ರಾಜ್ಯದ ಕ್ಷೀರ ವಲಯ: 11 ಹಾಲು ಒಕ್ಕೂಟಗಳಿಗೆ ಲಾಭದ ಸಿಹಿ, ಐದಕ್ಕೆ ನಷ್ಟದ ಕಹಿ

Date:

ರಾಜ್ಯದ ಪ್ರಮುಖ ಡೈರಿ ಉತ್ಪನ್ನ ಸಂಸ್ಥೆಯಾದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ – ಕೆಎಂಎಫ್ ಅಡಿಯಲ್ಲಿ ಒಟ್ಟು 16 ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳು ಕಾರ್ಯಾಚರಿಸುತ್ತಿವೆ. ಈ ಪೈಕಿ 11 ಹಾಲು ಒಕ್ಕೂಟಗಳು ಲಾಭದಲ್ಲಿದ್ದರೆ, ಉಳಿದ 5 ಒಕ್ಕೂಟಗಳು ನಷ್ಟದಲ್ಲಿದೆ.

- Advertisement -

ಇತ್ತೀಚಿನ ಅಧಿಕೃತ ಹಣಕಾಸು ಮತ್ತು ನಿರ್ವಹಣಾ ವರದಿಗಳ ಪ್ರಕಾರ, 11 ಹಾಲು ಒಕ್ಕೂಟಗಳು ಅತ್ಯುತ್ತಮ ಸಾಗಣೆ, ಮಾರುಕಟ್ಟೆ ವಿಸ್ತರಣೆ ಮತ್ತು ಉಪಉತ್ಪನ್ನಗಳ ಮಾರಾಟದ ಮೂಲಕ ಲಾಭದಲ್ಲಿ ಓಡುತ್ತಿದ್ದರೆ, ಉಳಿದ 5 ಒಕ್ಕೂಟಗಳು ಆಡಳಿತಾತ್ಮಕ ಮತ್ತು ಭೌಗೋಳಿಕ ಸವಾಲುಗಳಿಂದಾಗಿ ನಷ್ಟವನ್ನು ಎದುರಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಲಾಭದಲ್ಲಿರುವ ಹಾಲು ಒಕ್ಕೂಟಗಳು

ದಕ್ಷಿಣ ಕರ್ನಾಟಕ ಮತ್ತು ಪ್ರಮುಖ ನಗರ ಪ್ರದೇಶಗಳನ್ನು ಒಳಗೊಂಡಿರುವ ಒಕ್ಕೂಟಗಳು ಸತತವಾಗಿ ಉನ್ನತ ಲಾಭ ದಾಖಲಿಸುತ್ತಿವೆ. ಬೆಂಗಳೂರು (ಬಮುಲ್), ಮೈಸೂರು (ಮೈಮುಲ್), ಮಂಡ್ಯ (ಮನುಲ್), ತುಮಕೂರು, ದಕ್ಷಿಣ ಕನ್ನಡ (ದಕ್ಷಿಣ ಕನ್ನಡ ಹಾಲು ಒಕ್ಕೂಟ – ಮಂಗಳೂರು), ಹಾಸನ, ಕೋಲಾರ, ಬೆಳಗಾವಿ ಮುಂತಾದ ಒಕ್ಕೂಟಳು ಲಾಭದಲ್ಲಿವೆ.

ಇದನ್ನೂ ಓದಿ: ತುಮಕೂರು ಹಾಲು ಒಕ್ಕೂಟದಲ್ಲಿ ದಲಿತ ಅಧಿಕಾರಿಗೆ ಕಿರುಕುಳ; ನೆಲದ ಮೇಲೆ ಕೂತು ಕರ್ತವ್ಯ ನಿರ್ವಹಣೆ

ಬೆಂಗಳೂರು, ಮೈಸೂರು ಮುಂತಾದ ಮೆಟ್ರೋ ನಗರಗಳಲ್ಲಿ ದೈನಂದಿನ ಹಾಲಿನ ಪೂರೈಕೆ ಮತ್ತು ಖಾತರಿಯಾದ ಮಾರುಕಟ್ಟೆ ಲಭ್ಯತೆ ಇರುವ ಕಾರಣ ಇಲ್ಲಿ ಲಾಭವಿದೆ. ಅದರಲ್ಲೂ ಈ ಪ್ರದೇಶಗಳಲ್ಲಿ ಬೆಣ್ಣೆ, ತುಪ್ಪ, ಮಜ್ಜಿಗೆ, ಮೊಸರು, ಪನ್ನೀರ್ ಮತ್ತು ಸಿಹಿ ತಿಂಡಿಗಳು (ನಂದಿನಿ ಸ್ವೀಟ್ಸ್) ಹೆಚ್ಚು ಮಾರಾಟವಾಗುತ್ತಿವೆ. ಹಾಲಿನ ಸಂಗ್ರಹಣೆಯಿಂದ ಸಾಗಣೆವರೆಗಿನ ವೆಚ್ಚ ನಿಯಂತ್ರಣವನ್ನೂ ಇಲ್ಲಿ ಮಾಡಲಾಗುತ್ತಿದೆ.

ನಷ್ಟದಲ್ಲಿರುವ ಹಾಲು ಒಕ್ಕೂಟಗಳು

ವಿಶೇಷವಾಗಿ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಮತ್ತು ಉತ್ತರ ಕರ್ನಾಟಕದ ಭಾಗಶಃ ಒಕ್ಕೂಟಗಳು ಆರ್ಥಿಕ ತೊಂದರೆ ಎದುರಿಸುತ್ತಿವೆ. ರಾಯಚೂರು-ಬಳ್ಳಾರಿ-ಕೊಪ್ಪಳ (ಆರ್‌ಬಿ ಕೆಒಎಂಪಿಯುಎಲ್), ಕಲಬುರಗಿ-ಬೀದರ್-ಯಾದಗಿರಿ, ವಿಜಯಪುರ-ಬಾಗಲಕೋಟೆ, ಧಾರವಾಡ-ಗದಗ-ಹಾವೇರಿ ಮತ್ತು ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗದಲ್ಲಿ ಹಾಲು ಒಕ್ಕೂಟ ನಷ್ಟದಲ್ಲಿದೆ. ಭಾಗಶಃ ನಿರ್ವಹಣಾ ವೆಚ್ಚದ ಕಾರಣದಿಂದ ಈ ನಷ್ಟ ಉಂಟಾಗಿದೆ.

ವಿಶಾಲವಾದ ಪ್ರದೇಶದಲ್ಲಿ ಚದುರಿದಂತಿರುವ ಹಳ್ಳಿಗಳಿಂದ ಕಡಿಮೆ ಪ್ರಮಾಣದ ಹಾಲು ಸಂಗ್ರಹಿಸಲು ಹೆದ್ದಾರಿ ಮತ್ತು ವಾಹನ ವೆಚ್ಚ ಹೆಚ್ಚಾಗುತ್ತಿದೆ. ಈ ಭಾಗಗಳಲ್ಲಿ ಸಂಗ್ರಹವಾಗುವ ಹಾಲಿಗೆ ಹೋಲಿಸಿದರೆ ಸ್ಥಳೀಯವಾಗಿ ನಂದಿನಿ ಹಾಲಿನ ದೈನಂದಿನ ಬಳಕೆ ಕಡಿಮೆ ಇದ್ದು, ಹೆಚ್ಚುವರಿ ಹಾಲನ್ನು ಪೌಡರ್ (SMP) ಮಾಡಲು ಇತರ ಜಿಲ್ಲೆಗಳಿಗೆ ಕಳುಹಿಸಬೇಕಾಗುತ್ತದೆ. ಹಾಲನ್ನು ಹಾಲಿನ ಹುಡಿ ಅಥವಾ ಬೆಣ್ಣೆಯಾಗಿ ಪರಿವರ್ತಿಸಲು ತಗಲುವ ಹೆಚ್ಚಿನ ಸಂಸ್ಕರಣಾ ವೆಚ್ಚ ಹೆಚ್ಚಾಗುತ್ತಿದೆ. ಸಿಬ್ಬಂದಿ ವೆಚ್ಚ ಮತ್ತು ಮೂಲಸೌಕರ್ಯ ನಿರ್ವಹಣೆಗೆ ತಗಲುವ ವೆಚ್ಚಕ್ಕೆ ತಕ್ಕಂತೆ ಆದಾಯ ಬಾರದಿರುವುದೇ ಈ ನಷ್ಟಕ್ಕೆ ಕಾರಣವಾಗಿದೆ.

ಸದ್ಯ ಸುಧಾರಣೆಗಾಗಿ ನಷ್ಟದಲ್ಲಿರುವ ಒಕ್ಕೂಟಗಳ ವ್ಯಾಪ್ತಿಯಲ್ಲಿ ನಂದಿನಿ ಉತ್ಪನ್ನಗಳ (ಮೊಸರು, ತುಪ್ಪ, ಸ್ವೀಟ್ಸ್) ಚಿಲ್ಲರೆ ಮಾರಾಟ ಜಾಲವನ್ನು ಬಲಪಡಿಸಬೇಕಾಗಿದೆ. ಸ್ಥಳೀಯವಾಗಿಯೇ ಹಾಲನ್ನು ಉಪಉತ್ಪನ್ನಗಳಾಗಿ ಪರಿವರ್ತಿಸಲು ಆಧುನಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಸಾಗಣೆ ವೆಚ್ಚ ತಗ್ಗಿಸಬೇಕಾಗುತ್ತದೆ. ಹಾಗೆಯೇ ನಷ್ಟದಲ್ಲಿರುವ ಒಕ್ಕೂಟಗಳಿಗೆ ಕೆಎಂಎಫ್‌ ಮಹಾಮಂಡಳದಿಂದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವುದು ಅಗತ್ಯ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...

18 ವರ್ಷದೊಳಗಿನವರಿಗೆ ‘ಸೋಶಿಯಲ್ ಮೀಡಿಯಾ’ ನಿಷೇಧವೇ? ಕೇಂದ್ರ ಸರ್ಕಾರ ಹೇಳುವುದೇನು?

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

‘ಇಂಡಿಯಾ’ ಒಕ್ಕೂಟ ಅತ್ಯಂತ ಒಗ್ಗಟ್ಟಾಗಿದೆ; ಸಿಇಸಿ ಗ್ಯಾನೇಶ್ ಕುಮಾರ್ ವಜಾಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ವಿಪಕ್ಷಗಳ ಇಂಡಿಯಾ ಒಕ್ಕೂಟವು ಸಂಪೂರ್ಣ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು...