ಉತ್ತರ ಪ್ರದೇಶ SIR | ಮತಪಟ್ಟಿಯಿಂದ 1.27 ಕೋಟಿ ಹೆಸರುಗಳು ಡಿಲೀಟ್‌; ಹಲವರ ಮರುಸೇರ್ಪಡೆಗೆ ಬಿಜೆಪಿ ತಂತ್ರ

Date:

ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 1.27 ಕೋಟಿ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಲಾಗಿದೆ. ಈ ಬೃಹತ್ ಅಳಿಸುವಿಕೆಯು ಆಡಳಿತಾರೂಢ ಬಿಜೆಪಿಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಿಜೆಪಿಯ ಅನುಕೂಲಕ್ಕಾಗಿಯೇ ದೇಶಾದ್ಯಂತ ಹೇರಲಾದ ಎಸ್‌ಐಆರ್‌, ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಮುಳುವಾಗಿ ಪರಿಣಮಿಸಿದೆ. ಬಿಜೆಪಿಯ ಸಾಂಪ್ರದಾಯಿಕ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಬಗೆಹರಿಸಲು ಬಿಜೆಪಿ ಆರು ಸದಸ್ಯರ ತಂಡವನ್ನು ರಚಿಸಿದೆ.

- Advertisement -

ತಮ್ಮ ಪಕ್ಷದ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ತಡೆಯಲು, ಬಿಜೆಪಿ ಹೈಕಮಾಂಡ್ ಶನಿವಾರ (ನ. 14) ಆರು ಮಂದಿ ಹಿರಿಯ ಸಂಘಟನಾ ಕಾರ್ಯದರ್ಶಿಗಳನ್ನು ಉತ್ತರ ಪ್ರದೇಶದ ವಿವಿಧ ವಲಯಗಳಿಗೆ ವಿಶೇಷ ಉಸ್ತುವಾರಿಗಳನ್ನಾಗಿ ನೇಮಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಐಆರ್‌ ಪ್ರಕ್ರಿಯೆಯನ್ನು ಬಹಿರಂಗವಾಗಿ ಟೀಕಿಸಿದ ಕೆಲವೇ ದಿನಗಳಲ್ಲಿ ಬಿಜೆಪಿ ಹೈಕಮಾಂಡ್‌ ಈ ತಂಡವನ್ನು ನೇಮಿಸಿದೆ. ಈ ವಿಶೇಷ ತಂಡದಲ್ಲಿ ಛತ್ತೀಸ್‌ಗಢದ ಕರಮ್‌ವೀರ್, ಮಧ್ಯಪ್ರದೇಶದ ಚಂದ್ರಶೇಖರ್, ರಾಜಸ್ಥಾನದ ಅಜಯ್ ಕುಮಾರ್, ಆಂಧ್ರಪ್ರದೇಶದ ಎನ್. ಮಧುಕರ್, ಜಾರ್ಖಂಡ್‌ನ ಪವನ್ ಸಾಯಿ ಹಾಗೂ ಮಹಾರಾಷ್ಟ್ರದ ಸತೀಶ್ ಧೋಂಡ್ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ಇದಕ್ಕೂ ಮುನ್ನ, ಎಸ್‌ಐಆರ್‌ನಿಂದ ಬಿಜೆಪಿಗೆ ಎದುರಾಗಿರುವ ಬಿಕ್ಕಟ್ಟಿನ ಕುರಿತು ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸಭೆ ನಡೆಸಿತ್ತು. ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಕಳೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯ ಹಿಂದು ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, ಹೊಸ ಮತದಾರರನ್ನು ಮತಪಟ್ಟಿಗೆ ಸೇರಿಸಲು ರಾಜ್ಯದಾದ್ಯಂತ ಮನೆಮನೆಗೆ ತೆರಳಿ ಅಭಿಯಾನ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರು.

ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಅಲ್ಲದೆ, ಮತದಾರರ ಸೇರ್ಪಡೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಶೀಘ್ರದಲ್ಲೇ ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ‘ಫಾರ್ಮ್ 6’ಅರ್ಜಿಗಳನ್ನು ವಿತರಿಸಲಿದೆ ಎಂದು ಅವರು ಘೋಷಿಸಿದ್ದಾರೆ. ರಾಜ್ಯದ ಒಟ್ಟು 402 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದು ಕ್ಷೇತ್ರದಲ್ಲೂ ತಲಾ 10,000 ದಿಂದ 15,000 ಹೊಸ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಗುರಿ ಮತ್ತು ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷರಿಗೆ ವಹಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಪ್ರಭಾವ ಕುಸಿಯುತ್ತಿರುವ ಆತಂಕ ಬಿಜೆಪಿ ನಾಯಕರಲ್ಲಿದೆ. ಇದೇ ಸಮಯದಲ್ಲಿ 1.27 ಕೋಟಿ ಮತದಾರರ ಅಳಿಸುವಿಕೆಯು ಬಿಜೆಪಿಗರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಲೋಕಸಭೆಗೆ 80 ಸಂಸದರನ್ನು ಕಳುಹಿಸುವ ಈ ರಾಜ್ಯದಲ್ಲಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2024ರ ಚುನಾವಣೆಯಲ್ಲಿ ಕೇವಲ 37 ಸ್ಥಾನಗಳಿಗೆ ಕುಸಿದಿತ್ತು. ಹೀಗಾಗಿ, ಮುಂಬರುವ ಚುನಾವಣೆಗಳಲ್ಲಿ ಉತ್ತರ ಪ್ರದೇಶವು ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿದೆ. ಯಾವುದೇ ಮತದಾರರ ಅಳಿಸುವಿಕೆಯಿಂದ ಪಕ್ಷಕ್ಕೆ ಮತ್ತೆ ನಷ್ಟವಾಗದಂತೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿ, ಹೊಸ ಮತದಾರರ ಸೇರ್ಪಡೆಗೆ ಮುಂದಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ...

ಲಡಾಖ್‌ನಲ್ಲಿ ಚುನಾವಣೆ ವಿರೋಧಿಸಿ ಪ್ರತಿಭಟನೆ; ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ಗೆ ಗೃಹ ಬಂಧನ

ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ ಅವರನ್ನು 60 ದಿನಗಳ ಕಾಲ ʻಗೃಹಬಂಧನʼದಲ್ಲಿ...

ನಕಲಿ ಕೋರ್ಟ್ ಆದೇಶದಡಿ 95 ವೆಬ್‌ಸೈಟ್ ನಿರ್ಬಂಧಿಸಿದ್ದ ಕೇಂದ್ರ ಸರ್ಕಾರ; ಮುಖಭಂಗದ ಬೆನ್ನಲ್ಲೇ ಅನ್‌ಬ್ಲಾಕ್‌ಗೆ ಆದೇಶ!

ನ್ಯಾಯಾಲಯಗಳ ನಕಲಿ ಆದೇಶಗಳನ್ನು ಆಧರಿಸಿ ಬರೋಬ್ಬರಿ 129 ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು...

7,300 ಕೋರ್ಟ್‌ಗಳ ಖಾಲಿ ಕುರ್ಚಿಗಳ ನಡುವೆ ನ್ಯಾಯಕ್ಕಾಗಿ ಕಾಯುತ್ತಿರುವ 5.8 ಕೋಟಿ ಪ್ರಕರಣಗಳು!

"ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಣೆಗೆ ಸಮ" ಎಂಬ ಮಾತಿದೆ. ಆದರೆ...