ಸಚಿವ ಕೃಷ್ಣ ಬೈರೇಗೌಡರ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ವಿಪಕ್ಷಗಳು ಮಸಿ ಬಳಿಯುವ ಕುತಂತ್ರ : ಅನ್ವರ್ ಪಾಷ

Date:

ಕೋಲಾರ : ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮೂಲತಹಃ ಕೋಲಾರ ತಾಲ್ಲೂಕಿನವರಾಗಿದ್ದು ಈಗಾಗಲೇ ೬ ಬಾರಿ ಶಾಸಕರಾಗಿ ಆಯ್ಕೆಯಾಗಿ 3 ಬಾರಿ ವಿವಿಧ ಸಚಿವ ಸ್ಥಾನಗಳನ್ನು ಪಡೆದು ಯಾವೂದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸ್ವಚ್ಚವಾದ ಶುದ್ದವಾದ ಆಡಳಿತ ನಡೆಸಿ ಸಾಕಷ್ಟು ಅಭಿವೃದ್ದಿ ಪಡೆದಿರುವಂತ ನಂಬರ್ ಓನ್ ಸಚಿವರಾಗಿ ಪಡೆದಿರುವಂತ ಹೆಗ್ಗಳಿಕೆಯನ್ನು ಸಹಿಸದೆ ಸುಳ್ಳು ಅರೋಪ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕುತಂತ್ರ ಮಾಡಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಕೆ.ಎಂ.ಉಮಾಶಂಕರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದ ನಂತರದಲ್ಲಿ ಕಾಂಗ್ರೇಸ್ ಮುಖಂಡರಾದ ಅನ್ವರಪಾಷ ಮಾತನಾಡಿ ಕಳೆದ ೧೯೫೩ರಲ್ಲಿ ಮೈಸೂರಿನ ಮಹಾರಾಜರಾದ
ಶ್ರೀಕಂಠದತ್ತ ಒಡೆಯರ್ ಅವರು ತಮ್ಮ ಹೆಸರಿನಲ್ಲಿದ್ದ ಜಮೀನು ಗರುಡಾಪಾಳ್ಯದ ಚೌಡೇಗೌಡರಿಗೆ ಲೀಸ್‌ಗೆ ನೀಡಿದ್ದ ಭೂಮಿಯನ್ನು ನಂತರ ಖರೀದಿಗೆ ಇಟ್ಟಿದ್ದರು ನಂತರದಲ್ಲಿ ಹರಾಜಿನಲ್ಲಿ ಅದನ್ನು ಪಡೆಯಲು ೨ ಸಾವಿರ
ರೂ ಮುಂಗಡ ನೀಡಿ ಒಂದಷ್ಟು ಕಾಲವಕಾಶ ಪಡೆದಿರು ಅದರೆ ನಿಗಧಿತಅವಧಿಯಲ್ಲಿ ಪಡೆಯಲಾಗದ ಕಾರಣ ಗರುಡಪಾಳ್ಯದ ಜಮೀನು ಮಹರಾಜರು ಹಬೀಬ್ ಎಂಬುವರಿಗೆ ನೊಂದಣಿ ಮಾಡಿ ಕೊಟ್ಟ ಬಿಟ್ಟಿದ್ದರೂ ನಂತರ ಚೌಡೇಗೌಡರು ಇದರ ವಿರುದ್ದ ನ್ಯಾಯಾಲಯ ಮೆಟ್ಟಿಲು ಮುಂದಾಗಿದ್ದ ಸಂದರ್ಭಧಲ್ಲಿ ಅವರು ರಾಜಿ ಸಂದಾನ ನಡೆದು ಜಮೀನಿನ ಮೌಲ್ಯದ ೪೮ ಸಾವಿರ ರೂ ಜೂತೆಗೆ ಹೆಚ್ಚುವರಿಯಾಗಿ ೧೦ ಸಾವಿರ ರೂ ನೀಡಿ ನೊಂದಣಿ ಮಾಡಿಸಿ ಕೊಂಡರು.

