ಬೀದರ್‌ | ಸಮ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಅಗತ್ಯ : ನಟ ಚೇತನ್

Date:

ಸಂವಿಧಾನದ ಆಶಯದಂತೆ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಅಭಿವೃದ್ಧಿ ಹೀಗೆ ಎಲ್ಲವೂ ಸಮಾನವಾಗಿ ಇರಬೇಕೆಂಬ ಕನಸಿನೊಂದಿಗೆ ಕಳೆದ 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಪರ್ಯಾಯ ರಾಜಕಾರಣದಿಂದ ಸಮ ಸಮಾಜ ಕಟ್ಟುವ ಗುರಿ ನನ್ನದಾಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

- Advertisement -

ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ ‘ಸಮಾನತಾವಾದಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ʼನಾವು ಸಮ ಸಮಾಜ ನಿರ್ಮಾಣಕ್ಕಾಗಿ ಪರ್ಯಾಯ ರಾಜಕಾರಣ‌ದ ಸಸಿ ನೆಡುತ್ತಿದ್ದು, ಸತ್ಯ , ಪ್ರಾಮಾಣಿಕ, ಸೇವಾ ಮನೋಭಾವದೊಂದಿಗೆ ರಾಜಕೀಯ ಚಳವಳಿಯ ಪ್ರಯತ್ನಕ್ಕೆ ಮುಂದಾಗಿದ್ದು,‌ ಇದು ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಗೆ ಮುಟ್ಟಬಹುದು ಎಂಬ ಸದಾಶಯ ನಮ್ಮದಾಗಿದೆ. ಅವ್ಯವಸ್ಥೆ, ಅನ್ಯಾಯ ವಿರುದ್ಧ ದನಿಯೆತ್ತುವ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆʼ ಎಂದು ತಿಳಿಸಿದರು.

ʼಡಾ.ಅಂಬೇಡ್ಕರ್‌, ಪೆರಿಯಾರ್‌ ಹಾಗೂ ಕಾನ್ಸಿರಾಮ್‌ ಬಿಟ್ಟರೆ ಸಮಾನತೆ ಸಮಾಜ ಕಟ್ಟಲು ಯಾರೂ ಬರಲಿಲ್ಲ. ಇಂದಿನ ರಾಜಕಾರಣಿಗಳು ರಸ್ತೆ, ಕಟ್ಟಡಗಳು ನಿರ್ಮಿಸುತ್ತಾರೆ, ಭ್ರಷ್ಟಾಚಾರ ಸೇರಿದಂತೆ ಎಲ್ಲವೂ ಯಥಾಸ್ಥಿತಿ ಕಾಪಾಡಿಕೊಂಡು ನಾನು ಮುಖ್ಯಮಂತ್ರಿ ಆಗಬೇಕೆಂದು ಬರ್ತಾರೆ, ಹೊರತು ಸಮ ಸಮಾಜ ಕಟ್ಟಲು ಬಂದಿರುವುದು ನೋಡಲಿಲ್ಲʼ ಎಂದರು.

ʼಪರ್ಯಾಯ ರಾಜಕೀಯದಿಂದ ಸಮ ಸಮಾಜ ಕಟ್ಟಲು ಸಾಧ್ಯ. ಒಂದು ವರ್ಗ, ಜಾತಿ ಧರ್ಮಕ್ಕೆ ಸೀಮಿತ ಆಗದೇ ಇದು ಕರ್ನಾಟಕದ ಸಮ ಸಮಾಜವಾದದ ಪಕ್ಷವಾಗಿದ್ದು, ಮಾದರಿ ಕರ್ನಾಟಕ ರೂಪಿಸುವ ಉದ್ದೇಶದಿಂದ ರಾಜ್ಯದ 25ಕ್ಕೂ ಹೆಚ್ಚಿನ ಮತಕ್ಷೇತ್ರದಲ್ಲಿ ಜನಪರ ಸಂಘಟನೆಗಳ ಪ್ರಮುಖರೊಂದಿಗೆ ಕೈಜೋಡಿಸಿ ಸಿದ್ದತೆಗಳನ್ನು ಮಾಡುತ್ತಿದ್ದೇವೆ. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಇಲ್ಲ. ಪಕ್ಷದ ಸಿದ್ಧಾಂತ ಮುನ್ನಡೆಸುವ ಜವಾಬ್ದಾರಿ ಮಾತ್ರ ನನ್ನದು. ಅಧಿಕಾರಿ ಬೇರೆಯವರೇ ನಡೆಸಲಿ’ ಎಂದು ಹೇಳಿದರು.

ʼಅಸಮಾನತೆಯ ಪಕ್ಷಗಳು ಅಧಿಕಾರ ಪಡೆದುಕೊಳ್ಳುವ ಗುರಿಯಿಂದ ಪ್ರಬಲ ಜಾತಿಗಳೊಂದಿ ಕೈಜೋಡಿಸಿ ಓಲೈಸುತ್ತಿವೆ. ಆದರೆ ಅನ್ಯಾಯಕ್ಕೊಳಗಾದ ದಲಿತ, ಒಬಿಸಿ, ಆದಿವಾಸಿ ಹಾಗೂ ಬಹುಜನರಿಗೆ ಆಗಿರುವ ನ್ಯಾಯ ಸರಿಪಡಿಸುವ ಆಲೋಚನೆ ಇಂದಿನ ಪಕ್ಷಗಳಿಗೆ ಇಲ್ಲ.‌ ಅಧಿಕಾರ ಹಿಡಿಯಬೇಕಾದರೆ ಏನೆಲ್ಲಾ ಮಾಡುತ್ತಾರೆ. ಅಧಿಕಾರ ಸಿಕ್ಕನಂತರ ಏನು ಮಾಡಬೇಕೆಂಬ ಆಲೋಚನೆ ಮರೆಯುತ್ತಾರೆ.‌ ಹೀಗಾಗಿ ರಾಜ್ಯಕ್ಕೆ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆದರ್ಶ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್‌ ತಳಿ ಎತ್ತು

ಸಂವಾದದಲ್ಲಿ ಸಂಯೋಜಕರಾದ ಸುಭಾಷ ಲಾಧಾ, ರಾಹುಲ್ ಖಂದಾರೆ, ಸುಧಾಕರ್ ಕೊಳ್ಳೂರ್, ಗಣಪತಿ ವಾಸುದೇವ, ಶಿವು ಕಾಂಬಳೆ, ರಹೀಂ ಸಾಬ್ ಸೇರಿದಂತೆ ಪ್ರಮುಖರಾದ ನಂದಾದೀಪ ಬೋರಾಳೆ, ಡಾ.ಮನ್ಮಥಪ್ಪ ಡೋಳೆ, ಕಪೀಲ್ ಗೋಡಬೋಲೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...

ಬೀದರ್‌ | ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿ ದಾಳಿ, ಬ್ರಿಮ್ಸ್‌ಗೆ ದಾಖಲು

ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ,...