ರೈತರ ಹಾಗೂ ಗ್ರಾಮಗಳ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ: ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ

Date:

ಶ್ರೀನಿವಾಸಪುರ: ಅರಣ್ಯ ಇಲಾಖೆಯು ಗಡಿ ಗುರುತಿಸಿ ಸಿಮೆಂಟ್ ಪಿಲ್ಲರ್ ಅಳವಡಿಸುತ್ತಿರುವ ಕ್ರಮ ತಾಲ್ಲೂಕಿನಾದ್ಯಂತ ರೈತರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆಯ ಈ ಏಕಪಕ್ಷೀಯ ಧೋರಣೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬೆಂಬಲಕ್ಕೆ ಜನಪ್ರತಿನಿಧಿಗಳು ಧಾವಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆಯು ಗಡಿ ಗುರುತು ಮಾಡಿ ಸರ್ವೇ ಪಿಲ್ಲರ್ ಹಾಕುವ ಕಾರ್ಯವನ್ನು ಚುರುಕುಗೊಳಿಸಿದೆ. ಸೋಮವಾರವಷ್ಟೇ ಅರಣ್ಯ ಇಲಾಖೆಯ ಕಚೇರಿ ಮುಂದೆ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ತಾಲ್ಲೂಕಿನ ಕಸಬಾ ಹೋಬಳಿಯ ಶಿವಪುರ ಗ್ರಾಮದ ಜಮೀನುಗಳಲ್ಲಿ ದಿಢೀರ್ ಪಿಲ್ಲರ್‌ಗಳು ಪ್ರತ್ಯಕ್ಷವಾಗಿದ್ದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದರು. ಈ ಸಂಬಂಧ ಗ್ರಾಮಸ್ಥರು ತುರ್ತಾಗಿ ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ ನೆರವಿಗೆ ಧಾವಿಸುವಂತೆ ಕೋರಿದ್ದರು.

ಅಧಿಕಾರಿಗಳಿಗೆ ಶಾಸಕರ ಎಚ್ಚರಿಕೆ ಗ್ರಾಮಸ್ಥರ ಕರೆಗೆ ಓಗೊಟ್ಟು ಶಿವಪುರ ಗ್ರಾಮಕ್ಕೆ ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗೂ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಭೇಟಿ ನೀಡಿದರು. ಸ್ಥಳದಲ್ಲಿ ಅಳವಡಿಸಲಾಗಿದ್ದ ಪಿಲ್ಲರ್‌ಗಳನ್ನು ವೀಕ್ಷಿಸಿದ ಶಾಸಕರು ತಕ್ಷಣವೇ ಡಿ.ಎಫ್.ಒ (DFO) ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
“ಯಾವ ಕಾರಣಕ್ಕೆ ಪಿಲ್ಲರ್ ಹಾಕುತ್ತಿದ್ದೀರಿ? ರೈತರ ಹಾಗೂ ಗ್ರಾಮಗಳ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ಎಸ್‌ಐಟಿ (SIT) ವರದಿ ಬಂದು ಅಂತಿಮ ತೀರ್ಮಾನವಾಗುವವರೆಗೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು,” ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೈತರ ಜೊತೆ ನಾವಿದ್ದೇವೆ: ಸಂಸದರ ಭರವಸೆ ಇದೇ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಸಂಸದ ಮಲ್ಲೇಶ್ ಬಾಬು, “ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾವು ಮಾತುಕತೆ ನಡೆಸುತ್ತೇವೆ. ನಮಗೆ ತಿಳಿಯದಂತೆ ಏನಾದರೂ ಅಹಿತಕರ ವಿದ್ಯಮಾನಗಳು ನಡೆದರೆ ನಾವೇ ಖುದ್ದಾಗಿ ಸ್ಥಳಕ್ಕೆ ಬಂದು ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ,” ಎಂದು ಧೈರ್ಯ ತುಂಬಿದರು.ಜನಪ್ರತಿನಿಧಿಗಳ ಭೇಟಿಯಿಂದಾಗಿ ಆತಂಕದಲ್ಲಿದ್ದ ಶಿವಪುರ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಅರಣ್ಯ ಇಲಾಖೆಯ ಮುಂದಿನ ನಡೆ ಏನು ಎಂಬುದು ಇಡೀ ತಾಲ್ಲೂಕಿನಲ್ಲಿ ಕುತೂಹಲ ಮೂಡಿಸಿದೆ.

ಇದನ್ನು ಓದಿದ್ದೀರಾ..?ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಲು ಬಲಗೈ ಜಾತಿಗಳ ಒಕ್ಕೂಟ ಆಗ್ರಹ

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಜೆಡಿಎಸ್ ಕೋಲಾರ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಮುಖಂಡರಾದ ಮನು ಸೇರಿದಂತೆ ಹಲವು ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

- Advertisement -

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...

ದೆಹಲಿಯಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಶಿವಮೊಗ್ಗ ಕಾನಿಪಸ ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ...

ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಉಪಚರಿಸುವ ಚಿತ್ರಕೂಟ: ಡಾ. ಪ್ರದೀಪ್

ರೋಗಿಗಳನ್ನು ಗ್ರಾಹಕರಂತೆ ಕಾಣದೆ ಮನೆಯ ಸದಸ್ಯರಂತೆ ಅಕ್ಕರೆಯಿಂದ ಉಪಚರಿಸುವ ಅಪರೂಪದ ವಾತಾವರಣ...