- Advertisement -

ನಂತರದಲ್ಲಿ ಚೌಡೇಗೌಡರ ಪುತ್ರರಾದ ಬೈರೇಗೌಡರು ತಮ್ಮ ವ್ಯಾಸಂಗ ಮುಗಿಸಿ ಗ್ರಾಮಕ್ಕೆ ಅಗಮಿಸಿ ಕೃಷಿಯನ್ನು ಅಭಿವೃದ್ದಿ ಪಡೆಸಿ ಟ್ರಾಕ್ಟರ್ ಸಹ ಖರೀದಿಸಿ ತಂದರು ಇವರ ಜೂತೆ ಸಹೋದರಾರಾದ ಸೊಣ್ಣೇಗೌಡ ಮತ್ತು
ಚನ್ನರಾಯಗೌಡರು ಕೈ ಜೋಡಿಸಿದ್ದರು. ಗರುಡಪಾಳ್ಯದ ಚಿರಚರ ಆಸ್ತಿಗಳ ಪೈಕಿ ಕೆರೆ, ಸ್ಮಶನ ಗುಂಡು ತೋಪು,
ಗೋಕುಂಟೆ ಎಲ್ಲವೂ ಸಹ ಚೌಡೇಗೌಡರಿಗೆ ಸೇರಿತ್ತು. ಇವುಗಳನ್ನು ನಿರ್ವಹಿಸುವ ಮೂಲಕ ಸುಮಾರು ೮೫೦ ಎಕರೆಯಲ್ಲಿ ೨ ಕೆರೆಗಳು ಸ್ಮಶನದ ಸ್ವತ್ತುಗಳು ಇವರದೇ ಅಗಿತ್ತು ನೀರಾವರಿ ನಾಲೆಗಳು ಸಹ ಇವರಿಗೆ ಸೇರಿದ್ದವು ಈ ಎಲ್ಲಾ ದಾಖಲೆಗಳನ್ನು ಸದನದಲ್ಲಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಕಾಂಗ್ರೇಸ್ ಮುಖಂಡರಾದ ಶ್ರೀ ಕೃಷ್ಣ ಮಾತನಾಡಿ ಬೆಂಗಳೂರಿನ ಭೂಮಿ ದರಕ್ಕಿಂತ ನರಸಾಪುರ ವೇಮಗಲ್ ಮಾಲೂರುಗಳಲ್ಲಿ ಹೆಚ್ಚು ದರವಾಗಿದೆ. ಹಾಗಾಗಿ ಕೃಷ್ಣ ಬೈರೇಗೌಡರ ಕುಟುಂಬಕ್ಕೆ ಹೆಚ್ಚು ಭೂಮಿ ಇರುವುದು ಕಂಡು
ಅವರನ್ನು ಮಟ್ಟ ಹಾಕಬೇಕೆಂಬ ಕುತಂತ್ರ ಹೊಡಿದ್ದಾರೆ ಅವರ ಏಳ್ಗೆಯನ್ನು ಸಹಿಸದ ವಿಪಕ್ಷ ನಾಯಕರಾದ ಆರ್,ಆಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಯಾವೂದೇ ದಾಖಲಾತಿಗಳಿಲ್ಲದೆ ಆರೋಪಗಳನ್ನು ಮಾಡುತ್ತಿರುವುದರಲ್ಲಿ ಯಾವೂದೇ ಹುರಳಿಲ್ಲ. ಇದರ ಸತ್ಯಸತ್ಯತೆಗಳನ್ನು ಅರಿಯಲು ಯಾವೂದೇ
ಖಾಸಗಿ ತನಿಖಾ ಸಂಸ್ಥೆಗಳನ್ನು ನೇಮಿಸಲು ಕೃಷ್ಣ ಬೈರೇಗೌಡರೇ ಸೂಚಿಸಿದ್ದಾರೆ.

ಆರೋಪವು ರುಜುವಾತು ಮಾಡಿದರೆ ತಮಗೆ ಬಂದಿರುವ ಪಿತೃರ್ಜಿತ ಆಸ್ತಿಯನ್ನು ಬಿಟ್ಟು ಕೊಡಲು ಸಿದ್ದರಾಗಿರುವುದಾಗಿ ಈಗಾಗಲೇ ಘೋಷಿದ್ದರೂ ಸಹ ಪುಕ್ಕಟೆ ಪ್ರಚಾರ ಪಡೆಯಲು ಪ್ರತಿಭಟನೆ, ವಿಪಕ್ಷಗಳು ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆಂದು ವ್ಯಂಗವಾಡಿದರು.

ಈಗಾಗಲೇ ನರಸಾಪುರ ಕೆರೆಗಳನ್ನು ಅಭಿವೃದ್ದಿ ಪಡೆಸಿ ಬೊಟಿಂಗ್ ನಡೆಸಲು ಅನುವು ಮಾಡಿ ಕೊಡುವಂತೆ ಪ್ರವಾಸಿ ತಾಣವಾಗಿ ಪರಿವರ್ತಿಸಿರುವ ಹೆಗ್ಗಳಿಕೆ ಕೃಷ್ಣಬೈರೇಗೌಡರಿಗೆ ಸಲ್ಲ ಬೇಕೆಂದರು. ಕೆರೆಗಳಲ್ಲಿ ನೀರು ನಿಲುಗಡೆಗೆ ಚೆಕ್
ಡ್ಯಾಮ್ ಸೇರಿದಂತೆ ಕೆರೆಯ ಅಚ್ಚಕಟ್ಟು ಪ್ರದೇಶವನ್ನು ಸಾಕಷ್ಟು ಅಭಿವೃದ್ದಿ ಪಡೆಸಿದ್ದಾರೆ. ಕೈಗಾರಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಸರ್ಕಾರದಿಂದ ಕಲ್ಪಿಸಿ ಕೊಟ್ಟಿದ್ದಾರೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ತಂತ್ರಜ್ಞಾನವನ್ನು ಅಭಿವೃದ್ದಿ ಪಡೆಸಿ ರೈತರಿಗೆ ಅನುವು ಮಾಡಿದ್ದಾರೆ. ಪಿ.ನಂಬರ್, ಪೋಡಿ ಇತ್ಯಾದಿಗಳ
ವಿವಾದಿತ ಪ್ರಕರಣಗಳನ್ನು ಬಗೆಹರಿಸಿದ್ದಾರೆ. ಇದೆಲ್ಲಾವನ್ನು ಸಹಿಸದೆ ವಿಪಕ್ಷದವರು ಕೃಷ್ಣ ಬೈರೇಗೌಡರ ಹೆಸರಿಗೆ ಮಸಿ ಬಳಿಯುವಂತ ವಿಫಲ ಪ್ರಯತ್ನ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಇದನ್ನು ಓದಿದ್ದೀರಾ..? ಜಮಾತೆ ಇಸ್ಲಾಮಿ ಹಿಂದ್ ಕೋಲಾರ ವತಿಯಿಂದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಸನ್ಮಾನ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಇದಾಯುತುಲ್ಲಾ ಷರೀಷ್. ಯುವಕಾಂಗ್ರೇಸ್ ಮುಖಂಡ ರವೀಂದ್ರ, ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಅಧಿಸೂಚನೆ ಪ್ರಕಟ, ಅಕ್ಟೊಬರ್ 23ಕ್ಕೆ ಮತದಾನ

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸೆ.29ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬೆಳಗಾವಿ...

ವಿಜಯಪುರ | ಹಿಂದಿ ಭಾಷೆ-ಸಾಹಿತ್ಯದ ವಿವಿಧ ಆಯಾಮಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ...

ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೇತಮಂಗಲದಲ್ಲಿರುವ ಸಮಾಜ...

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...