ಬಾಗೇಪಲ್ಲಿ | ಸಿಪಿಎಂ ನಾಯಕ ದಿ. ಜಿ ವಿ ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ

Date:

ರಾಜ್ಯದ ಮೂಲೆಗಳಲ್ಲಿ ನಡೆಯುವ ಕೋಮು ಸಂಘರ್ಷ ಮತ್ತು ಮಡೆಮಡೆ ಸ್ನಾನದ ಹೋರಾಟ ಸೇರಿದಂತೆ ಕೃಷಿ, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಪರ ಬೀದಿಗಿಳಿದು ಹೋರಾಟ ಮಾಡಿದ ಹೋರಾಟಗಾರ’ ಜಿ ವಿ ಶ್ರೀರಾಮರೆಡ್ಡಿ ರಾಜ್ಯದ ಜನರ ಧ್ವನಿಯಾಗಿದ್ದರು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ ಪಿ ಮುನಿವೆಂಕಟಪ್ಪ ಹೇಳಿದರು.

- Advertisement -

ಬಸ್ ನಿಲ್ದಾಣದ ಮುಂಭಾಗದ ಜಿವಿಎಸ್ ಪುತ್ಥಳಿ ಮುಂದೆ ಸಿಪಿಎಂ ತಾಲ್ಲೂಕು ಸಮಿತಿ, ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ ಮತ್ತು ಸಿಐಟಿಯು, ಡಿವೈಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಿಪಿಎಂ ನಾಯಕ ದಿ. ಜಿ ವಿ ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

‘ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೋಮು ಸಂಘರ್ಷಕ್ಕೆ ಬಲಿಯಾದವರ ಪರ, ಕೋಮು ಸಂಘಟನೆಗಳ ವಿರುದ್ಧ, ಮಂಗಳೂರಿನಲ್ಲಿ ಸೌಹಾರ್ದತೆ ರ‍್ಯಾಲಿ, ರಾಜ್ಯದ ಕೃಷಿಕೂಲಿಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರ ಹೋರಾಟ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾದ ನೀರು ಕಲ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಲು ಪಾದಯಾತ್ರೆ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಉಳುವವನಿಗೆ ಭೂಮಿ ಸಿಗಲು, ಕುಡಿಯುವ ನೀರು, ಮನೆ, ನಿವೇಶನ ಸೇರಿದಂತೆ ಅನೇಕ ಹೋರಾಟ ಮಾಡಿದ್ದಾರೆ. ಶ್ರೀರಾಮರೆಡ್ಡಿ ಜನರ ಮಾನಸಲ್ಲಿ ಚಿರಸ್ಥಾಯಿ ಆಗಿದ್ದಾರೆ’ ಎಂದರು.

‘ಶ್ರೀರಾಮರೆಡ್ಡಿ ಹೋರಾಟಗಳ ಹಾದಿ ಮತ್ತು ಸಂಘಟನೆಯನ್ನು ಮುನ್ನೆಡಸಲು ಸಿಪಿಎಂ ತೀರ್ಮಾನಿಸಿದೆ. ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಸಿಪಿಎಂನ ಆಡಳಿತದಿಂದ ಮಾತ್ರ ಸಾಧ್ಯ. ಸಿಪಿಎಂ ಪಕ್ಷವನ್ನು ಜನರು ಬೆಂಬಲಿಸಬೇಕು’ ಎಂದು ಹೇಳಿದರು.

ಸಿಪಿಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ‘ಜಿ.ವಿ.ಶ್ರೀರಾಮರೆಡ್ಡಿ ತಮ್ಮ ಬದುಕಿನ ಉದ್ದಕ್ಕೂ ಸಿಪಿಎಂ ಪಕ್ಷವನ್ನು ಮುನ್ನೆಡೆಸಿದ್ದಾರೆ. ಎಸ್‍ಎಫ್‍ಐ, ಡಿವೈಎಫ್‍ಐ, ರೈತ ಸಂಘಗಳು ಸೇರಿದಂತೆ ಅನೇಕ ಸಾಮೂಹಿಕ ಸಂಘಟನೆಗಳ ಸಂಸ್ಥಾಪಕರಾಗಿದ್ದಾರೆ. ವಿಧಾನಸಭಾ ಕಾರ್ಯಕಲಾಪಗಳಲ್ಲಿ ಮತ್ತು ಹೊರಗಡೆಯಲ್ಲಿ ಸಾಮಾನ್ಯ ಜನರ ಪರ, ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲುವಾಸ ಅನುಭವಿಸಿದ್ದಾರೆ. ಜಿ.ವಿ.ಶ್ರೀರಾಮರೆಡ್ಡಿ ಹೋರಾಟಗಳ ಹಾದಿ, ನುಡಿಗಳನ್ನು ಮುನ್ನೆಡಸಬೇಕಾಗಿದೆ’ ಎಂದರು.

ಇದನ್ನು ಓದಿದ್ದೀರಾ..? ಅಂಬೇಡ್ಕರ್ ಜಯಂತಿಗೆ ಪ್ರತಿ ಗ್ರಾಮದಿಂದ ಪಲ್ಲಕ್ಕಿಗಳಿಗೊಂದಿಗೆ ಭಾಗವಹಿಸಲು ಮನವಿ

ಚನ್ನರಾಯಪ್ಪ ಮತ್ತು ಕಲಾವಿದರು ಕ್ರಾಂತಿಗೀತೆ ಹಾಡಿದರು. ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ಅಧ್ಯಕ್ಷ ದೇವಿಕುಂಟೆ ಶ್ರೀನಿವಾಸ್, ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ, ಎಚ್.ಎ.ರಾಮಲಿಂಗಪ್ಪ, ದಲಿತ ಹಕ್ಕುಗಳ ಸಮಿತಿಯ ಅಶ್ವತ್ಥಪ್ಪ, ಚಂಚುರಾಯನಪಲ್ಲಿ ಕೃಷ್ಣಪ್ಪ, ಟೌನ್‍ಕೃಷ್ಣಪ್ಪ, ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಮುಸ್ತಾಫ, ಡಿವೈಎಫ್‍ಐ ಜಿಲ್ಲಾ ಸಂಚಾಲಕ ಸೋಮಶೇಖರ್, ಎಸ್‍ಎಫ್‍ಐ ಜಿಲ್ಲಾ ಸಂಚಾಲಕ ಎ.ಸೋಮಶೇಖರ್, ರಶೀದ್, ಬಿ.ಎಚ್.ರಫೀಕ್, ರಾಮಾಂಜಿ, ವೆಂಕಟರಾಂ, ಚಂದ್ರಶೇಖರರೆಡ್ಡಿ, ದೇವಿಕುಂಟೆಗಂಗಪ್ಪ ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು

ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರು...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಸಂಪೂರ್ಣ ಬಂದ್ 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ಖಂಡಿಸಿ ಶೃಂಗೇರಿ ಬಂದ್...

ಚಿಕ್ಕಮಗಳೂರು | ಇಒ ಅಧಿಕಾರಿಗೆ ಹಲ್ಲೆ ಆರೋಪ; ಪ್ರತಿ ದೂರು ದಾಖಲು 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಇಒ ಹಾಗೂ ಬ್ಲಾಕ್ ಕಾಂಗ್ರೆಸ್...

ಹಾಸನ | ವಾಟೆಹೊಳೆ ಜಲಾಶಯ: ನಾಲೆಗೆ ನೀರು ಬಿಡುಗಡೆ; ರೈತರಿಗೆ ಸಂತಸ 

ಹಾಸನ ಜಿಲ್ಲೆ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ...