ಯಲ್ಲಾಪುರ | ಚೆಕ್‌ಡ್ಯಾಮ್‌ನಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿ ಮುಳುಗಿ ಸಾವು

Date:

ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೆಕ್‌ಡ್ಯಾಮ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ದಬ್ಬಗುಳಿ ಸಮೀಪ ಭಾನುವಾರ ನಡೆದಿದೆ.

- Advertisement -

ಮೃತರನ್ನು ಯಲ್ಲಾಪುರದ ಶಾರದಾಗಲ್ಲಿಯ ಸುಬ್ರಾಯ ಶ್ರೀನಿವಾಸ ಶೇಟ್ (54) ಎಂದು ಗುರುತಿಸಲಾಗಿದೆ. ಇವರು ಬಂಗಾರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನ.15ರಂದು ಸುಬ್ರಾಯ ಶೇಟ್ ಅವರು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಒಂದು ದಿನದ ಪ್ರವಾಸಕ್ಕಾಗಿ ಅರಬೈಲ್ ಗ್ರಾಮದ ದಬ್ಬಗುಳಿ ಸಮೀಪದ ಹಳ್ಳದ ಚೆಕ್‌ಡ್ಯಾಮ್‌ಗೆ ತೆರಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕರ್ನಾಟಕ ಏಕೀಕರಣಕ್ಕೆ 70 ವರ್ಷ: ಕನ್ನಡ ಅನ್ನದ ಭಾಷೆಯಾಗುವುದೆಂದು?

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ಆದರೆ, ಎಪ್ಪತ್ತು ವರ್ಷಗಳ ಕನ್ನಡ ನಾಡಿನ ನಡೆಯತ್ತ ಒಂದು ನೋಟ ಹರಿಸಿದರೆ ಕಾಣಿಸುವ ಚಿತ್ರವೇ ಬೇರೆಯಾಗಿದೆ. “ಇಷ್ಟು ವರ್ಷವಾದರೂ, ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ....

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಮಧ್ಯಾಹ್ನ ಊಟದ ಬಳಿಕ ಸಂಜೆ ಸುಮಾರು 4.30ರ ವೇಳೆಗೆ ಚೆಕ್‌ಡ್ಯಾಮ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ ಆಳವಾದ ನೀರಿಗೆ ಹೋಗಿ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತರ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಅವರ ಪುತ್ರ ಅಜೀತ್ ಶೇಟ್ ಯಲ್ಲಾಪುರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರಾಜಶೇಖರ ವಂದಲಿ ತನಿಖೆ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಿನ್ನಿಸ್‌ ಸೇರಿದ ʻಮಾಂಡ್ ಸೊಭಾಣ್‌ʼ ಕೊಂಕಣಿ ಸಂಸ್ಕೃತಿಯ ವಿಜಯ: ಡಾ. ರೊನಾಲ್ಡ್ ಕೊಲಾಸೊ

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ 'ಬಹು ಗಾಯಕರ...

ವಿಧಾನ ಪರಿಷತ್ ಸದಸ್ಯರಾಗಿ ರಂಗನಾಥ್, ನಮೋಶಿ, ಸಂಕನೂರ ಮತ್ತು ಸುರೇಶ್ ಪ್ರಮಾಣ ವಚನ ಸ್ವೀಕಾರ

ವಿಧಾನ ಪರಿಷತ್ ಸದಸ್ಯರಾಗಿ ಎ.ಪಿ. ರಂಗನಾಥ್, ಶಶೀಲ್ ಜಿ. ನಮೋಶಿ, ಎಸ್.ವಿ....

ವಿಜಯ್‌ ರೀತಿ ರಾಜಕೀಯಕ್ಕಾಗಿ ಸಿನಿಮಾ ಬಿಡಬೇಡಿ: ಧನುಷ್‌ಗೆ ಸಾಯಿ ಪಲ್ಲವಿ ಕಿವಿಮಾತು

 ‘ರಾಮಾಯಣ’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ನಟಿ ಸಾಯಿ ಪಲ್ಲವಿ ಅವರು ಧನುಷ್...

ಮಳವಳ್ಳಿ | ವಿಷಮುಕ್ತ ಭೂಮಿಗೆ ಸಾವಯವ ಕೃಷಿ ಅನುಸರಿಸಿ: ಕೃಷಿಕರ ಸಂಘ ಮನವಿ

ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಮಳವಳ್ಳಿಯ, ಸಾತೇನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ...