ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಏ. ೧೪ ರಂದು ಮಂಗಳವಾರ ನಡೆಯಲಿರುವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆಗೆ ಪ್ರತಿಯೊಂದು ಗ್ರಾಮಗಳಿಂದ ಪಲ್ಲಕ್ಕಿಗಳನ್ನು ತರುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ದಲಿತ ಧಮನಿತರ ಸೇವಾ ಸಂಘಟನೆಯ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ತಿಳಿಸಿದರು,
ನಗರದ ನಚಿಕೇತನ ನಿಲಯದಲ್ಲಿ ವಿವಿಧ ದಲಿತರ ಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ನಂತರ ಮಾತನಾಡಿದ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಯಿಂದ ಬರಲು ಪಲ್ಲಕ್ಕಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ತಲಾ 10 ಸಾವಿರ ನೀಡಿದ್ದಾರೆ ಜೊತೆಗೆ ನಗರದಾದ್ಯಂತ ನೀಲಿ ಬಾವುಟಗಳಿಂದ ಶೃಂಗಾರ ಮಾಡಲಾಗಿದೆ ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಎಲ್ಲಾ ಸಮುದಾಯದ ಗಣ್ಯರು ಪಕ್ಷಾತೀತವಾಗಿ ಭಾಗವಹಿಸುವಂತೆ ಮನವಿ ಮಾಡಿದರು
ದಲಿತ ಸಂಘಟನೆಗಳ ಸಂಯುಕ್ತರಂಗದ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ಕಾರ್ಯಕ್ರಮವು ಬೆಳಗ್ಗೆ 10: 30 ಗಂಟೆಗೆ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಡೂಮ್ ಲೈಟ್ ವೃತ್ತ, ಕ್ಲಾಕ್ ಟವರ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತ, ನಲ್ಲಗಂಗಮ್ಮ ದೇವಸ್ಥಾನ ವೃತ್ತ ಮೆಕ್ಕೆ ವೃತ್ತ ಟಿ.ಚನ್ನಯ್ಯ ರಂಗಮಂದಿರ ವರೆಗೆ ಸ್ತಬ್ದ ಚಿತ್ರಗಳ ಮೆರವಣಿ ಹಾಗೂ ಮಧ್ಯಾಹ್ನ 2 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡ ರಾಜಕುಮಾರ್ ಮಾತನಾಡಿ ಈ ಬಾರಿ ರಾಜ್ಯವೇ ಕೋಲಾರದಂತ ನೋಡುವಂತೆ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ ದಲಿತ ಅಲ್ಪಸಂಖ್ಯಾತರು, ಹಾಗೂ ಅಹಿಂದ ವರ್ಗದ ಒಗ್ಗಟ್ಟಿನಿಂದ ಈ ಜಯಂತಿಯನ್ನು ಆಚರಿಸಲಾಗುತ್ತಿದೆ ಕೆಲವು ಕಡೆ ಪಾಣಕ ಮಜ್ಜಿಗೆ ನೀರು ವ್ಯವಸ್ಥೆಯನ್ನು ಸ್ವಯಂಪ್ರೇರಿತವಾಗಿ ಮಾಡಲಾಗುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಲು ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ನಸೀರ್ ಅಹ್ಮದ್ ರಾಜೀನಾಮೆ ಪಡೆದರೆ ಉಗ್ರ ಹೋರಾಟದ ಎಚ್ಚರಿಕೆ: ಎನ್.ಅಂಬರೀಷ್
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಗಂಗಮ್ಮನಪಾಳ್ಯ ರಾಮಯ್ಯ, ಅಪ್ಪಿನಾರಾಯಣಸ್ವಾಮಿ, ಮತ್ತಿಕುಂಟೆ ಕೃಷ್ಣಪ್ಪ, ಇರಗಸಂದ್ರ ಮುನಿರಾಜು, ಅಂಬೇಡ್ಕರ್ ನಗರ ರವಿ, ಸಂಗೊಂಡಹಳ್ಳಿ ಮುನಿಯಪ್ಪ, ನಡುಪಳ್ಳಿ ವೆಂಕಟೇಶ್, ಮೋಚಿಪಾಳ್ಯ ನಾಗೇಶ್, ಮುಂತಾದವರು ಇದ್ದರು.




