ಹಾವೇರಿ | ಹಸಿರು ಕ್ರಾಂತಿಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ನಾಯಕ ಬಾಬೂಜೀ: ಡಿ ಎಸ್ ಮಾಳಗಿ

Date:

  • ಲಿಡ್ಕರ್ ಉಪಾಧ್ಯಕ್ಷ ಡಿ ಎಸ್ ಮಾಳಗಿ ಅವರಿಂದ ಉದ್ಘಾಟನೆ
  • ಡಾ. ಬಾಬು ಜಗಜೀವನ ರಾಮ್ 116ನೇ ಜಯಂತಿ ಆಚರಣೆ

ಹಸಿರು ಕ್ರಾಂತಿಯ ಮೂಲಕ ದೇಶದ ಜನಮಾನಸದಲ್ಲಿ ಅಚ್ಚಳಿಯದೇ ಸಾಧನೆಗೈದು ಉಳಿದ ನಾಯಕ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ ಸ್ಮರಣೆ ಅನನ್ಯವಾಗಿದೆ ಎಂದು ಲಿಡ್ಕರ್ ಉಪಾಧ್ಯಕ್ಷ ಡಿ ಎಸ್ ಮಾಳಗಿ ಹೇಳಿದರು.

ನಗರದ ಅಶೋಕ ಹೊಟೆಲ್‌ನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವತಿಯಿಂದ ಡಾ. ಬಾಬು ಜಗಜೀವನ ರಾಮ್ ಅವರ 116ನೇ ಜಯಂತಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ ಎಸ್‌ ಮಾಳಗಿ, “ಡಾ.ಬಾಬು ಜಗಜೀವನ ರಾಮ್ ಅವರು ದೇಶಕ್ಕಾಗಿ ಹಗಲಿರುಳು ಶ್ರಮವಹಿಸಿ ಎಲ್ಲ ಜನಾಂಗದ ಜನರ ಆಶಾಕಿರಣವಾಗಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿ ದೇಶದ ಜನತೆಗೆ ಹಸಿರು ಕ್ರಾಂತಿ ಮಾಡುವ ಮೂಲಕ ಎಲ್ಲರ ಜನಮಾನಸದಲ್ಲಿ ಉಳಿಸಿದ್ದಾರೆ” ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ಡಾ. ಬಾಬು ಜಗಜೀವನ ರಾಮ್ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ನಮ್ಮ ಸಮಾಜ ಹಾಗೂ ಎಲ್ಲ ಸಮಾಜದವರ ಶ್ರಯೋಭಿವೃದ್ಧಿಗಾಗಿ ನಿರಂತರ ಸೇವೆ ಮಾಡಿದ್ದು, ಅವರ ಜೀವನ ಆದರ್ಶ ಪಾಲನೆ ಮಾಡೋಣ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? : ಮಂಡ್ಯ | ರೌಡಿಶೀಟರ್ ಅಶೋಕ್ ಪೈ ಗಡಿಪಾರು; ಆದೇಶಕ್ಕೆ ಹೈಕೋರ್ಟ್ ತಡೆ

“ತಮ್ಮ ಅನುಭವದಿಂದ ದೇಶದ ಮಹೋನ್ನತ ಗೌರವ ಸ್ಥಾನಮಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅವರ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಅಲೆಮಾರಿ ಜನಾಂಗದ ಅಧ್ಯಕ್ಷ ಶೆಟ್ಟಿ ವಿಭೂತಿ ಮುಖಂಡ ಮಂಜಪ್ಪ ಮರೊಳ, ಮಾರುತಿ ಸೊಟ್ಟಪ್ಪ, ಮಹಾದೇವಪ್ಪ ವಡ್ಡರ, ಚಂದ್ರಪ್ಪ ಹರಿಜನ, ಶ್ರೀಕಾಂತ ಗಡ್ಡಿ, ವಕೀಲ ಹನಮಂತಪ್ಪ ಸೊಟ್ಟಪ್ಪ, ಮಲ್ಲೇಶ ಕಡಕೊಳ, ಶಿವರಾಜ ಹರಿಜನ, ಗುಡ್ಡಪ್ಪ ಬಣಕಾರ, ಸಚಿನ ಮರಿಯಣ್ಣ, ಮಂಜು ಶಿರಗುಪ್ಪಿ, ಮಾಲತೇಶ ಬಣಕಾರ, ಮೈಲಪ್ಪ ಗೊರಕ್ಕ, ಸುರೇಶ ಹಳ್ಳಳ್ಳಿ, ದ್ಯಾಮಣ್ಣ ಶಿಡ್ಲಣ್ಣ ಸೇರಿದಂತೆ ಹಲವರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಭ್ರೂಣ ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ; ಹಲವರ ಕೈವಾಡವಿರುವ ಶಂಕೆ

ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ಆರೋಪಿಗಳು 1,500ಕ್ಕೂ ಅಧಿಕ...

ಬೆಂಗಳೂರು | ನ. 29ರಂದು ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ; ಕನ್ನಡ-ಉರ್ದು ಕವಿಗೋಷ್ಠಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ...

ಗದಗ | ʼಸೊಸೆಗೆ ಸೀರೆ ಉಡಿಸಬೇಕುʼ ವದಂತಿ; ಅಂಗಡಿಗಳಲ್ಲಿ ವ್ಯಾಪಾರ ಜೋರು

ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದ್ರೂ ಮೌಢ್ಯ ಆಚರಣೆಗಳನ್ನ ಮಾತ್ರ ಬಿಟ್ಟಿಲ್ಲ. ಇದಕ್ಕೆ...

ಬೆಳಗಾವಿ | ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ; ಪಿಐಎಲ್‌ ದಾಖಲಿಸುವುದಾಗಿ ಎಚ್ಚರಿಕೆ

"ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಗಳಿಂದ ವಂಚಿತರಾಗಿ ಅತೃಪ್ತರಾಗಿರುವ ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ,...