ಬಾಗಲಕೋಟೆ |6 ಪಟ್ಟಣ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ದಾಳಿ

Date:

ಇ-ಸ್ವತ್ತು, ಎನ್‌ಓಸಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಅಕ್ರಮಗಳ ಆರೋಪ, 41 ಸಿಬ್ಬಂದಿಯಿಂದ ಏಕಕಾಲಕ್ಕೆ ಶೋಧ

- Advertisement -

ಬಾಗಲಕೋಟೆ : ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು ವಿವಿಧ ಆಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರ ದೂರು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡರು. ಪಂಚಾಯಿತಿಗಳಲ್ಲಿ ನಡೆದಿದೆನ್ನಲಾದ ಇ-ಸ್ವತ್ತು, ಎನ್‌ಓಸಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಲೋಕಾಯುಕ್ತರ ನಿರ್ದೇಶನದಂತೆ ಸುಮಾರು 41 ಅಧಿಕಾರಿಗಳ ತಂಡ ಜಿಲ್ಲೆಯ ಶಿರೂರು, ಲೋಕಾಪುರ, ಕೆರೂರು, ಕಮತಗಿ, ಬೀಳಗಿ ಹಾಗೂ ಬೆಳಗಲಿ ಪಟ್ಟಣ ಪಂಚಾಯಿತಿಗಳ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ದಾಖಲೆಗಳು ಮತ್ತು ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಇ-ಸ್ವತ್ತು, ಎನ್‌ಓಸಿ ಹಾಗೂ ಕಟ್ಟ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಅಲ್ಲದೆ, ನಿಯಮ ಉಲ್ಲಂಘಿಸಿ ನಿವೇಶನಗಳನ್ನು ಸೃಷ್ಟಿಸಿ ವಾಣಿಜ್ಯ ಉದ್ದೇಶಕ್ಕಾಗಿ ನಕಲಿ ಹಕ್ಕುಪತ್ರಗಳನ್ನು ನೀಡಿರುವುದು, ಲೇಔಟ್‌ ಅಭಿವೃದ್ದಿಪಡಿಸದಿದ್ದರೂ ನಿಯಮಬಾಹಿರವಾಗಿ ದಾಖಲೆ ಮಾಡಿರುವ ಆರೋಪಗಳು ಕೇಳಿಬಂದಿದ್ದವು.

ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ನಿರ್ವಹಣೆ, ತೆರಿಗೆ ಸಂಗ್ರಹಣೆ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ನಡೆದಿದೆ ಎನ್ನಲಾದ ಕರ್ತವ್ಯಲೋಪದ ವಿಚಾರವಾಗಿ ತನಿಖೆ ನಡೆಯುತ್ತಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಲೋಕಾಯುಕ್ತ ಘಟಕದ ಇಬ್ಬರು ಡಿವೈಎಸ್‌ಪಿ, 9 ಪೊಲೀಸ್‌ ನಿರೀಕ್ಷಕರು, 30 ಸಿಬ್ಬಂದಿಗಳು ಸೇರಿದಂತೆ ಒಟ್ಟು 41 ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

eedina 6
ಈದಿನ NRI ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮಿತಿಮೀರಿದ ಸಂಚಾರ ದಟ್ಟಣೆ ಸಮಸ್ಯೆ ಪೊಲೀಸರೊಂದಿಗೆ ಕೈಜೋಡಿಸದ ಸ್ಥಳೀಯ ಆಡಳಿತ ವ್ಯವಸ್ಥೆ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆ, ವಾಣಿಜ್ಯ...

ಕೆಲಸವಿಲ್ಲ, ಪರಿಹಾರವೂ ಅಷ್ಟಕ್ಕಷ್ಟೇ: ದೆಹಲಿಯ ವಿಷಪೂರಿತ ಗಾಳಿಗೆ ಬೆಲೆ ತೆರುತ್ತಿರುವ ಕಟ್ಟಡ ಕಾರ್ಮಿಕರು!

ಪ್ರತಿ ಚಳಿಗಾಲದಲ್ಲೂ ದೆಹಲಿಯ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪುತ್ತದೆ. ಇದನ್ನು ನಿಯಂತ್ರಿಸಲು...

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್ ಸೀಟು

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ...

ಕೇಜ್ರೀವಾಲ್, ಪುತ್ರಿಗೆ ಜೀವಬೆದರಿಕೆ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ 7 ಕೋಟಿ ರೂ.ಗೆ ಬೇಡಿಕೆ

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ...