ನಕಲಿ ಕೋರ್ಟ್ ಆದೇಶದಡಿ 95 ವೆಬ್‌ಸೈಟ್ ನಿರ್ಬಂಧಿಸಿದ್ದ ಕೇಂದ್ರ ಸರ್ಕಾರ; ಮುಖಭಂಗದ ಬೆನ್ನಲ್ಲೇ ಅನ್‌ಬ್ಲಾಕ್‌ಗೆ ಆದೇಶ!

Date:

ನ್ಯಾಯಾಲಯಗಳ ನಕಲಿ ಆದೇಶಗಳನ್ನು ಆಧರಿಸಿ ಬರೋಬ್ಬರಿ 129 ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿರುವ ಆಘಾತಕಾರಿ ಸಂಗತಿಯನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ‘ರಾಯಿಟರ್ಸ್’ ತನಿಖಾ ವರದಿ ಬಯಲಿಗೆಳೆದಿದೆ. ಇದರಿಂದ, ತೀವ್ರ ಮುಖಭಂಗಕ್ಕೀಡಾದ ಕೇಂದ್ರ ದೂರಸಂಪರ್ಕ ಇಲಾಖೆ (DoT) ಇದೀಗ 129 ವೆಬ್‌ಸೈಟ್‌ಗಳ ಪೈಕಿ 95 ವೆಬ್‌ಸೈಟ್‌ಗಳನ್ನು ತಕ್ಷಣವೇ ಮರುಸ್ಥಾಪಿಸುವಂತೆ ‘ಇಂಟರ್‌ನೆಟ್ ಸೇವಾ ಪೂರೈಕೆದಾರ’ರಿಗೆ (ISPs) ತುರ್ತು ನಿರ್ದೇಶನ ನೀಡಿದೆ.

- Advertisement -

ರಾಯಿಟರ್ಸ್ ಪತ್ರಕರ್ತರಾದ ಮುನ್ಸಿಫ್ ವೆಂಗಟ್ಟಿಲ್ ಮತ್ತು ಆದಿತ್ಯ ಕಲ್ರಾ ಅವರು ನಡೆಸಿದ ವಿಶೇಷ ತನಿಖೆಯಲ್ಲಿ ನ್ಯಾಯಾಲಯಗಳ ಹೆಸರಿನಲ್ಲಿ ನಕಲಿ ಆದೇಶಗಳನ್ನು ರವಾನಿಸಲಾಗಿರುವ ಬೃಹತ್ ವಂಚನೆ ಬೆಳಕಿಗೆ ಬಂದಿತ್ತು. ಅಲಹಾಬಾದ್ ಹೈಕೋರ್ಟ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳ ನಕಲಿ ಆದೇಶಗಳನ್ನು ಉಲ್ಲೇಖಿಸಿ, ಯಾವುದೇ ಪೂರ್ವಾಪರ ಪರಿಶೀಲನೆ ನಡೆಸದೆಯೇ ದೂರಸಂಪರ್ಕ ಇಲಾಖೆಯು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಆದೇಶಿಸಿತ್ತು. ಇಲಾಖೆಯ ಆದೇಶವನ್ನು ಇಂಟರ್‌ನೆಟ್ ಸೇವಾ ಸಂಸ್ಥೆಗಳು ಅದನ್ನು ಪಾಲಿಸಿದ್ದವು. ಆದರೆ, ಈ ಎರಡೂ ಆದೇಶಗಳು ನ್ಯಾಯಾಲಯಗಳ ಆನ್‌ಲೈನ್ ನೋಂದಣಿ ದಾಖಲೆಗಳಲ್ಲಿ ಇರಲೇ ಇಲ್ಲ. ಈ ಬಗ್ಗೆ ರಾಯಿಟರ್ಸ್‌ ಪ್ರಶ್ನೆಗೆ ಇಮೇಲ್‌ನಲ್ಲಿ ಪ್ರತಿಕ್ರಿಯಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ರಿಜಿಸ್ಟ್ರಾರ್, “ತಮ್ಮ ನ್ಯಾಯಾಲಯದ ಹೆಸರಿನಲ್ಲಿರುವ ಆದೇಶವು ನಕಲಿ. ಈ ಆದೇಶವು ತಮ್ಮ ಸರ್ವರ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ವೀಸಾ ರದ್ದತಿ ಪ್ರಕರಣ:...

ನಿರಂತರ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯ, 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನದ ಮೂಲಕ ಸ್ಥಾಪಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವುಗಳನ್ನು ಕಾಪಾಡುವಲ್ಲಿ ಆಡಳಿತದ ಹೊಣೆಗಾರಿಕೆ ಭಾರತದ ಜಾಗತಿಕ ಪ್ರತಿಷ್ಠೆಯ ಮೂಲಾಧಾರಗಳಾಗಿವೆ. ನಾರ್ವೆಯ...

ಅಂತೆಯೇ, ಅಲಹಾಬಾದ್ ಹೈಕೋರ್ಟ್‌ನದ್ದು ಎನ್ನಲಾದ ಆದೇಶವೊಂದನ್ನು ಆಧರಿಸಿ ಕಳೆದ ಸೆಪ್ಟೆಂಬರ್ 2ರಂದು ದೂರಸಂಪರ್ಕ ಇಲಾಖೆಯು ಈ 95 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಆದೇಶ ಹೊರಡಿಸಿತ್ತು. ಆದರೆ, ಆ ನ್ಯಾಯಾಲಯದ ಆದೇಶವೇ ಸಂಪೂರ್ಣ ನಕಲಿ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಪೊಲೀಸರು ಮತ್ತು ನ್ಯಾಯಾಲಯದ ರಿಜಿಸ್ಟ್ರಿ ನೀಡಿದ ಮಾಹಿತಿಯ ಪ್ರಕಾರ, ಈ ನಕಲಿ ಆದೇಶಗಳಲ್ಲಿ ನ್ಯಾಯಾಲಯದ ನಕಲಿ ಲೋಗೋಗಳು, ಸೀಲ್‌ಗಳು ಹಾಗೂ ನಕಲಿ ಕ್ಯೂಆರ್ ಕೋಡ್‌ಗಳನ್ನು ಅತ್ಯಂತ ನಿಪುಣತೆಯಿಂದ ಸೃಷ್ಟಿಸಲಾಗಿತ್ತು.

ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಈ ಹಿನ್ನೆಲೆಯಲ್ಲಿ ಇಲಾಖೆಯು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ 95 ವೆಬ್‌ಸೈಟ್‌ಗಳು ಮತ್ತು ಡೊಮೇನ್‌ಗಳ ಮೇಲಿನ ನಿರ್ಬಂಧವನ್ನು ತಕ್ಷಣವೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಇಂಟರ್‌ನೆಟ್ ಸೇವಾ ಪರವಾನಗಿದಾರರಿಗೆ ಸೂಚಿಸಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಇದೆಲ್ಲದರ ನಡುವೆ, ಪ್ರಧಾನ ಮಂತ್ರಿಗಳ ಕಾರ್ಯಾಲಯವು (PMO) ದೂರಸಂಪರ್ಕ ಕಾರ್ಯದರ್ಶಿ ಅಮಿತ್ ಅಗರ್ವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಖುದ್ದು ಹಾಜರಾಗಿ ವಿವರಣೆ ನೀಡುವಂತೆ ತಾಕೀತು ಮಾಡಿದೆ. ಇದಕ್ಕೂ ಮುನ್ನವೇ ದೂರಸಂಪರ್ಕ ಸಚಿವಾಲಯವು ಈ ವಂಚನೆ ಕುರಿತು ಆಂತರಿಕ ತನಿಖೆಗೆ ಆದೇಶಿಸಿದೆ. ಮತ್ತೊಂದೆಡೆ, ಪೊಲೀಸರು ಕೂಡ ಕ್ರಿಮಿನಲ್ ತನಿಖೆಯ ಭಾಗವಾಗಿ ಸಚಿವಾಲಯದಿಂದ ದಾಖಲೆಗಳನ್ನು ಕೇಳಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ನಲ್ಲಿ 5,000ಕ್ಕೂ ಹೆಚ್ಚು ಕೃಷಿ ತ್ಯಾಜ್ಯ ಸುಡುವ ಪ್ರಕರಣ ದಾಖಲು: 1 ಕೋಟಿ ರೂ. ದಂಡ ವಿಧಿಸಿದ ಸರ್ಕಾರ

ದೆಹಲಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ನಡುವೆಯೇ, ಪಂಜಾಬ್‌ನಲ್ಲಿ ಕೃಷಿ...

50% ಸಮಾನ ಹೆಚ್ಚಳ ಷರತ್ತು; ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸುಪ್ರಿಯಾ ಸುಳೆ ಬೆಂಬಲ

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಎಲ್ಲ ರಾಜ್ಯಗಳಲ್ಲೂ ಯಾವುದೇ ತಾರತಮ್ಯವಿಲ್ಲದೆ '50%ರಷ್ಟು ಸಮಾನ’ವಾಗಿ...

ಭಾರತದ ಪ್ರಜಾಪ್ರಭುತ್ವವು 2014ರಲ್ಲಿಯೇ ನಾಶವಾಗಿದೆ: ರಾಹುಲ್ ಗಾಂಧಿ

ಭಾರತದ ಪ್ರಜಾಪ್ರಭುತ್ವವು ಸಾರ್ವಜನಿಕರ ಆಸ್ತಿಯಾಗಿದೆ. ಆದರೆ, ಅದು 2014ರಲ್ಲಿಯೇ ನಾಶವಾಗಿದೆ ಎಂದು...