ಕಾಲುವಿ ಬಂದ್ರ ನಮ್ಮ ಬದುಕೇ ಬದಲಾಗ್ತದ್ರಿ : ಹಳ್ಳಿಗಳಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಜೋರಾದ ಚರ್ಚೆ

Date:

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳ ಬಗ್ಗೆ ಈಗ ಹಳ್ಳಿ ಹಳ್ಳಿಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹಲವು ವರ್ಷಗಳಿಂದ ನಿಂತಿದ್ದ ಯೋಜನೆಗಳು ಪೂರ್ಣ ಆಗುತ್ತವೆ ಅನ್ನೋ ಭರವಸೆ ಸಿಕ್ಕಿದ್ರಿಂದ ರೈತರು ಹೊಸ ಉತ್ಸಾಹದಲ್ಲಿ ಕಾಣಿಸುತ್ತಿದ್ದಾರೆ.

- Advertisement -

ಅಶೋಕ ಪಟ್ಟಣ ಅವರು ಎರಡನೇ ಸಾರಿ ಶಾಸಕರಾದಾಗ ಈ ಯೋಜನೆಗಳಿಗೆ ಚಾಲನೆ ನೀಡಿದ್ದರು. ಕಾಮಗಾರಿ ಆರಂಭವಾದ್ರೂ ವರ್ಷ ಕಳೆದರೂ ಯೋಜನೆಗಳು ಮುಗಿಯದೇ ಇದ್ದದ್ದು ರೈತರ ಬೇಸರಕ್ಕೆ ಕಾರಣವಾಗಿತ್ತು. ವಿಶೇಷವಾಗಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆ 9 ವರ್ಷ ಆದ್ರೂ ಪೂರ್ಣ ಆಗದೇ ಇದ್ದಕ್ಕೆ ರೈತರು ಆಕ್ರೋಶಗೊಂಡು ಮೇ 25ರಂದು ಸಾಲಹಳ್ಳಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಶಾಸಕ ಅಶೋಕ ಪಟ್ಟಣ ಅವರು ರೈತರ ಜೊತೆ ಕೂತು ಮಾತನಾಡಿ, ಬಸವೇಶ್ವರ ಏತ ನೀರಾವರಿ ಯೋಜನೆಯನ್ನು 2027ರ ಮಾರ್ಚ್‌ ಒಳಗೆ ಹಾಗೂ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯನ್ನು 2027ರ ಡಿಸೆಂಬರ್ ಒಳಗೆ ಮುಗಿಸುತ್ತೇವೆ ಅಂತ ಭರವಸೆ ನೀಡಿದರು. ಶಾಸಕರ ಈ ಮಾತಿನ ಬಳಿಕ ಈಗ ಗ್ರಾಮೀಣ ಭಾಗದಲ್ಲಿ ನೀರಾವರಿ ಯೋಜನೆಗಳದ್ದೇ ಮಾತಾಗಿದೆ.

ಹಳ್ಳಿಯ ಕಟ್ಟೆ ಮೇಲೆ ಹಿರಿಯರು “ಈ ಸಲ ಆದ್ರೂ ನೀರು ಬರಬೇಕು”, “ನಮ್ಮ ಮಕ್ಕಳು ಊರು ಬಿಟ್ಟು ಹೋಗೋ ಪರಿಸ್ಥಿತಿ ಇರಬಾರದು” ಅಂತ ಮಾತಾಡ್ತಿದ್ದಾರೆ. ಯುವಕರು “ನೀರು ಬಂದ್ಮಲೆ ಡ್ರಿಪ್ ಹಾಕೋಣ, ಹೊಸ ಬೆಳೆ ಹಾಕೋಣ” ಅಂತ ಯೋಜನೆ ಮಾಡ್ತಿದ್ದಾರೆ. ರೈತರು ತಮ್ಮ ಹೊಲದ ಗಡಿ ತೋರಿಸಿಕೊಂಡು “ಕಾಲುವೆ ಇಲ್ಲಿ ಹಾದು ಹೋಗತ್ತಂತೆ”, “ನಮ್ಮ ಜಮೀನಿಗೂ ನೀರು ಸಿಗತ್ತೆ” ಅಂತ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಟೀ ಅಂಗಡಿಗಳಲ್ಲಿ ಕೂಡ ಇದೇ ಚರ್ಚೆ ಕೇಳಿ ಬರುತ್ತಿದೆ. “ಹೋರಾಟ ಮಾಡದಿದ್ರೆ ಯಾರೂ ಕೇಳಿರಲಿಲ್ಲ”, “ಈ ಸಲ ರೈತರು ಒಂದಾಗಿ ನಿಂತದ್ದಕ್ಕೆ ಫಲ ಸಿಕ್ಕಿದೆ” ಅಂತ ಜನ ಮಾತಾಡುತ್ತಿದ್ದಾರೆ. ಕೆಲವರು ಹಳೆಯ ದಿನಗಳನ್ನು ನೆನೆದು “ಮಳೆ ಬರದ ವರ್ಷಗಳಲ್ಲಿ ಎಷ್ಟು ಕಷ್ಟ ಪಟ್ಟಿವಿ” ಅಂತ ಹೇಳ್ತಿದ್ರೆ, ಇನ್ನೂ ಕೆಲವರು “ನೀರಾವರಿ ಬಂದ್ಮಲೆ ನಮ್ಮ ಭಾಗ ಹಸಿರಾಗತ್ತೆ” ಅಂತ ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಹೋರಾಟದಲ್ಲಿ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಶಶಿಕಾಂತ ಗುರೂಜಿಯವರ ಭಾಷಣಗಳು ರೈತರಿಗೆ ಧೈರ್ಯ ತುಂಬಿದವು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶಾಸಕ ಅಶೋಕ ಪಟ್ಟಣ ಅವರ ನಡೆ ಹಾಗೂ ರೈತರ ಜೊತೆ ನಿಂತ ರೀತಿಗೂ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಹಲವು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದ ರೈತರಿಗೆ ಈಗ ನೀರಾವರಿ ಯೋಜನೆಗಳ ಭರವಸೆ ಹೊಸ ಜೀವ ತುಂಬಿದಂತಾಗಿದೆ. ಹಳ್ಳಿಗಳಲ್ಲಿ ಈಗ ನೀರು, ಕಾಲುವೆ, ಬೆಳೆ ಮತ್ತು ಭವಿಷ್ಯದ ಕನಸುಗಳದ್ದೇ ಮಾತು ಕೇಳಿ ಬರುತ್ತಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಕರ್ನಾಟಕ ರಾಜ್ಯೋತ್ಸವ: ಕರಾಳ ದಿನಾಚರಣೆಗೆ ಅವಕಾಶವಿಲ್ಲ

ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿ ಯಲ್ಲಿ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ...

ಬೆಳಗಾವಿ ಜಿಪಂ ಮೀಸಲಾತಿ ಪ್ರಕಟ: ರಾಜಕೀಯ ಚಟುವಟಿಕೆ ಜೋರು

ಬೆಳಗಾವಿ ಜಿಲ್ಲಾ ಪಂಚಾಯಿತಿಯ 90 ಸ್ಥಾನಗಳಿಗೆ ಚುನಾವಣೆ ಸಂಬಂಧ ವರ್ಗ ಹಾಗೂ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...

ಬೆಳಗಾವಿ | ಅಗ್ನಿ ಅವಘಡ: ನಾಲ್ಕು ಮೇವಿನ ಬಣವೆ ಭಸ್ಮ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ...