ಹುಲಿ ಉಗುರು | ‘ದೊಡ್ಡ’ವರ ಮೌಢ್ಯ, ಅಹಂಕಾರಕ್ಕೆ ಬಲಿಯಾಗುತ್ತಿವೆ ಅಪರೂಪದ ಜೀವಿಗಳು

Date:

ರಾಜ್ಯದಲ್ಲಿಂದು ಹೆಚ್ಚು ಚರ್ಚೆಗೆ ಕಾರಣವಾಗಿರುವ ಹುಲಿ ಉಗುರು ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಈ ಸಂದರ್ಭದಲ್ಲಿ ಹುಲಿಗಳ ನೈಜ ಪರಿಸ್ಥಿತಿ ಮತ್ತು ಮನುಷ್ಯ ಸ್ವಾರ್ಥ ಸಾಧನೆ, ಮೂಢನಂಬಿಕೆಗಳಿಂದ ಮಾಡುವ ಅಮಾನುಷ ಕೃತ್ಯಗಳಿಂದಾಗಿ ಅಪರೂಪದ ವನ್ಯ ಪ್ರಾಣಿಗಳು ಹೇಗೆ ಅವನತಿಯ ಹಾದಿ ಹಿಡಿಯುತ್ತಿವೆ ಎನ್ನುವುದನ್ನು ತಿಳಿಯುವುದು ಮುಖ್ಯ.

- Advertisement -

ಹುಲಿಯ ವೈಜ್ಞಾನಿಕ ಹೆಸರು “ಪ್ಯಾಂಥೆರಾ ಟೈಗ್ರಿಸ್”. ಹುಲಿ ಬೆಕ್ಕಿನ ಜಾತಿಗೆ ಸೇರುವ ಪ್ರಾಣಿಯಾಗಿದೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಹುಲಿಯ ಉಗುರಿನ ಲಾಕೆಟ್ ಬಳಸಿದ ಚಿತ್ರನಟರು ಸೇರಿದಂತೆ ಅನೇಕ ಗಣ್ಯರ ಮೇಲೆ ದೂರು ದಾಖಲಾಗಿವೆ. ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಲಾಕೆಟ್ ಧರಿಸಿದ್ಧಾರೆಂಬ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲಾಗಿದೆ. ಇದಾದ ನಂತರ ಅನೇಕ ಸಂಘಟನೆಗಳು ಚಿತ್ರನಟ ದರ್ಶನ್, ಜಗ್ಗೇಶ್ ಇವರ ಮೇಲೆಯೂ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿವೆ. ಅವರ ಮನೆಗಳಲ್ಲಿ ಶೋಧ ನಡೆಸಿರುವ ಪೊಲೀಸರು, ಅವರ ಬಳಿಯಿದ್ದ ಹುಲಿ ಉಗುರಿನ ಲಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಹುಲಿ ಉಗುರು ಧರಿಸಿದ್ಧಾರೆಂಬ ಆರೋಪವೂ ಕೇಳಿ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹಾಗಾದರೆ ಹುಲಿ ಉಗುರು ಧರಿಸುವ ಹಿಂದಿನ ಉದ್ಧೇಶ ಏನು ಎಂಬುದರ ಬೆನ್ನು ಹತ್ತಿ ಹೋದರೆ, ಆಶ್ಚರ್ಯವೆನಿಸುವ ಮಾಹಿತಿ ಸಿಗುತ್ತದೆ. ಹುಲಿ ಉಗುರು ಧರಿಸುವುದು ಪೌರುಷದ ಸಂಕೇತವೆಂದು ಭಾವಿಸಲಾಗಿದೆ. ಅವರ ಹಣದ ಅಹಂಕಾರವೂ ಅದರ ಹಿಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಹುಲಿ ಉಗುರುಗಳು ದುಷ್ಟ ಶಕ್ತಿಗಳನ್ನು ತಡೆಯುತ್ತವೆ; ಮಾಟ ಮಂತ್ರದಿಂದ ರಕ್ಷಣೆ ಮಾಡುವ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಶಕ್ತಿಯನ್ನು ಒಳಗೊಂಡಿದೆ ಎಂಬ ಮೌಢ್ಯ ಜನರಲ್ಲಿ ತುಂಬಿದೆ. ಅದರಲ್ಲಿಯೂ ಬಲಾಢ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ಉಗುರಿನ ಲಾಕೆಟ್ ಧರಿಸುತ್ತಾರೆಂಬುದು ಅಂಥ ಜನರ ಮೂಢ ಪ್ರವೃತ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಅನೇಕ ಮೂಢನಂಬಿಕೆಗಳ ಕಾರಣದಿಂದಲೇ ದೇಶದಲ್ಲಿ ಹುಲಿಗಳನ್ನು ಬೇಟೆಯಾಡಲಾಗುತ್ತಿದೆ ಎಂಬುದು ವಿಪರ್ಯಾಸದ ಸಂಗತಿ.

ಭಾರತ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ಹುಲಿ ಉಗುರುಗಳ ಮಾರಾಟ, ಖರೀದಿ ಮತ್ತು ಅಕ್ರಮ ಬಳಕೆ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ದಂಡ ಮತ್ತು ಸಜೆ ಎರಡೂ ಸಿಗಬಹುದು. ಕಾನೂನು ಪ್ರಕಾರ 3ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಒದಗಿಸಲಾಗುತ್ತದೆ. ಇಂತಹ ಕಠಿಣ ಕಾನೂನಿನ ಅರಿವಿದ್ದರೂ ಲಕ್ಷಾಂತರ ರೂಪಾಯಿ ನೀಡಿ ಹುಲಿ ಉಗುರು ಖರೀದಿಸುವುದು ಮತ್ತು ಅದನ್ನು ಧರಿಸುವುದು ನಿಜಕ್ಕೂ ಇವರ ಮೌಢ್ಯದ ಪರಮಾವಧಿ ಎನ್ನಬಹುದು. ಇಂತಹ ಮೌಢ್ಯವು ಕಾಡು ಪ್ರಾಣಿಗಳ ಅಕ್ರಮ ಬೇಟೆಗೆ ಕಾರಣವಾಗುತ್ತದೆ. ಇದಕ್ಕೊಂದು ನಿದರ್ಶನವೆಂದರೆ ಕುಖ್ಯಾತ ಹುಲಿ ಬೇಟೆಗಾರ, ಅತಿ ದೊಡ್ಡ ವನ್ಯಜೀವಿ ಅಪರಾಧಿ “ಉತ್ತರದ ವೀರಪ್ಪನ್” ಎಂದು ಕರೆಯಲ್ಪಡುತ್ತಿದ್ದ ನವದೆಹಲಿಯ ನಿವಾಸಿ ಸಂಸಾರಚಂದ್ ಅವರ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದಾಗ 2 ಹುಲಿ ಚರ್ಮ, 14 ಹುಲಿ ಕೋರೆಹಲ್ಲು, ಮೂರು ಕೆಜಿ ಚಿರತೆ ಮತ್ತು ಹುಲಿ ಪಂಜುಗಳು ಪತ್ತೆಯಾಗಿದ್ದವು.

Advertisements

1988ರಲ್ಲಿ ಈತನಿಂದ 25,800 ಹಾವಿನ ಚರ್ಮಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಖದೀಮ 2003ರಿಂದ 2004ರವರೆಗೆ ಕೇವಲ 11ತಿಂಗಳಲ್ಲಿ 40 ಹುಲಿ ಚರ್ಮ ಮತ್ತು 400 ಚಿರತೆ ಚರ್ಮ ವಹಿವಾಟು ಮಾಡಿದ್ದ. ನೇಪಾಳ ಮತ್ತು ಟಿಬೆಟ್‌ನ ಕೇವಲ 4 ಗ್ರಾಹಕರಿಗೆ 470 ಹುಲಿ ಚರ್ಮ ಮತ್ತು 2130 ಚಿರತೆ ಚರ್ಮಗಳನ್ನು ಮಾರಾಟ ಮಾಡಿದ್ದ ಎಂದು ಪೊಲೀಸರು ದೂರು ದಾಖಲಿಸಿದ್ದರು. ಸಂಸಾರಚಂದ್ ಅದೆಷ್ಟು ಕಾಡು ಪ್ರಾಣಿಗಳನ್ನು ಬೇಟೆಯಾಡಿರಬಹುದು ಎಂಬುದನ್ನು ಊಹಿಸಿಕೊಂಡರೆ ಆತಂಕ ಉಂಟಾಗುತ್ತದೆ.

ಹುಲಿ ಉಗುರು ಹುಲಿ ಚರ್ಮವನ್ನು ಖರೀದಿಸಿದವರೆಲ್ಲರೂ ಮೌಢ್ಯಕ್ಕೆ ಒಳಗಾದವರೇ ಎನ್ನಬಹುದು. ಕಾಡುಗಳ್ಳ ವೀರಪ್ಪನ್ ಕೂಡ ಇಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವೆಲ್ಲದಕ್ಕೂ ಕಾರಣ ಇವುಗಳನ್ನು ಖರೀದಿಸುವವರು. ಮೂಢನಂಬಿಕೆಯ ಕಾರಣದಿಂದ ಪ್ರಾಣಿಗಳನ್ನು ಎಲ್ಲಿಯವರೆಗೆ ಬಳಸಿಕೊಳ್ಳುವವರು ಇರುತ್ತಾರೋ ಅಲ್ಲಿಯವರೆಗೂ ಮಾರಾಟ ಮಾಡುವವರು, ಬೇಟೆಯಾಡುವವರು ಇದ್ದೇ ಇರುತ್ತಾರೆ‌.

