ಕೋಲಾರ | ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಹೋರಾಟ ತೀವ್ರ: ಸುನಂದಾ

Date:

ಐದು ದಶಕಗಳಿಂದಲೂ ಗೌರವಧನದ ಆಧಾರದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರಬೇಕು. ಸರ್ಕಾರ ಈ ಹಿಂದೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸಂಘದ 7ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಜಾರಿಯಾಗಿ 51 ವರ್ಷಗಳು ಕಳೆದಿದ್ದರೂ ಅಂಗನವಾಡಿ ನೌಕರರಿಗೆ ಇಂದಿಗೂ ಕನಿಷ್ಠ ವೇತನ ಹಾಗೂ ಉದ್ಯೋಗ ಭದ್ರತೆ ದೊರೆತಿಲ್ಲ. ಇತ್ತೀಚೆಗೆ ಕನಿಷ್ಠ ವೇತನ ಪಡೆಯಲು ಅರ್ಹರೆಂದು ಗುರುತಿಸಲಾದ ನೌಕರರ ಪಟ್ಟಿಯಿಂದ ಅಂಗನವಾಡಿ ಕಾರ್ಯಕರ್ತರನ್ನು ಕೈಬಿಟ್ಟಿರುವುದು ಸರಿಯಲ್ಲ. ಸರ್ಕಾರದ ಈ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

- Advertisement -

ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₹41 ಸಾವಿರ, ಸಹಾಯಕಿಯರಿಗೆ ₹35 ಸಾವಿರ ಮಾಸಿಕ ವೇತನ ಹಾಗೂ ಕನಿಷ್ಠ ₹18 ಸಾವಿರ ಪಿಂಚಣಿ ನೀಡಬೇಕು. ಸರ್ಕಾರ ಬಜೆಟ್‌ನಲ್ಲಿ ನೀಡಿದ್ದ ₹15 ಸಾವಿರ ಮತ್ತು ₹10 ಸಾವಿರ ಗೌರವಧನದ ಭರವಸೆಯನ್ನೂ ಸಮರ್ಪಕವಾಗಿ ಈಡೇರಿಸಿಲ್ಲ. ನಿಗದಿತ ಮೊತ್ತಕ್ಕಿಂತ ಸುಮಾರು ₹3 ಸಾವಿರ ಕಡಿಮೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ: ಬೇಡ್ತಿ ಹೋರಾಟ ಮತ್ತು ಸಂಸದ-ಶಾಸಕರ ಸೋಗಲಾಡಿತನ

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ,...

ಬಾಗಲಕೋಟೆಗೆ ಬರದ ಛಾಯೆ: ಬರಿದಾದ ಹಿಪ್ಪರಗಿ ಬ್ಯಾರೇಜ್‌, ಕುಡಿವ...

ಒಂದು ಕಾಲದಲ್ಲಿ ಅತಿವೃಷ್ಟಿಯ ಆರ್ಭಟಕ್ಕೆ ತತ್ತರಿಸಿದ್ದ ಬಾಗಲಕೋಟೆ ಜಿಲ್ಲೆ, ಈಗ ಮಳೆಯ ಕೊರತೆಯಿಂದ ಬರದ ಬವಣೆಗೆ ಸಿಲುಕಿದೆ. ಮುಂಗಾರು ಕೈಕೊಟ್ಟಿದೆ, ಹಿಂಗಾರೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಪರಿಣಾಮ ಬೆಳೆ ಒಣಗುವ ಆತಂಕ ಒಂದೆಡೆಯಾದರೆ,...

ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ...

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ, ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಮತದಾರರ ಪಟ್ಟಿಯಲ್ಲಿರುವ ಅಂಕಿಅಂಶಗಳು ಮತ್ತು ದಾಖಲೆಗಳು ಬೇರೆಯದ್ದೇ ಕಥೆ...

ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಸಾಕಷ್ಟು ಹೋರಾಟ ನಡೆಸಲಾಗಿದೆ ಬೇಡಿಕೆಗಳಿಗೆ ಇನ್ನೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ವಿಸ್ತರಿಸಲಾಗುವುದು ಸಂಘಟನೆಯ ಬಲವರ್ಧನೆ ಮತ್ತು ನೌಕರರ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ. ಸರ್ಕಾರದ ಮಟ್ಟದಲ್ಲಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತ ಹೋರಾಟವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು.

ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ರಾಜ್ಯ ಉಪಾಧ್ಯಕ್ಷೆ ಜಿ.ಎಂ. ಲಕ್ಷ್ಮಿದೇವಮ್ಮ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ವಿಜಯಕೃಷ್ಣ ಮಾತನಾಡಿದರು ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ. ಕೃಷ್ಣಪ್ಪ, ಅಂಗನವಾಡಿ ಸಂಘದ ಮುಖಂಡರಾದ ಅಂಜಲಮ್ಮ, ಕಲ್ಪನಾ, ಲೋಕೇಶ್ವರಿ, ಮಂಜುಳ, ಮಮತ, ಪುಷ್ಪ, ಅಂಜಲಿ ಮತ್ತು ವಸಂತ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಭೀಕರ ಅಪಘಾತ: ಬೈಕ್‌ಗೆ ಎರ್ಟಿಗಾ ಡಿಕ್ಕಿ, ಮೂವರ ಸಾವು

ಬೀದರ್‌ ಜಿಲ್ಲೆ ಹುಲಸೂರು ತಾಲ್ಲೂಕಿನ ಮುಚಳಂಬ ಗ್ರಾಮದ ಬಳಿ ಭೀಕರ ರಸ್ತೆ...

ಮಂಗಳೂರು | ಮಣ್ಣಿನ ಸವಕಳಿ ತಡೆಗೆ ನಂದಿನಿ ತೀರದಲಿ ಲಾವಂಚ ನಾಟಿ

ಮಳೆಗಾಲದಲ್ಲಿ ಉಂಟಾಗುವ ತೀವ್ರ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನವಮಂಗಳೂರು ಬಂದರು...

ಪಕ್ಷಾತೀತವಾಗಿ 73ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಯಶಸ್ವಿಗೊಳಿಸಿ: ಸಚಿವ ಎನ್. ಚಲುವರಾಯಸ್ವಾಮಿ ಕರೆ

"ನಾನು ಕ್ರೀಡಾಭಿಮಾನಿಯೇ ಹೊರತು ಕ್ರೀಡಾಪಟುವಲ್ಲ. ಆದರೆ, ನಮ್ಮ ಜಿಲ್ಲೆಯ ಕೀರ್ತಿಗಾಗಿ ಸಹಕಾರ...

ಉತ್ತರ ಕನ್ನಡ | ಜಿ.ಪಂ, ತಾ.ಪಂ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು 12 ತಾಲೂಕುಗಳ ಪಂಚಾಯಿತಿ...