ಬಾಗಲಕೋಟೆ | ಬಡ ಜನರ ಏಳಿಗೆಗೆ ಕಾಂಗ್ರೆಸ್ ಬದ್ಧ: ಎಸ್ ಜಿ ನಂಜಯ್ಯನಮಠ

Date:

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನತೆಯ ಏಳಿಗೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನಮಠ ಹೇಳಿದರು.

- Advertisement -

ನಗರದ ಕಿಲ್ಲಾ ಭಾಗದಲ್ಲಿ ಶನಿವಾರ ಪಕ್ಷದ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, “ಸರಳ ಸ್ವಭಾವ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿಯಿಂದ ಎಚ್ ವೈ ಮೇಟಿ ಅವರು ಅಪಾರ ಜನರ ಪ್ರೀತಿ ಗಳಿಸಿದ್ದಾರೆ. ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆಗಬೇಕೆಂಬ ಅವರ ಕನಸು ನನಸಾಗಲಿದೆ. ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಎಲ್ಲರೂ ಬೆಂಬಲಿಸಬೇಕು” ಎಂದು ವಿನಂತಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಮತದಾರರೂ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಕೈ ಬಲಪಡಿಸಬೇಕು” ಎಂದು ಕೋರಿದರು.

ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನೂರಾರು ಯುವಕರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು. ಬೇವೂರ ಗ್ರಾಮದಲ್ಲಿ ಶರೀಫ್ ಅಮರಾವತಿ, ಪರಶುರಾಮ ಐಹೊಳ್ಳಿ, ಸಂಗಪ್ಪ ಬಂಟರ, ಹನಮಂತ ಬೀಳಗಿ, ಫಕೀರಪ್ಪ ಮುಳ್ಳೂರ, ಸಿದ್ದಪ್ಪ ಕಿರಸೂರ, ಕರಿಯಪ್ಪ ಗವಿ, ನೀಲಪ್ಪ ಬಾಲನಾಯಕ, ಪೀರಸಾಬ್ ಕಡ್ಲಿಮಟ್ಟಿ, ಅಬ್ದುಲ್ ನದಾಫ್, ಯಮನೂರಿ ನಾಯ್ಕರ್, ಹಳ್ಳೂರು ಗ್ರಾಮದಲ್ಲಿ ಮುತ್ತಪ್ಪ ಜಿಗಳೂರ, ಮಲ್ಲು ಹೊರಪ್ಯಾಟಿ, ಸಿದ್ದು ಮಾದರ, ಬಸು ಹಡಗಲಿ, ಸಿದ್ದಪ್ಪ ಚಲವಾದಿ, ಶಂಕ್ರಪ್ಪ ಕರರಡ್ಡಿ, ಮಹಿಬೂಬ್ ಕಾಶಿನಕುಂಟಿ, ಬಸು ದಳವಾಯಿ ಇತರರು ಕಾಂಗ್ರೆಸ್ ಸೇರ್ಪಡೆಯಾದರು.

ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಬಿರುಸಿನ ಪ್ರಚಾರ ನಡೆಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸವಾಲು ಸ್ವೀಕರಿಸಿ ಪ್ರದೀಪ್ ಈಶ್ವರ್ ಎಂಟ್ರಿ: ಹುಚ್ಚ… ಹುಚ್ಚ… ಎಂದ ಬಿಜೆಪಿಗರು

ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಮಲ್ಲಿಕಾರ್ಜುನ ಮೇಟಿ, ನಾಗರಾಜ ಹದ್ಲಿ ಮಾತನಾಡಿದರು. ಸಂತೋಷ ಹೊಕ್ರಾಣಿ, ಶಿವಕುಮಾರ ನಂದಿಕೋಲಮಠ, ಅಬ್ದುಲ ರಜಾಕ್ ಬೇನೂರ, ಅಕ್ಬರ್ ಮುಲ್ಲಾ, ಜಾಫರ್ ಬೇಪಾರಿ, ಪ್ರೇಮಾ ಗರಸಂಗಿ, ಇಬ್ರಾಹಿಂ ಕಲಾದಗಿ, ಅಯೂಬಖಾನ್ ಪುಣೇಕರ್, ಹಣಮಂತ ರಾಕುಂಪಿ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ, ಸುಧಾ ಪಾಟೀಲ, ಭರತ ಈಟಿ, ವೀರೇಶ ಹುಂಡೇಕಾರ, ಖಾಜಿಸಾಬ್ ದಂಡೀನ, ಲಕ್ಷ್ಮೀ ಚೌಹಾಣ್, ವಿಜಯ ಕಮತಗಿ, ಕಲ್ಪನಾ ಮೇಟಿ, ಅನ್ನಪೂರ್ಣಾ ಗೂಗುಹಾಳ, ಗುಣವಂತಿ ನಿಡೋಣಿ, ಬಸವರಾಜ ಅಂಬಿಗೇರ, ಮಂಜು ಮುಚಖಂಡಿ, ರಮೇಶ ಪಡಸಲಗಿ, ಪ್ರೇಮಾ ರಾಠೋಡ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...