‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

Date:

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ ಪಾತಾಳ ದರ್ಶನ, ಜೊತೆ ಜೊತೆಗೆ ಉದ್ದಕ್ಕೂ ಹರಿಯುವ ನದಿ, ಹಸಿರೇ ಇಲ್ಲದ ಪರ್ವತಗಳು, ಗಿಡ – ಮರ – ಹುಲ್ಲುಗಳೇ ಇಲ್ಲದ, ಆಮ್ಲಜನಕ ಕಡಿಮೆ ಇರುವ ಪ್ರದೇಶದಲ್ಲಿ, ಆ ಪ್ರಕೃತಿಯ ವಿಸ್ಮಯವನ್ನು ಅಚ್ಚರಿಯಿಂದ, ಬೆರಗಾಗಿ, ಮೌನವಾಗಿ ನೊಡುತ್ತಾ ಹೋಗುತ್ತಿದ್ದಾಗ, ನಾವು ಚಿತ್ರೀಕರಣ ಮಾಡಲು ಬಂದ ಸರೋವರದ ಸಮೀಪ ಬಂದಾಗ, ಮೋಬೈಲಿಗೆ ಸಿಗ್ನಲ್ ಸಿಕ್ಕಿ ಒಂದೆರಡು ಸಂದೇಶಗಳು ಬಂದವು ‘ಜಂಬೆ ಸರ್’‌ (ರಂಗಕರ್ಮಿ ಚಿದಂಬರರಾವ್ ಜಂಬೆ) ನಿಧನರಾಗಿದ್ದಾರೆ. ರಂಗಭೂಮಿಯ ಮೇರು ಪರ್ವತದಂತಿದ್ದ ರಂಗ ಗುರುಗಳು ಇನ್ನಿಲ್ಲ ಅನ್ನುವ ಸುದ್ದಿಯಿಂದ ನನ್ನೊಳಗೆ ಗಾಢವಾದ ಮೌನ ಆವರಿಸಿತು…..

- Advertisement -

1988-89 ತಿಪಟೂರಿನಲ್ಲಿದ್ದ ರಂಗ ತಂಡಗಳ ಕಲಾವಿದರೆಲ್ಲ ಒಟ್ಟಾಗಿ ಒಂದು ರಂಗ ತರಬೇತಿ ಶಿಬಿರದ ಮೂಲಕ ಒಂದು ನಾಟಕ ಮಾಡಲು ನಿರ್ಧರಿಸಿದ್ರು. ಆ ನಾಟಕ ನಿರ್ದೇಶಿಸಲು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದವರು ಬಂದಿದ್ದರು. ಅವರು ಹಾಗೂ ನೀನಾಸಂನಲ್ಲಿ ಕಲಿತವರು ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ನೀನಾಸಂನಲ್ಲಿ ಇರುವ ಭಯಂಕರ ಶಿಸ್ತು, ಕಟ್ಟುನಿಟ್ಟಿನ ಕಠಿಣವಾದ ಅಭ್ಯಾಸಗಳು, ಬೆಳ್ಳಿಗೆ 6 ರಿಂದ ರಾತ್ರಿ 9:30ರ ತನಕ ಬೇರೆ ಬೇರೆ ತರಗತಿಗಳು, ತಿಂಡಿ ಮತ್ತು ಊಟಕ್ಕೆ ಮಾತ್ರ ಬಿಡುವು, ಉಳಿದ ಸಮಯದಲ್ಲಿ ವಿದ್ಯಾರ್ಥಿಗಳ ತಯಾರಿ, ಉಸಿರಾಡಲೂ ಸಮಯ ಸಿಗದೆ ಪರಿತಪಿಸುತ್ತಾ ಕಲಿಯುತ್ತಿದ ರೀತಿ. ಹೀಗೆ ಹೇಳ್ತಾ ಹೇಳ್ತಾ ಅದಕ್ಕೆ ಕಾರಣರಾದ, ರಂಗ ಶಾಲೆಯ ಮುಖ್ಯ ಶಕ್ತಿಯಾಗಿದ್ದ, ಪ್ರಾಂಶುಪಾಲರೂ, ಶಿಕ್ಷಕರೂ ಮತ್ತು ನಿರ್ದೇಶಕರೂ ಆಗಿದ್ದವರ ವ್ಯಕ್ತಿತ್ವವನ್ನು ವಿವರಿಸುತ್ತಿದ್ದರು. ಅವರ ಮಾತಿನಿಂದ ಕೇಳಿಬರುತ್ತಿದ್ದ, ಬಹಳ ಮೆಚ್ಚುಗೆಯಿಂದ, ಅವರಿಂದ ಕಲಿತ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ ಗುರುಗಳ ಹೆಸರು ‘ಜಂಬೆ ಸರ್’. ಇದನ್ನೆಲ್ಲಾ ಕೇಳುತ್ತಿದ್ದ ನನಗೆ, ಈ ನೀನಾಸಂ ಮತ್ತು ಈ ಜಂಬೆ ಬಗ್ಗೆ ಆಸಕ್ತಿ ಹುಟ್ಟಿ, ಕುತೂಹಲ ಹೆಚ್ಚಾಗಿ, ನೀನಾಸಂ ಮತ್ತು ಜಂಬೆಯವರನ್ನು ನೋಡಲೆಬೇಕೆಂದು ನಿರ್ಧರಿಸಿದ್ದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ...

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ...

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

1990-91, ಹಿಂದಿನ ರಾತ್ರಿಯೇ ಹೆಗ್ಗೋಡಿಗೆ ತಲುಪಿ, ಮಲಗಿ, ಮಾರನೇ ದಿನ ಬೆಳಗ್ಗ 7 ಗಂಟೆಯ ತರಗತಿಗೆ ಹಾಜರಾಗಿರಬೇಕೆಂದು ಪತ್ರದ ಮೂಲಕ ತಿಳಿಸಿದ್ದರು. ಅದರಂತೆ ಬೆಳಗ್ಗೆ ತರಗತಿ ನಡೆಯುವ ಜಾಗಕ್ಕೆ ಬಂದರೆ…. ಮಲೆನಾಡಿನ ಮಳೆ ಸುರಿಯುತ್ತಿತ್ತು. ಸುತ್ತಲೂ ತಣ್ಣಗೆ, ಗಾಢ ನೀಲಿ ಬಣ್ಣದ ಪರದೆಗಳು, ಮಂದ ಬೆಳಕು, ನಾವೆಲ್ಲ ವಿದ್ಯಾರ್ಥಿಗಳು ಸರ್ಕಲಿನಲ್ಲಿ ಕುಳಿತ್ತಿದ್ದೆವು. ನಮ್ಮೆದುರು ಶಾಲು ಹೊದ್ದು, ಗಂಭಿರ ಮುಖಭಾವದಲ್ಲಿದ್ದ

ಜಂಬೆ ಸರ್….‌ ಧ್ವನಿ ಮತ್ತು ವ್ಯಾಯಾಮದ ಕ್ಲಾಸನ್ನು ತಮ್ಮ ಆಳವಾದ ಧ್ವನಿಯಿಂದ ಶುರು ಮಾಡಿದರು. ಜೊತೆಗೆ ಹಾರ್ಮೋನಿಯಂ ಮತ್ತು ಸಿತಾರ್ ವಾದನದ ಹಿಂದೂಸ್ತಾನಿ ಸಂಗೀತವೂ ತೇಲಿ ಬರುತ್ತಿತು. ನಾವೂ ನಗು ನಗುತ್ತಾ ಇರಲ್ಲಿಲ್ಲ. ಅಲ್ಲಿದ್ದ ಶಿಕ್ಷಕರೂ ನಗು ಮೊಗದಲ್ಲಿ ಇರಲ್ಲಿಲ್ಲ. ಸಿಂಹದ ಗುಹೆಯನ್ನು ಹೊಕ್ಕ ಅನುಭವ ನನ್ನದಾಗಿತ್ತು.

WhatsApp Image 2026 10 24 at 4.39.00 PM

ತರಗತಿ ಮುಗಿಸಿ ಹೊರಬಂದಾಗ, ಉತ್ತರ ಕರ್ನಾಟಕದ ಒಬ್ಬ ವಿದ್ಯಾರ್ಥಿ ರಾತ್ರಿ ಬರದೆ ಬೆಳಗ್ಗ ತಡವಾಗಿ ಬಂದಿದ್ದ, ಆಫೀಸಿನ ಕಟ್ಟೆಯ ಮೇಲೆ ಕುಳಿತ್ತಿದ್ದ. ಜಂಬೆಯವರು ಕ್ಲಾಸಿಗೆ ಸೇರಿಸಲಿಲ್ಲ. ಮಧ್ಯಾಹ್ನದವರೆಗೂ ಕಾದು ಕಾದು ನಿರಾಶನಾಗಿ ವಾಪಾಸು ಊರಿಗೆ ಹೊರಟುಹೋದ. ಒಂದೆರಡು ತಿಂಗಳಲ್ಲಿ, ತರಗತಿಗಳಲ್ಲಿ ಬರೀ ತಮಾಷೆ ಮತ್ತು ಹೇಳಿದ್ದಕ್ಕೆಲ್ಲಾ ಉಡಾಫೆಯಿಂದ ಇರುತ್ತಿದ್ದ ಇನ್ನೊಬ್ಬ ವಿದ್ಯಾರ್ಥಿಯನ್ನೂ ವಾಪಾಸು ಕಳುಹಿಸಬಿಟ್ಟರು. ಇಂಥವರಿಂದ ಉಳಿದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಶಿಸ್ತು, ಕಲಿಯುವ ಆಸಕ್ತಿ, ಕಳೆದುಕೊಂಡು ಬಿಡುತ್ತಾರೆ ಎಂದು ಜಂಬೆಯವಯರು ಈ ರೀತಿ ಮಾಡಿದ್ದರು. ಇದರಿಂದ ಜಂಬೆ ಸರ್‌ಗೆ ಹೆದರಿದ ನಾವು ಭಯಂಕರ ಏಕಾಗ್ರತೆಯಿಂದ ರಂಗಾಧ್ಯಯನದಲ್ಲಿ ತೊಡಗಿಕೊಂಡೆವು.

ನಾಟಕ ಅಂದರೆ ಬರೀ ಮನರಂಜನೆ, ಅದು ಸಮಯ ಕಳೆಯುವ ಜಾಗ, ನಾಟಕದವರು ಅಂದ್ರೆ ತಿರಸ್ಕಾರ, ಒಂದಷ್ಟು ಜನಕ್ಕೆ ತಮಾಷೆ, ಕಲಾವಿದರೆಲ್ಲಾ ಸೊಮಾರಿಗಳು, ಜವಾಬ್ದಾರಿ ಇಲ್ಲದವರು. ನಾಟಕಗಳಲ್ಲಿ ಅಭಿನಯಿಸುವ ನಟಿ – ಹೆಣ್ಣುಮಕ್ಕಳ ಬಗ್ಗೆ ಒಂದು ರೀತಿಯ ತಿರಸ್ಕಾರ… ಈ ರೀತಿಯ ಭಾವನೆಗಳನ್ನು ಹೊಗಲ್ಲಾಡಿಸುವುದು, ರಂಗಭೂಮಿಗೂ, ಅಭಿನಯಕ್ಕೂ ಒಂದು ಸಿದ್ಧಾಂತವಿದ್ದು, ಅದನ್ನು ಅಭ್ಯಸಿಸಿ, ಕಲಾವಿದರೆಲ್ಲರಿಗೂ ಸಮಾಜದಲ್ಲಿ ಗೌರವ ಸಿಗಬೇಕು ಅನ್ನುವುದು ಜಂಬೆಯವರ ಕಠಿಣ ಶಿಸ್ತಿನ ಹಿಂದಿನ ಉದ್ದೇಶ.

