ಕಲಬುರಗಿ | 6 ವರ್ಷದ ಬಾಲಕಿ ಮೇಲೆ 75 ವರ್ಷ ವೃದ್ಧನಿಂದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

Date:

ಆಳಂದ ಪಟ್ಟಣದಲ್ಲಿ 75 ವರ್ಷದ ವೃದ್ಧನೊಬ್ಬ 6 ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಶುಕ್ರವಾರ ಪ್ರಕರಣ ದಾಖಲಿಸಿಕೊಂಡ ಆಳಂದ ಪೋಲೀಸ್‌ರು ಆರೋಪಿಯನ್ನು ಬಂಧಿಸಿದ್ದಾರೆ.

ಪಟ್ಟಣದ ಸನ್ನಿ ಮೌಲಾನ್‌ ಸಾಬ್‌ ಮುಲ್ಲಾ ಬಂಧಿತ ಆರೋಪಿ, ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಮುಂದಾದಾಗ ಬಾಲಕಿ ಗಾಬರಿಗೊಂಡಿದ್ದಾಳೆ. ಬಾಲಕಿ ಜೋರಾಗಿ ಕಿರುಚಿ ಮನೆಯಿಂದ ಅಳುತ್ತಾ ಹೊರ ಬಂದಿದ್ದಾಳೆ. ಹೊರಗಿನಿಂದ ಪೋಷಕರು ಮನೆಗೆ ಬರುವಷ್ಟರಲ್ಲೆ ವೃದ್ಧ ಪರಾರಿಯಾಗಿದ್ದಾನೆ.

ಬಾಲಕಿಯ ಮನೆ ಸುತ್ತಲಿನ ನಿವಾಸಿಗಳು ಸೇರಿದಂತೆ ನೂರಾರು ಜನ ನೀಚ ಕೃತ್ಯ ಖಂಡಿಸಿ ಆಳಂದ ಪೋಲೀಸ್‌ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದರು, ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗೆ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸಂಬಂಧ ಆಳಂದ ಪೋಲೀಸ್‌ ಠಾಣೆ ಪಿಎಸ್‌ಐ ಮಹಾಂತೇಶ ಪಾಟೀಲ್‌ ಈದಿನ.ಕಾಮ್‌ ದೊಂದಿಗೆ ಮಾತನಾಡಿ, “75 ವರ್ಷದ ವೃದ್ಧನೊಬ್ಬ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ಜರುಗಿದೆ, ನಿನ್ನೆ ಶುಕ್ರವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಮುಸ್ಲಿಂ ವಿದ್ಯಾರ್ಥಿಗೆ ಹೊಡೆಸಿದ್ದ ವಿಡಿಯೋ ವೈರಲ್ : ಶಿಕ್ಷಕಿಯ ವಿರುದ್ಧ ಎಫ್‌ಐಆರ್

“ಬಾಲಕಿ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿರುವುದು ಅಮಾನವೀಯ ಘಟನೆ, ಆಳಂದ ತಾಲೂಕಿನಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂದು ಖಂಡಿಸಿ, ಈ ಕುರಿತು ಪೋಲೀಸ್‌ ಇಲಾಖೆ ಎಚ್ಚೆತುಕೊಂಡು ಮಹಿಳಾ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳ ದರ್ಪ; ಬದುಕು ಬೀದಿ ಪಾಲು

ಶಿಲ್ಪಕಲೆಗಳ ತವರೂರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ, ಚನ್ನಕೇಶವನ ನಾಡು ವಗೈರೆ...

ಹಾಸನ | 3ನೇ ಅವಧಿಗೆ ಮೋದಿ ಪ್ರಧಾನಿ; 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದ ಮೋದಿ ಭಕ್ತ

ಮೋದಿ 3ನೇ ಬಾರಿಗೆ ಪ್ರಧಾನಿಯಗಬೇಕೆಂದು ಹರಕೆ ಹೊತ್ತಿದ್ದ ಮೋದಿ ಅಭಿಯಾನಿಯೊಬ್ಬ, 12...

ಜೂನ್‌ 16ರಂದು ಬೆಳಗ್ಗೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ಆರಂಭ

ಜೂನ್ 16ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯುಪಿಎಸ್‌ಸಿ) ನಡೆಯುವ ಕಾರಣ...

ವಂಚನೆ, ಜೀವ ಬೆದರಿಕೆ ಆರೋಪ: ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ಎಫ್‌ಐಆ‌ರ್

ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ...