ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

Date:

“ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ ಕಾಲದಿಂದಲೂ ಭಾರತದ ಅರಸರು ಯುದ್ಧದ ಸಂದರ್ಭದಲ್ಲಿ ರಕ್ಷಣೆಗಾಗಿ ಕಾಳಿ, ದುರ್ಗಾ, ಭವಾನಿ ಮುಂತಾದ ಶಕ್ತಿ ದೇವತೆಗಳನ್ನು ಆರಾಧಿಸುತ್ತಿದ್ದರು” ಎಂಬುದನ್ನು ಹೊಸ NCERT ಪಠ್ಯಪುಸ್ತಕವು ಉಲ್ಲೇಖಿಸಿದೆ.

- Advertisement -

NCERT ಬಿಡುಗಡೆ ಮಾಡಿರುವ ಹೊಸ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವಾದ ʼUnderstanding Society India and Beyond-Part 2ʼ ಪುಸ್ತಕದಲ್ಲಿ ಈ ವಿವಾದಾತ್ಮಕ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳ ಬಳಿಕ ಈ ಎರಡನೇ ಭಾಗದ ಪುಸ್ತಕ ಬಿಡುಗಡೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಪಠ್ಯದಲ್ಲಿ ಏನೆಲ್ಲಾ ಇದೆ?

ಪುಸ್ತಕದ “ಪ್ರತಿರೋಧ ಮತ್ತು ಸ್ಥೈರ್ಯ” (Resistance and Resilience) ಎಂಬ ಅಧ್ಯಾಯದಲ್ಲಿ 7ನೇ ಶತಮಾನದಿಂದ ಭಾರತ ಉಪಖಂಡದ ಮೇಲೆ ನಡೆದ ಸರಣಿ ದಾಳಿಗಳು ಹಾಗೂ ಭಾರತೀಯ ಅರಸರ ಪ್ರತಿರೋಧದ ಇತಿಹಾಸವನ್ನು ದಾಖಲಿಸಲಾಗಿದೆ. ಇದರೊಂದಿಗೆ ಯುದ್ಧಕಾಲದಲ್ಲಿನ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

“ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಅವರು ತಾಯಿ ತುಳಜಾ ಭವಾನಿಯಿಂದಲೇ ಸಾಂಪ್ರದಾಯಿಕವಾಗಿ ಕತ್ತಿಯನ್ನು ಪಡೆದಿದ್ದರು ಎಂದು ನಂಬಲಾಗಿದೆ. ಬಸ್ತಾರ್ ರಾಜ ಅನಮರಾಜ ಅವರು ಮಾಣಿಕ್ಯಾ ದೇವಿ (ದಂತೇಶ್ವರಿ)ಯಿಂದ ತಮ್ಮ ಕತ್ತಿಯನ್ನು ಸ್ವೀಕರಿಸಿದ್ದರು ಎಂದು ನಂಬಲಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಕುಮಾರ ಕುಮಾರ ಕಂಫಣ ಅವರು ಮಧುರೆಯಲ್ಲಿ ಸುಲ್ತಾನರ ಸೇನೆಯ ವಿರುದ್ಧ ಹೋರಾಡಲು ದೇವಿಯಿಂದಲೇ ಕತ್ತಿಯನ್ನು ಪಡೆದಿದ್ದರು” ಎಂದು ಪಾಠದಲ್ಲಿ ಉಲ್ಲೇಖಿಸಲಾಗಿದೆ.

7ನೇ ಶತಮಾನದಿಂದಲೂ ಭಾರತೀಯ ಉಪಖಂಡವು ಪ್ರಾದೇಶಿಕ ವಿಸ್ತರಣೆ ಮತ್ತು ಧಮ೯ದ ಹೆಸರಿನಲ್ಲಿ ನಡೆದ ಅರಬ್, ಟರ್ಕಿಶ್, ಮುಘಲ್ ಮತ್ತು ಯುರೋಪಿಯನ್ ದಾಳಿಗಳಿಗೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಅರಸರು ಮತ್ತು ಸಮುದಾಯಗಳು ಹೇಗೆ ಧೈರ್ಯದಿಂದ ಪ್ರತಿರೋಧ ಒಡ್ಡಿದವು ಎಂಬುದನ್ನು ಈ ಪಠ್ಯ ವಿವರಿಸುತ್ತದೆ ಎಂದು NCERT ನಿರ್ದೇಶಕ ದಿನೇಶ್ ಸಕ್ಲಾನಿ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ NCERT ಪಠ್ಯಪುಸ್ತಕಗಳಿಂದ ಕೆಲವು ಅಧ್ಯಾಯಗಳನ್ನು ಕೈಬಿಟ್ಟಿರುವುದು ಅಥವಾ ಪರಿಷ್ಕರಿಸಿರುವುದು ವ್ಯಾಪಕ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಅವುಗಳಲ್ಲಿ, 11 ಮತ್ತು 12ನೇ ತರಗತಿಯ ಇತಿಹಾಸ ಹಾಗೂ ರಾಜಕೀಯ ವಿಜ್ಞಾನ ಪಠ್ಯಗಳಿಂದ ಮೊಘಲ್ ದರ್ಬಾರ್‌ಗಳು ಮತ್ತು ರಾಜರ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಅಧ್ಯಾಯಗಳನ್ನು ಕೈಬಿಡಲಾಗಿತ್ತು ಅಥವಾ ಸಂಕ್ಷೇಪಗೊಳಿಸಲಾಗಿತ್ತು. 2002ರ ಗುಜರಾತ್ ಗಲಭೆಗಳು, ಮಹಾತ್ಮ ಗಾಂಧೀಜಿ ಹತ್ಯೆಯ ನಂತರ ಆರ್‌ಎಸ್‌ಎಸ್‌ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧದ ಬಗ್ಗೆ ಇದ್ದ ಕೆಲವು ಪ್ಯಾರಾಗ್ರಾಫ್‌ಗಳನ್ನು ಪಠ್ಯದಿಂದ ಕೈಬಿಡಲಾಗಿತ್ತು. ಪಠ್ಯಪುಸ್ತಕಗಳಲ್ಲಿ ಮುಘಲ್ ಆಡಳಿತಗಾರರ ಗುಣಗಾನ ಹೆಚ್ಚಾಗಿದೆ ಮತ್ತು ಹಿಂದೂ ಅರಸರ ಇತಿಹಾಸವನ್ನು ಮುಚ್ಚಿಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿತ್ತು. 9 ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯದಿಂದ ಡಾರ್ವಿನ್ ಅವರ ವಿಕಾಸವಾದದ (Evolution) ಸಿದ್ಧಾಂತವನ್ನು ಕೈಬಿಟ್ಟಿರುವುದು ವಿಜ್ಞಾನಿಗಳಿಂದ ಮತ್ತು ಶಿಕ್ಷಣ ತಜ್ಞರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಎಮರ್ಜೆನ್ಸಿ (ತುರ್ತು ಪರಿಸ್ಥಿತಿ) ಅವಧಿಯ ರಾಜಕೀಯ ಬೆಳವಣಿಗೆಗಳು ಮತ್ತು ದಲಿತ ಚಳವಳಿಗಳಿಗೆ ಸಂಬಂಧಿಸಿದ ಕೆಲವು ಪಾಠಗಳನ್ನು ತೆಗೆದುಹಾಕಿರುವುದು ಅಥವಾ ಬದಲಾಯಿಸಿರುವುದು ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು.

ಮುಘಲ್ ಮತ್ತು ಇಸ್ಲಾಮಿಕ್ ಆಡಳಿತಗಾರರ ಇತಿಹಾಸವನ್ನು ಕಡಿಮೆ ಮಾಡಿ, ಹಿಂದೂ ರಾಜರು ಹಾಗೂ ಸ್ಥಳೀಯ ಸಾಮ್ರಾಜ್ಯಗಳ ಧಾರ್ಮಿಕ ಹಿನ್ನೆಲೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂಬ ಟೀಕೆಗಳು ಆಗಾಗ್ಗೆ ಕೇಳಿಬರುತ್ತಿವೆ. ಈ ಹೊಸ ಅಧ್ಯಾಯವು ಕೂಡ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬಿಂಬಿಸುವ ಹಾಗಿದೆ ಎಂದು ಜಾತ್ಯತೀತ ಮತ್ತು ಪ್ರಗತಿಪರ ಚಿಂತಕರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ʼಕೃಷ್ಣʼ ಹೆಸರೇಕೆ? ಪಠ್ಯಪುಸ್ತಕಗಳ ಕೇಸರೀಕರಣ ಆರೋಪಕ್ಕೆ NCERT ಉತ್ತರ

ಇತಿಹಾಸವೆಂದರೆ ಕೇವಲ ನಂಬಿಕೆಗಳು, ಪುರಾಣಗಳು ಅಥವಾ ದಂತಕಥೆಗಳಲ್ಲ, ಅದು ಸಾಕ್ಷ್ಯಾಧಾರಗಳು, ಶಾಸನಗಳು, ಪುರಾತತ್ವ ಆವಿಷ್ಕಾರಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಮೇಲೆ ನಿಂತಿರುತ್ತದೆ. ಛತ್ರಪತಿ ಶಿವಾಜಿ, ಕುಮಾರ ಕಂಫಣ ಅಥವಾ ಬಸ್ತಾರ್ ಅರಸರು ದೇವಿಯಿಂದ ಕತ್ತಿ ಪಡೆದರು ಎನ್ನುವುದು ಧಾರ್ಮಿಕ ನಂಬಿಕೆ ಮತ್ತು ಜನಪದ ಸಂಪ್ರದಾಯಗಳೇ ವಿನಃ ಐತಿಹಾಸಿಕವಾಗಿ ನಿಖರವಾದ ವೈಜ್ಞಾನಿಕ ಸತ್ಯವಲ್ಲ. ಇಂತಹ ನಂಬಿಕೆಗಳನ್ನು ಶಾಲಾ ಮಕ್ಕಳ ಪಠ್ಯದಲ್ಲಿ ಇತಿಹಾಸದ ರೂಪದಲ್ಲಿ ಸೇರಿಸುವುದು ವೈಜ್ಞಾನಿಕ ಮನೋಧರ್ಮಕ್ಕೆ (Scientific Temper) ವಿರುದ್ಧವಾಗಿದೆ ಎಂಬುದು ಶಿಕ್ಷಣ ತಜ್ಞರು ಮತ್ತು ಇತಿಹಾಸಕಾರರ ವಾದ.

ಶಾಲಾ ಹಂತದಲ್ಲಿ ಮಕ್ಕಳಿಗೆ ಇತಿಹಾಸವನ್ನು ಬೋಧಿಸುವಾಗ ಪುರಾಣ ಮತ್ತು ಇತಿಹಾಸದ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದರೆ, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಸತ್ಯಗಳ ಬಗ್ಗೆ ಗೊಂದಲ ಉಂಟಾಗಬಹುದು ಮತ್ತು ವಿಮರ್ಶಾತ್ಮಕವಾಗಿ ಯೋಚಿಸುವ ಬದಲು ಎಲ್ಲವನ್ನೂ ಕೇವಲ ನಂಬಿಕೆಗಳ ಚೌಕಟ್ಟಿನಲ್ಲಿ ನೋಡುವ ಮನೋಭಾವ ಬೆಳೆಯಬಹುದು ಎಂಬ ಆತಂಕ ಶಿಕ್ಷಣ ತಜ್ಞರದ್ದಾಗಿದೆ. ಇತಿಹಾಸವನ್ನು ಯಾರ ದೃಷ್ಟಿಕೋನದಿಂದ ನೋಡಬೇಕು ಎಂಬ ಚರ್ಚೆ ಭಾರತದಲ್ಲಿ ದೀರ್ಘಕಾಲದಿಂದ ಇರುವುದೇನೋ ಹೌದು. ಅದರ ಜತೆಗೆ ಈ ಹೊಸ ಸೇರ್ಪಡೆಯು ಶೈಕ್ಷಣಿಕ ವಲಯದಲ್ಲಿ ಮತ್ತೊಮ್ಮೆ ವೈಜ್ಞಾನಿಕ ಇತಿಹಾಸ, ನಂಬಿಕೆ ಆಧಾರಿತ ಇತಿಹಾಸದ ನಡುವಿನ ಬಿರುಕಿಗೆ ಕಾರಣವಾಗುವ ಎಲ್ಲಾ ಲಕ್ಷಣಗಳೂ ಇವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ ಚುನಾವಣೆ: ಯಾವುದೇ ಪಕ್ಷ ಸೇರದೆ, ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ: ಮಾಜಿ ಐಎಎಸ್ ದಿವ್ಯಾ ಮಿತ್ತಲ್

ಇತ್ತೀಚೆಗೆ, ತಮ್ಮ ಆಡಳಿತಾತ್ಮಕ ಸೇವೆಯ (ಐಎಎಸ್‌) ಹುದ್ದೆಗೆ ರಾಜೀನಾಮೆ ನೀಡಿದ್ದ ಉತ್ತರ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...