ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪ್ರಮೋದ್‌ ಮುತಾಲಿಕ್‌ ಜಿಲ್ಲಾ ಪ್ರವೇಶ ನಿಷೇಧಿಸಿ ಆದೇಶಿಸಿದ ಎಸ್‌ಪಿ

Date:

ಬಾಗಲಕೋಟೆಯ ಪಂಖಾ ಮಸೀದಿ ಮುಂಭಾಗ ನಡೆದ ಕಲ್ಲು ತೂರಾಟ ಪ್ರಕರಣ ದ್ವೇಷಪೂರಿತವಲ್ಲ ಎಂದು ಸಾಬೀತಾದರೂ, ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿಯಂತಹ ಪ್ರಖರ ಭಾಷಣಕಾರರ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಎಸ್‌ಪಿ ಸಿದ್ದಾರ್ಥ ಗೋಯಲ್‌ ಅವರು ಭಾಷಣಕಾರರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

- Advertisement -

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಆದೇಶವನ್ನು ವಿರೋಧಿಸಿದ ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು, ಮಸೀದಿಗೆ ಬೀಗ ಹಾಕಬೇಕು, ಎಸ್‌ಪಿ ವರ್ಗಾವಣೆಯಾಗಬೇಕು ಎಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಆ ಸಂಘಟನೆಗಳಿಗೆ ಅಷ್ಟೇ ಖಾರವಾಗಿ ಕಾನೂನಿನ ಮೂಲಕವೇ ತಿರುಗೇಟು ನೀಡಿದ್ದಾರೆ. ಇದು ಕೇಸರಿ ಪಡೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ಘಟನೆಗೆ ಸಂಬಂಧಿಸಿದಂತೆ ಎಸ್‌ಪಿಯವರು ಸುದ್ದಿಗೋಷ್ಟಿ ನಡೆಸಿದ್ದು, “ಯಾವುದೇ ಧಾರ್ಮಿಕ ಕೇಂದ್ರವನ್ನು ಕಾನೂನುಬಾಹಿರವಾಗಿ ಮುಚ್ಚಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ, ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯದ ಪ್ರಾರ್ಥನಾ ಮಂದಿರಕ್ಕೆ ಬೀಗ ಹಾಕುವ ಪ್ರಶ್ನೆಯೇ ಇಲ್ಲ” ಎನ್ನುವ ಮೂಲಕ ಬಿಜೆಪಿ ಪರ/ಬೆಂಬಲಿತ ಸಂಘಟನೆಗಳಿಗೆ ಮನವರಿಕೆ ಮಾಡಿದ್ದಾರೆ.

“ಪೊಲೀಸರು ಏಕಪಕ್ಷೀಯವಾಗಿ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ್ದಾರೆಂಬ ಆರೋಪ ಸಲ್ಲ. ನಿಷೇಧಾಜ್ಞೆ(Section 144/163) ಜಾರಿಯಲ್ಲಿದ್ದಾಗ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸುವುದು ಕಾನೂನು ಉಲ್ಲಂಘನೆ. ಸಮಾಜದ ಸ್ವಾಸ್ಥ್ಯ ಕೆಡಿಸುವವರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರು ಅನಿವಾರ್ಯವಾಗಿ ಬಲಪ್ರಯೋಗ ಮಾಡಿದ್ದಾರೆ” ಎಂದರು.

ನವನಗರದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಬೇಕು ಎಂಬ ಬೇಡಿಕೆಗೂ ಮಣಿಯದ ಎಸ್‌ಪಿ, “ಯಾವುದೇ ಕಟ್ಟಡ ತೆರವು ಮಾಡುವುದು ನಗರಸಭೆಯ ಕೆಲಸ, ಪೊಲೀಸರದ್ದಲ್ಲ. ನಾವು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತೇವೆಯೇ ಹೊರತು ರಾಜಕೀಯ ಪ್ರೇರಿತ ಒತ್ತಡಗಳಿಗೆ ಮಣಿಯುವುದಿಲ್ಲ” ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಧಾರವಾಡ ಕೆಡಿಪಿ ಸಭೆಯಲ್ಲಿ ಸಚಿವ ಲಾಡ್ – ಎಂಎಲ್‌ಸಿ ಜಕ್ಕಪ್ಪನವರ್ ನಡುವೆ ಜಟಾಪಟಿ!

ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಜಾ ಮಾಡಲು ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನೂ ಜಿಲ್ಲಾಡಳಿತ ಕ್ಯಾರೇ ಅಂದಿಲ್ಲ. ಬದಲಾಗಿ, “ಸಾಕ್ಷ್ಯಧಾರಗಳ ಆಧಾರದ ಮೇಲೆ ಬಂಧನಗಳು ನಡೆದಿವೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅವಕಾಶವಿಲ್ಲ” ಎಂದು ಹೇಳುವ ಮೂಲಕ ಸಂಘಟನೆಗಳಿಗೆ ತನಿಖಾ ಹಂತದಲ್ಲೂ ಹಿನ್ನಡೆಯಾಗುವಂತೆ ಮಾಡಿದ್ದಾರೆ.

    ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ಸಂಘಟನೆಗಳ ʼಕೇಸರಿ ಸಂಗ್ರಾಮʼಕ್ಕೆ ಬೆದರದೆ, ಕಾನೂನಿನ ಕಟ್ಟುನಿಟ್ಟಿನ ಪಾಲನೆಯ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಸಂಘಟನೆಗಳು ಅದೆಷ್ಟೇ ಹೋರಾಟದ ಮುನ್ಸೂಚನೆ ನೀಡಿದರೂ, ಜಿಲ್ಲಾಡಳಿತದ ಗಟ್ಟಿಯಾದ ನಿಲುವು ಸದ್ಯಕ್ಕೆ ಅವರಿಗೆ ಯಾವುದೇ ಯಶಸ್ಸು ಸಿಗದಂತೆ ಮಾಡಿದೆ.

    eedina
    ಈ ದಿನ ಡೆಸ್ಕ್‌
    Website |  + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಕೊಲ್ಹಾರದ ಕೆನೆ ಮೊಸರು: ಶತಮಾನದ ಇತಿಹಾಸ, ನೂರಾರು ಕುಟುಂಬಗಳ ಜೀವನಾಧಾರ…

    ಕೊಲ್ಹಾರದ ಕೆನೆ ಮೊಸರು ಹಲವು ಕುಟುಂಬಗಳಿಗೆ ಜೀವನಾಧಾರ. ತಲೆಮಾರುಗಳಿಂದ ಬಂದಿರುವ ಈ...

    ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

    ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

    ಬೀಳಗಿ | ಕಬ್ಬಿಗೆ ರೂ.5,000 ದರ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘದ ಪ್ರತಿಭಟನೆ

    ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ. 5,000 ದರ ನಿಗದಿಪಡಿಸುವುದು ಸೇರಿದಂತೆ...

    ಜಮಖಂಡಿ | ದಲಿತ ಸಾಹಿತ್ಯ ಶೋಷಣೆಯ ವಿರುದ್ಧದ ಧ್ವನಿ: ಪರಶುರಾಮ ಮಹಾರಾಜನವರ

    ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ ಹಾಗೂ ಶೋಷಣೆಯ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ,...