- ಜೆಡಿಎಸ್ ನಾಯಕರ ವಿರುದ್ಧ ಎ.ಟಿ ರಾಮಸ್ವಾಮಿ ವಾಗ್ದಾಳಿ
- ಅಕ್ರಮ ಪ್ರಶ್ನಿಸಿದ್ದೇ, ನನ್ನ ವಿರುದ್ಧ ಮುಗಿ ಬೀಳಲು ಕಾರಣ
ಹಾಸನ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದ ಜೆಡಿಎಸ್‌ನವರು ಇನ್ನೂ ರಾಜ್ಯದ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ? ಹಾಸನ ಎಂದರೆ ಇವರ ಮನೆಯ ಆಸ್ತಿನಾ? ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ಇತ್ತೀಚೆಗೆ ಬಿಜೆಪಿ ಸೇರಿದ ಎ.ಟಿ ರಾಮಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಎಚ್‌ಡಿಸಿಸಿ ಬ್ಯಾಂಕ್‌ನಲ್ಲಿ ರೈತರ ಹೆಸರನ್ನು ಬಳಸಿಕೊಂಡು, ರೈತರಿಗೆ ತಿಳಿಯದ ರೀತಿಯಲ್ಲಿ ಜೆಡಿಎಸ್ ನಾಯಕರು ಸಾಲ ಮಾಡಿಸಿರುವುದು ಸತ್ಯ. ಅನೇಕ ರೈತರ ಪಹಣಿಯಲ್ಲಿ ಸಾಲ ಇರುವುದಾಗಿ ಬಂದಿತ್ತು. ಆದರೆ, ಸತ್ಯಾಂಶ ಹೇಳಲು ಹೋದರೆ ಇವರಿಗೆ ಕೋಪ” ಎಂದು ಕುಟುಕಿದರು.
“ಎಚ್‌ಡಿಸಿಸಿ ಬ್ಯಾಂಕ್ ನಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಮಾಡಿಸಿದ್ದಾರೆ. ನಾನು ಈ ವಿಚಾರವನ್ನು ಕೆಡಿಪಿ ಸಭೆಯಲ್ಲಿ ಪ್ರಶ್ನೆ ಮಾಡಲು ಹೋದರೆ, ಇದೇ ರೇವಣ್ಣ ನನ್ನನ್ನು ತಡೆದರು. ಇಂತ ಅಕ್ರಮವನ್ನು ಪ್ರಶ್ನೆ ಮಾಡಿದ್ದು, ಅವರು ನನ್ನ ವಿರುದ್ಧ ಮುಗಿ ಬೀಳಲು ಕಾರಣವಾಯಿತು. ಇವರು ರೈತರ ಹೆಸರು ಹೇಳ್ಕೊಂಡು, ರೈತರ ಅನ್ನಕ್ಕೆ ಮಣ್ಣು ಹಾಕೋ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?
ಅವರ ಸಂಬಂಧಿಕರನ್ನು ಅರಕಲಗೂಡಿನಲ್ಲಿ ಬಿಟ್ಟು ತಾನೇ ಅಭ್ಯರ್ಥಿ ಎಂದು ಪ್ರಚಾರ ಮಾಡಿಸಿದ್ದು. ಇದು ಅವರಿಗೆ ಗೊತ್ತಿಲ್ಲದೆ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.
40 ಪರ್ಸೇಂಟ್ ಸರ್ಕಾರ ಎಂಬ ಆರೋಪ ಇದ್ದರೂ ಬಿಜೆಪಿಗೆ ಸೇರ್ಪಡೆ ಆಗಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರಿಸಿ,”ಯಾವ ವ್ಯವಸ್ಥೆ ಸರಿ ಇದೆ ಹೇಳಿ? ಇದೇ ಕಾರಣಕ್ಕೆ ದೆಹಲಿ ವರಿಷ್ಠರು ಕೂಡ ಹೇಳಿ ಕಳಿಸಿದ್ದಾರೆ. ವ್ಯವಸ್ಥೆ ಕೊಂಚ ಕೆಟ್ಟಿದೆ ಅದನ್ನು ಸರಿ ಮಾಡಿ ಅಂತನೂ ಹೇಳಿದ್ದಾರೆ. ಹೀಗಾಗಿ ಇದನ್ನು ಸರಿ ಮಾಡಿಕೊಂಡು ಹೋಗೋ ಜವಾಬ್ದಾರಿ ಕೂಡ ಇದೆ” ಎಂದರು.