ಸರಿಯಾದ ಬ್ರೇಕ್ ವ್ಯವಸ್ಥೆಯಿಲ್ಲದೆ ಖಾಲಿ ವಂದೇ ಭಾರತ್ ರೈಲೊಂದು 463 ಕಿ.ಮೀ ಸಂಚರಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 24ರಂದು ಬ್ರೇಕ್ ವ್ಯವಸ್ಥೆಯಲ್ಲಿ ದೋಷವಿದ್ದ, ಪ್ರಯಾಣಿಕರಿಲ್ಲದ ವಂದೇ ಭಾರತ್ ರೈಲನ್ನು ಜಾರ್ಖಂಡ್‌ನಿಂದ ಉತ್ತರ ಪ್ರದೇಶದವರೆಗೆ 463 ಕಿ.ಮೀ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಪೂರ್ವ ರಲ್ವೆ ವಲಯ ತನಿಖೆಗೆ ಆದೇಶಿಸಿದೆ. ನವೆಂಬರ್ 11ರಂದು ಅಸ್ಸಾಂನಲ್ಲಿ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆಗೂ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿರುವುದನ್ನು ಗಮನಿಸಬಹುದು.
ಬ್ರೇಕ್ ದೋಷವಿರುವ ರೈಲನ್ನು ಸಂಚರಿಸುವಂತೆ ಮಾಡುವುದು ಗಂಭೀರ ಸುರಕ್ಷತಾ ಲೋಪವಾಗಿದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.