ಭಾರತದ ಅನೇಕ ಭಾಗಗಳಲ್ಲಿ ಇಂದಿಗೂ ಸಹ ವಾಮಾಚಾರ, ವಶೀಕರಣ ನಡೆಸಲು ಪ್ರಾಣಿಗಳನ್ನು ಬಳಸಲಾಗುತ್ತಿದೆ. ಅದರಲ್ಲಿಯೂ ಇವರ ವಾಮಾಚಾರಕ್ಕೆ ಬಲಿಯಾಗುತ್ತಿರುವುದು ಅಪರೂಪದ ಪಕ್ಷಿಗಳು, ಪುನುಗು ಬೆಕ್ಕು, ಗೋಸುಂಬೆ, ಗೂಬೆ ಮುಂತಾದ ಅಳಿವಿನಂಚಿನಲ್ಲಿರುವ ಜೀವಿಗಳು. ಅವನ್ನು ವಾಮಾಚಾರಕ್ಕಾಗಿ ಹತ್ಯೆ ಮಾಡಲಾಗುತ್ತಿದೆ.

ದೇಶದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸಲೂ ಸಹ ಇಂತಹದ್ದೆ ವಿಷಯಗಳು ಕಾರಣವಾಗಿವೆ. ಏಪ್ರಿಲ್ 23ರಂದು ಮೈಸೂರಿನಲ್ಲಿ ನಡೆದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ 2022 ಹುಲಿ ಗಣತಿಯ ವರದಿಯನ್ನು ಪ್ರಧಾನಿ ಮೋದಿಯವಯರು ಬಿಡುಗಡೆ ಮಾಡಿದ್ದರು. ಹುಲಿ ಗಣತಿಯ ವರದಿಯ ಪ್ರಕಾರ ಭಾರತದಲ್ಲಿ 3167 ಹುಲಿಗಳಿವೆ ಎನ್ನಲಾಗಿತ್ತು. ವೈಲ್ಡ್ ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಎಂಬ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ 2006ರಲ್ಲಿ1,411 ಹುಲಿಗಳು, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967, 2022ರಲ್ಲಿ 3,682ರಷ್ಟು ಹುಲಿಗಳಿವೆ. ಈ ವರದಿಯು ಸ್ವಲ್ಪ ಮಟ್ಟಿಗೆ ಹುಲಿಗಳ ಸಂಖ್ಯೆಯ ಕುರಿತು ಆಶಾದಾಯಕ ಭಾವನೆಯನ್ನು ಮೂಡಿಸಿದೆ. ಆದರೂ ಸಹ ಸರ್ಕಾರವು ಇನ್ನಷ್ಟು ಕಠಿಣ ಕಾನೂನು ನಿಯಮಗಳನ್ನು ರೂಪಿಸಬೇಕಿದೆ. ಆಗ ಮಾತ್ರ ಕಾಡು ಪ್ರಾಣಿಗಳ ಬೇಟೆ ನಿಲ್ಲಬಹುದು.

ಇದನ್ನೂ ಓದಿದ್ದೀರಾ? ಬೆಳಗಾವಿ | ಕಂಬಳಿ ನೇಕಾರರ ಅತಂತ್ರ ಬದುಕಿಗೆ ಬೇಕು ಸರ್ಕಾರದ ಆಸರೆ

21ನೇಯ ಶತಮಾನದಲ್ಲಿಯೂ ಜನ ಮೂಢನಂಬಿಕೆಗಳಿಂದ ಹೊರಬರದಿರುವುದು ಶೋಚನೀಯ ಸಂಗತಿಯಾಗಿದೆ. ವಶೀಕರಣದ ಕಾರಣಕ್ಕೆ, ನಿಧಿ ಮುಂತಾದ ಮೂಢನಂಬಿಕೆಗಳ ಕಾರಣಕ್ಕೆ ಪ್ರಾಣಿಗಳನ್ನಷ್ಟೇ ಅಲ್ಲದೆ ಮಕ್ಕಳು ಮತ್ತು ಮಹಿಳೆಯರ ಜೀವಗಳನ್ನೂ ಸಾಕಷ್ಟು ಸಂದರ್ಭಗಳಲ್ಲಿ ಬಲಿ ಕೊಟ್ಟ ಪ್ರಕರಣಗಳನ್ನು ನಾವು ಕಾಣುತ್ತೇವೆ. ಆದರೆ, ಮೌಢ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾದವರು, ಕಾನೂನು ಗೌರವಿಸಬೇಕಾದ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ಗಣ್ಯರ ಹೆಸರು ಹುಲಿ ಉಗುರು ಪ್ರಕರಣದಲ್ಲಿ ಕೇಳಿ ಬರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಅರಣ್ಯಾಧಿಕಾರಿಗಳೂ ಸಹ ಯಾವುದೇ ತಾರತಮ್ಯ ಮಾಡದೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರವೂ ಕೂಡ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...