ಕಲಾವಿದರೂ, ನಟ ನಟಿಯರೂ ನಿರಂತರವಾಗಿ ಕಲಿಕೆಯಲ್ಲಿ ತೊಡಗಿರಬೇಕು, ಹೆಚ್ಚು ಹೆಚ್ಚು ಶ್ರಮವಹಿಸಬೇಕು – ಬರೀ ಪ್ರತಿಭೆ ಇದ್ದರೆ ಸಾಕಾಗಲ್ಲ… ಇಲ್ಲದೆ ಇದರೂ ಪರವಾಗಿಲ್ಲಾ… ಶ್ರಮ ಜೀವಿಯಾಗಿರಬೇಕು ಅಂತಾ ಬಯಸ್ತಿದ್ರು. ರಂಗ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ದಿನದ 24 ಗಂಟೆಯೂ ಒಂದು ಕಣ್ಣಿಟ್ಟಿದ್ದರು. ನಮ್ಮಿಂದ ತಪ್ಪಾದಾಗ, ನಮ್ಮನ್ನು ಏಕಾಂತದಲ್ಲಿ ಭೇಟಿಯಾಗಿ ಎಚ್ಚರಿಸುತ್ತಿದ್ದರು. ಇಷ್ಟೇಲ್ಲಾ ಕಾಳಜಿಯನ್ನು ವಿದ್ಯಾರ್ಥಿಗಳ ಮೇಲೆ ತೋರಿಸಲೂ ಕಾರಣ, ಸ್ವತಃ ‘ಜಂಬೆ ಸರ್‌’ ಒಬ್ಬ ಶ್ರಮಜೀವಿಯಾಗಿದ್ದರು.   

ತಿಪಟೂರಿನಲ್ಲಿ ನಾಟಕದ ರಿಹರ್ಸಲ್‌ ನಡೆಯುತ್ತಿದ್ದಾಗ ರಂಗ ಗೆಳೆಯರೊಂದಿಗೆ ಸದಾ ಸಿಗರೇಟು ಟೀ ಸೇವನೆ, ರಾತ್ರಿಯಾದರೆ ಯಾರಾದರೊಬ್ಬರ ಗುಂಡು ಪಾರ್ಟಿ, ನಿರ್ದೇಶಕರು ಸೇರಿ ನಾಟಕಗಳ ಕುರಿತು ಚರ್ಚೆ, ಬೆಂಗಳೂರಿನ ಕಲಾಕ್ಷೇತ್ರದ ಕ್ಯಾಂಟೀನಿನ ಸುತ್ತ ಮುತ್ತಾ ಹೊಗೆಯುಗುಳುತ್ತಾ ಇರುತ್ತಿದ್ದ ರಂಗಕರ್ಮಿಗಳು. ಸದಾ ಕೈಯಲ್ಲಿ ಸಿಗರೇಟು ಹಿಡಿದು ನಿರ್ದೇಶಿಸುತ್ತಿದ್ದ ನಿರ್ದೇಶಕರುಗಳನ್ನು ಕಂಡಿದ್ದ ನನಗೆ, ಯಾವ ದುರಭ್ಯಾಸವೂ ಇಲ್ಲದ.. ಶಿಸ್ತಿನ ಸೈನಿಕರತರ ಇದ್ದ ಜಂಬೆಯವರನ್ನು ನೋಡಿ ಆಶ್ಚರ್ಯವಾಗಿತ್ತು. ರಂಗ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು ಜಂಬೆ ಸರ್.‌

‘ಬೇಸ್‌ ವಾಯ್ಸ್ʼ‌ ಇರುವವರ ಬಗ್ಗೆ ಜಂಬೆ ಸರ್‌ಗೆ ಸ್ವಲ್ಪ ಜಾಸ್ತಿ ಪ್ರೀತಿ. ಅವರ ನಾಟಕದ ಮುಖ್ಯ ಪಾತ್ರಧಾರಿಗಳಿಂದ – ಸೆಟಲ್ಡ್ ಬೇಸ್‌ ಬಾಯ್ಸ್‌ ಬಳಸಿ, ವಾಚಿಕಾಭಿನಯ ಮಾಡಸ್ತಾ ಇದ್ರು. ಇವರು ನಿರ್ದೇಶಿಸಿದ ತುಘಲಕ ಮತ್ತು ಕದಡಿದ ನೀರು ನಾಟಕದ ನಟರ ಬೇಸ್ ವಾಯ್ಸ್‌ ಸಂಭಾಷೆಯನ್ನು ನೋಡಿ -ಕೇಳಿ ಬೆರಗಾಗಿದ್ದೆ. ಸತತ ಅಭ್ಯಾಸದ ಬಲದಿಂದ ನನ್ನ ಧ್ವನಿಯಲ್ಲಿಯೂ ಶಕ್ತಿ ತುಂಬಿ ಬದಲಾಗಿತ್ತು. ವಿದ್ಯಾರ್ಥಿಗಳ ಅಭ್ಯಾಸದ ಜನಶತ್ರು ನಾಟಕದಲ್ಲಿ ನನ್ನನಿಂದಲೂ ಈ ಬೇಸ್‌ ವಾಯ್ಸ್‌ ಬಳಸಿ ಮಾತಾಡುವುದನ್ನು ಮಾಡಿಸಿದ್ದರು. ನನ್ನ ಈ ಧ್ವನಿಗೆ ನಾನೇ ಪುಳಕಿತಗೊಂಡಿದೆ.

ರಂಗ ಶಿಕ್ಷಣದ ಕೊನೆಯ ತಿಂಗಳುಗಳಲ್ಲಿ ಸತತ ಅಭ್ಯಾಸ ಮತ್ತು ಒತ್ತಡಗಳಿಂದ ಕುಗ್ಗಿಹೋಗಿ ಮಾನಸಿಕವಾಗಿ ಜರ್ಜರಿತನಾಗಿದ್ದೆ. ನಾನು ಅಭ್ಯಾಸಗಳಿಂದ ಪಡೆದುಕೊಂಡಿದನ್ನು ಕಳೆದುಕೊಂಡೆ ಎಂದು ಆತಂಕದಲ್ಲಿದ್ದೆ. ನನ್ನ ಈ ಸ್ಥಿತಿಯನ್ನು ಗಮನಿಸಿದ ಜಂಬೆ ಸರ್‌. ನನ್ನೊಬ್ಬನನ್ನೆ ಒಂದು ಕೊಠಡಿಯಲ್ಲಿ ಕೂರಿಸಿಕೊಂಡು ಸಮಾಧಾನದ, ಧೈರ್ಯದ ಮಾತುಗಳನ್ನು ಆಡುತ್ತಾ, ನನ್ನ ಉಸಿರಾಟದ ಗತಿಯನ್ನು ಗಮನಿಸುತ್ತಾ – ನನ್ನ ಎದೆಯ ಮೇಲೆ ಕೈಯಿಟ್ಟು ನಿಧಾನವಾಗಿ.. ಆಳವಾಗಿ ಉಸಿರಾಡುವುದನ್ನು ಮಾಡಿಸುತ್ತಾ.. ತಂದೆಯಂತೆ ನನ್ನಲ್ಲಿ ವಿಶ್ವಾಸ ತುಂಬಿದ್ದರು.

WhatsApp Image 2026 10 24 at 4.38.59 PM

ನೀನಾಸಂ ತಿರುಗಾಟಕ್ಕೆ ಬಂದಾಗ – ಜಂಬೆಯವರು ಭಾಸಕವಿಯ ನಾಟಕಗಳನ್ನು ಸೇರಿಸಿ ”ಭಾಸ ಭಾರತ” ನಾಟಕವನ್ನು ನಿರ್ದೇಶಿಸಲು ತಯಾರು ಮಾಡಿಕೊಂಡಿದ್ದರು. ಮೈ ಕೈ ತುಂಬಿಕೊಂಡು, ದಷ್ಟಪುಷ್ಟವಾಗಿರೊ ನಟರಿದ್ದರೂ – ಮುಖ್ಯ ಪಾತ್ರ ದುರ್ಯೊಧನನಾಗಿ – ಸಣಕಲನಾಗಿದ್ದ  ನನ್ನನ್ನು ಆಯ್ಕೆ ಮಾಡಿದ್ದು… ನನಗೂ ಸೇರಿ ಎಲ್ಲರಿಗೂ ಆಶ್ಚರ್ಯ, ಶೈಲೀಕೃತ  ಅಭಿನಯದ ಪ್ರಕಾರದಲ್ಲಿ ನಾಟಕವನ್ನು ಕಟ್ಟುತ್ತಿದ್ದರು. ನಾಟಕದ ಎಲ್ಲಾ ದೃಶ್ಯಗಳ ಸಂಯೋಜನೆ ಮುಗಿಸಿದ್ದರು. ದುರ್ಯೋಧನನು ಚಿತ್ರಪಟವನ್ನು ನೋಡಿ ಅಟ್ಟಹಾಸದಿಂದ ವರ್ಣಿಸುವ ಭಾಗವನ್ನು ಇನ್ನೂ ಮಾಡಿಸಿರಲಿಲ್ಲ. ನನಗೆ ತೋಚಿದಂತೆ ಅದನ್ನು ಅಭಿನಯಿಸುತ್ತಿದ್ದೆ. ಒಂದು ದಿನ ನನ್ನನ್ನು ಬನ್ನಿ ಇಲ್ಲಿ ಎಂದು ರಂಗ ಮಂದಿರದ ಮುಂಭಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ನೆಲದ ಮೇಲೆ ಕೆಲವು ಗುರುತುಗಳನ್ನು ಮಾಡಿ, ರೇಖೆಗಳನ್ನು ಎಳೆದು ಅದರ ಮೇಲೆ ನನ್ನಿಂದ ಚಲನೆಯನ್ನು ಮಾಡಿಸುತ್ತಾ.. ಒಂದೊಂದು ಗುರುತಿನಲ್ಲೂ ಒಂದೊಂದು ಭಂಗಿಯಲ್ಲಿ ಇರುವಂತೆ ಹೇಳುತ್ತಾ… ಸಂಭಾಷಣೆಗೆ ಉದ್ಘಾರಗಳನ್ನು ಸೇರಿಸುತ್ತಾ, ಆ ದೃಶ್ಯದ ಅಭಿನಯಕ್ಕೆ ಬೇಕಾದ ಉತ್ಸಾಹ-ಆವೇಶ, ಶಕ್ತಿಯನ್ನು ನನ್ನಲ್ಲಿ ತುಂಬುತ್ತಾ… ಇದನ್ನು ಅಭ್ಯಾಸ ಮಾಡಿ ಎಂದು ಹೇಳಿ ಹೋದರು. ಜಂಬೆಯವರು ಆ ಪಾತ್ರವನ್ನೆ ಆವಾಹಿಸಿಕೊಂಡು, ಒಂದು ರೀತಿಯ ಆವೇಶದಿಂದ ನಟನೆಯ ಪಟ್ಟುಗಳನ್ನು ಹೇಳಿಕೊಡುತ್ತಿದ್ದರು. ಆ ಕ್ಷಣದಲ್ಲಿದ್ದ.. ಅಂತಹ ಜಂಬೆಯವರನ್ನು ಕಂಡ ನನಗೆ ಅದೊಂದು ವಿಶೇಷವಾದ, ಮರೆಯಲಾಗದ ಘಳಿಗೆಯಾಗಿದೆ.

ಆ ವರ್ಷದ ಸಂಸ್ಕೃತಿ ಶಿಬಿರದಲ್ಲಿ – ನಾಲ್ಕು ನಾಟಕಗಳ ಜೊತೆಗೆ ಭಾಸ ಭಾರತ ನಾಟಕದ ಮೊದಲ ಸಾರ್ವಜನಿಕ ಪ್ರದರ್ಶನ, ಇದಕ್ಕೂ ಒಂದು ತಿಂಗಳು ಮೊದಲು ಇನ್ನೊಂದು ನಾಟಕದ ರಿಹರ್ಸಲನಲ್ಲಿ ಬಲಗಾಲಿನ ಮಂಡಿಗೆ ಏಟು ಮಾಡಿಕೊಂಡು ಆಸ್ಪತ್ರೆಗೆ ಹೋಗಿ – ಅಲ್ಲಿಂದ ಊರಿಗೆ ಹೋಗಿ  ಮನೆಯಲ್ಲಿದ್ದು ಟ್ರೀಟ್ಮೆಂಟ್ ತಗೊಂಡು, ವಾಪಸ್ ಹೆಗ್ಗೋಡಿನ ಶಿಬಿರಕ್ಕೆ ಬಂದಿದ್ದೆ. ಶೈಲೀಕೃತ ಅಭಿನಯವಾಗಿದ್ದರಿಂದ ನನಗೆ ತುಂಬಾ ಕಷ್ಟವಾಗಿತ್ತು. ತುಂಬಾ ನಿರಾಶೆಗೊಂಡಿದ್ದೆ.. ಆದರೆ ಜಂಬೆ ಸರ್‌ ನನ್ನ ಸ್ಥಿತಿಯನ್ನು ಗಮನಿಸಿ. ಅವರ ನಾಟಕಕ್ಕೆ ತೊಂದರೆ ಆಗಿದ್ದಕ್ಕೆ ಬೇಜಾರು ಮಾಡಿಕೊಳ್ಳದೇ, ಕೋಪಮಾಡಿಕೊಳ್ಳದೆ, ನನ್ನನ್ನು ಕರೆದು ಸಮಾಧಾನದಿಂದ, ಮೃದುವಾಗಿ, ತೊಡೆ ಮುರಿದ ದುರ್ಯೊಧನನ ಅಭಿನಯವಿರುವ ಭಾಗದ  ʼಊರುಭಂಗʼದಲ್ಲಿ ನೀವೇ ಮಾಡಿ. ಉಳಿದ ಪಾತ್ರಗಳನ್ನು ಯಕ್ಷಗಾನ ಕಲಾವಿದರೊಬ್ಬರಿಂದ ಮಾಡಿಸುತ್ತೇನೆ. ಮುಂದಿನ ಪ್ರದರ್ಶನಗಳನ್ನು ನಿಮ್ಮ ಆರೋಗ್ಯ ಸುಧಾರಿಸಿದ ಮೇಲೆ ನೀವೇ ಮಾಡಿ ಎಂದರು. ನಟ ನಟಿಯರ ಆರೋಗ್ಯ, ಅವರ ಕನಸು, ಅವರ ಶ್ರಮಗಳಿಗೆ ಜಂಬೆಯವರು ತುಂಬಾ ಬೆಲೆಕೊಡುತ್ತಿದ್ದರು. ಕಲಾವಿದರ ಕಷ್ಟಗಳಿಗೆ ಮರುಗುತ್ತಿದ್ದರು. ನನ್ನ ಆಗಿನ ಸ್ಥಿತಿಯ ಬಗ್ಗೆ ಅಂತಃಕರಣ ತೋರಿದ ಜಂಬೆರಯವರ ಮಾತುಗಳಿಂದ ಖುಷಿಯಾಗಿ ನನ್ನ ಕಣ್ಣುಗಳಲ್ಲಿ ನೀರು ತುಂಬಿತು….

ರಂಗ ಶಿಕ್ಷಣದಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದ ಶೈಲ ಮತ್ತು ನಾನು ಮದುವೆಯಾಗಲು ನಿರ್ಧರಿಸಿದ್ದು… ಆಗ ಜಂಬೆ ಸರ್‌ ಶೈಲನ ಬಳಿ ರಂಗಭೂಮಿಯನ್ನೇ ಕಾಯಕ  ಮಾಡಿಕೊಂಡು ಬದುಕಲು ಹೊರಟಿದ್ದ ನಮ್ಮಿಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಸಂತೊಷದಿಂದ ಆಡಿದ್ದು…   

ನೀನಾಸಂ ಪದವಿ, ನೀನಾಸಂ ತಿರುಗಾಟದ ನಂತರ ತಿಪಟೂರಿನಲ್ಲಿ ನೆಲೆ ನಿಂತ ನಾವು – ನಾನು, ಶೈಲ, ಅಚ್ಯುತ, ನಟರಾಜ ಹೊನ್ನವಳ್ಳಿ ಪ್ರೋಥೀಯು ಸಂಸ್ಥೆಯನ್ನು ಕಟ್ಟಿ ಮೊದಲ ನಾಟಕ ಮಾಡಿದ್ದಾಗ, ಜಂಬೆ ಸರ್‌ ನಮ್ಮ ಬಗ್ಗೆ ತುಂಬಾ ಹೆಮ್ಮೆ ಪಟ್ಟುಕೊಂಡು, ನಮಗೊಂದು ಪತ್ರ ಬರೆದು ತುಂಬುಪ್ರೀತಿಯಿಂದ ಈ ಸಾಲುಗಳನ್ನು ಹೇಳಿದ್ದರು.

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು ಇಳಿಕೆ: ಯಾವೆಲ್ಲ ಔಷಧಿ ಅಗ್ಗ? ಪಡೆಯುವ ವಿಧಾನ ಹೇಗೆ?

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು ಸೇರಿ 11 ಬಂದರುಗಳನ್ನು ಮಾರಲು ಹೊರಟ ಮೋದಿ

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ...