೈಕಿ ಅಂದಾಜು 52 ಲಕ್ಷ ಮಂದಿ ಅರ್ಹ ಮತದಾರರಿದ್ದಾರೆ ಎಂದು ನಾಗರಿಕ ಸಂಘಟನೆಗಳು ವಾದಿಸಿವೆ.

- Advertisement -

ಎಸ್‌ಐಆರ್ ಪ್ರಕ್ರಿಯೆ ಮತ್ತು ಕೇಂದ್ರ ಚುನಾವಣಾ ಆಯೋಗದ ಕ್ರಮಗಳ ವಿರುದ್ಧ ಆಗಸ್ಟ್ 25ರಂದು ನಾಗರಿಕ ಸಂಘಟನೆಗಳು ‘ಎಫ್‌ಐಆರ್’ ವರದಿ ಬಿಡುಗಡೆ ಮಾಡಿವೆ. ಆ ವರದಿಯಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಪತ್ತೆಯಾಗದವರು ಅಥವಾ ಗೈರುಹಾಜರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮರಣ ಹೊಂದಿದವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು ಹಾಗೂ ಇತರರು ಎಂಬ ವರ್ಗೀಕರಣದಡಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿರುವ ವಿಧಾನವೇ ಸರಿಯಾದದ್ದಲ್ಲ ಎಂದು ಸಂಘಟನೆಗಳು ಹೇಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಮರಣ ಹೊಂದಿದವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಣಿಯಾದವರ ಪಟ್ಟಿಯಲ್ಲಿ ಕೆಲವು ದೋಷಗಳಿರಬಹುದಾದರೂ, ಆ ಎರಡು ವರ್ಗಗಳ ಬಗ್ಗೆ ಮೂಲಭೂತ ಆಕ್ಷೇಪವಿಲ್ಲ. ಆದರೆ ‘ಗೈರುಹಾಜರಿ’, ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಹಾಗೂ ‘ಇತರರು’ ಎಂಬ ಕಾರಣ ನೀಡಿ ಲಕ್ಷಾಂತರ ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಿರುವುದು ಅತ್ಯಂತ ಗಂಭೀರ ವಿಷಯ ಎಂದು ಸಂಘಟನೆಗಳು ಹೇಳಿವೆ.

ಸಂಘಟನೆಗಳ ಪ್ರಕಾರ, ‘ಗೈರುಹಾಜರಿ’ ಎಂದು ಗುರುತಿಸಲಾದವರು ಅಸ್ತಿತ್ವದಲ್ಲೇ ಇಲ್ಲದ ಮತದಾರರಲ್ಲ. ಅವರಲ್ಲಿ ಬಹಳಷ್ಟು ಮಂದಿ ಉದ್ಯೋಗ, ಕೂಲಿ ಕೆಲಸ ಅಥವಾ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಊರಿನಿಂದ ಹೊರಹೋದವರಾಗಿದ್ದಾರೆ. ಪರಿಣಾಮವಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇಂತಹವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು ಸರಿಯಲ್ಲ. ಅವರು ಮೂಲತಃ ಅರ್ಹ ಮತದಾರರೇ ಆಗಿದ್ದಾರೆ ಎಂದು ಸಂಘಟನೆಗಳ ವರದಿ ಹೇಳಿದೆ.

‘ಇತರರು’ ಎಂಬ ವರ್ಗದಲ್ಲಿಯೂ ಇದೇ ರೀತಿಯ ಸಮಸ್ಯೆ ಇದೆ ಎಂದು ಸಂಘಟನೆಗಳು ಆರೋಪಿಸಿವೆ. ಕೆಲವರು ಎನ್ಯುಮರೇಷನ್ ಫಾರಂ ಪಡೆದಿದ್ದರೂ ಅದನ್ನು ಅಧಿಕಾರಿಗಳು ಮರಳಿ ಸಂಗ್ರಹಿಸಿಲ್ಲ. ಆದರೆ, ಫಾರಂ ಸಲ್ಲಿಸದವರು ಅಥವಾ ಫಾರಂ ನೀಡಲು ನಿರಾಕರಿಸಿದವರು ಎಂಬ ಹೊಣೆಗಾರಿಕೆಯನ್ನು ಮತದಾರರ ಮೇಲೆಯೇ ಹೊರಿಸಲಾಗಿದೆ ಎಂದು ಸಂಘಟನೆಗಳು ಆಕ್ಷೇಪಿಸಿವೆ.

ಇನ್ನೊಂದೆಡೆ, ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂಬ ವರ್ಗವು ಅತ್ಯಂತ ದೊಡ್ಡ ಸಂಖ್ಯೆಯನ್ನು ಹೊಂದಿದೆ. ಬಾಡಿಗೆ ಮನೆ ಬದಲಾಯಿಸಿದವರು, ಕೆಲಸದ ಕಾರಣಕ್ಕಾಗಿ ಬೇರೆ ಪ್ರದೇಶಕ್ಕೆ ತೆರಳಿದವರು ಅಥವಾ ಒಂದೇ ನಗರದಲ್ಲೇ ವಿಳಾಸ ಬದಲಾಯಿಸಿದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಡಿಲೀಟ್ ಮಾಡಲಾಗಿದೆ ಎಂದು ನಾಗರಿಕ ಸಂಘಟನೆಗಳು ಆರೋಪಿಸಿವೆ.

ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸುವ ಬದಲು, ಹೊಸ ವಿಳಾಸಕ್ಕೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಆದರೆ, ಹಲವೆಡೆ ಮತದಾರರ ಹೆಸರನ್ನು ನೇರವಾಗಿ ಡಿಲೀಟ್ ಮಾಡಲಾಗಿದೆ. ಕೆಲವರ ಹೆಸರು ಹಳೆಯ ವಿಳಾಸದಲ್ಲೇ ಉಳಿದಿದ್ದರೆ, ಕೆಲವರು ಹೊಸ ಸ್ಥಳದಲ್ಲಿ ಹೊಸ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವರ ಹೆಸರು ಹಳೆಯ ಪಟ್ಟಿಯಲ್ಲೂ ಇಲ್ಲ, ಹೊಸ ಪಟ್ಟಿಯಲ್ಲೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?

ಈ ಎಲ್ಲ ವರ್ಗಗಳ ಕುರಿತು ಸಮಗ್ರ ಮತ್ತು ಸ್ಪಷ್ಟವಾದ ಅಂಕಿ-ಅಂಶಗಳು ಲಭ್ಯವಿಲ್ಲದ ಕಾರಣ, ಅರ್ಹ ಮತದಾರರ ನಷ್ಟವನ್ನು ಅಂದಾಜು ಆಧಾರದಲ್ಲಿ ಲೆಕ್ಕಿಸಲಾಗಿದೆ. ‘ಗೈರುಹಾಜರಿ’ ಪಟ್ಟಿಯಲ್ಲಿರುವ ಸುಮಾರು 15 ಲಕ್ಷ ಮಂದಿ, ‘ಇತರರು’ ವರ್ಗದಲ್ಲಿರುವ ಸುಮಾರು 4 ಲಕ್ಷ ಮಂದಿ ಹಾಗೂ ‘ಸ್ಥಳಾಂತರಗೊಂಡವರು’ ಪಟ್ಟಿಯಲ್ಲಿ ಕನಿಷ್ಠ 33 ಲಕ್ಷ ಮಂದಿ ಇನ್ನೂ ಅರ್ಹ ಮತದಾರರೇ ಇರಬಹುದು ಎಂದು ಸಂಘಟನೆಗಳು ಅಂದಾಜಿಸಿವೆ.

ಒಟ್ಟಾರೆ 15 ಲಕ್ಷ ಗೈರುಹಾಜರಾದವರು, 4 ಲಕ್ಷ ‘ಇತರರು’ ಮತ್ತು 33 ಲಕ್ಷ ಸ್ಥಳಾಂತರಗೊಂಡವರು ಸೇರಿ ಸುಮಾರು 52 ಲಕ್ಷ ಮಂದಿ ಮತದಾನದ ಹಕ್ಕನ್ನು ಚುನಾವಣಾ ಆಯೋಗ ಕಸಿದುಕೊಳ್ಳುತ್ತಿದೆ ಎಂದು ನಾಗರಿಕ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.

ಅದರಲ್ಲೂ, ಈ ಪ್ರಕ್ರಿಯೆಯಿಂದ ಹೆಚ್ಚು ಬಾಧಿತರಾದವರು ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಇತರ ಶೋಷಿತ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಜನರಾಗಿದ್ದಾರೆ ಎಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ರಾಜ್ಯ ಚುನಾವಣಾ ಆಯೋಗವು ಆಗಸ್ಟ್ 19ರಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಒಟ್ಟು 1,07,96,415 ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಇವರಲ್ಲಿ 15,17,056 ಮಂದಿ ಪತ್ತೆಯಾಗದವರು ಅಥವಾ ಗೈರುಹಾಜರಾದವರು, 65,45,721 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,39,871 ಮಂದಿ ಮರಣ ಹೊಂದಿದವರು, 7,09,875 ಮಂದಿ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು ಹಾಗೂ 3,83,892 ಮಂದಿ ‘ಇತರರು’ ಎಂದು ವರ್ಗೀಕರಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...