ಬೆಂಗಳೂರಿನಿಂದ ಧಾರವಾಡವರೆಗೆ ಮಾತ್ರ ಸಂಚರಿಸುತ್ತಿದ್ದ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲಾಗಿದೆ. ವಂದೇ ಭಾರತ್ ರೈಲು ಮಂಗಳವಾರ ಪ್ರಾಯೋಗಿಕವಾಗಿ ಸಂಚಾರ ನಡೆಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿ ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ ಆಗಮಿಸಿದ ರೈಲು, 2 ಗಂಟೆಗೆ ಹೊರಟಿತು. ಈ ರೈಲು ಬೆಳಗಾವಿ ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಬೆಳಗಾವಿ ಭಾಗದ ಜನರು ಸಂತೋಷ ವ್ಯಕ್ತಪಡಿಸಿದರು. ಮೊದಲ ದಿನ ಬೆಳಗಾವಿಗೆ ಆಗಮಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ವೀಕ್ಷಿಸಿದ ರೈಲು ಪ್ರಯಾಣಿಕರು ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಸಮಯ ಮತ್ತು ಪ್ರಯಾಣದ ವೆಚ್ಚದ ಮಾಹಿತಿ ಪಡೆದರು.
ಬೆಳಗಾವಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಅನಿಲಕುಮಾರ್ ಮಾತನಾಡಿ, “ಈ ರೈಲು ಪ್ರಾಯೋಗಿಕವಾಗಿ ಸಂಚರಿಸಿದೆ. ನಿಯಮಿತವಾಗಿ ಸೇವೆ ಆರಂಭಿಸುವ ದಿನಾಂಕ ಘೋಷಣೆಯಾಗಬೇಕಿದೆ. ಹಾಗಾಗಿ ರೈಲಿನ ಸ್ವಾಗತಕ್ಕಾಗಿ ಇಂದು ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕುರಿ ಮೇಯಿಸುತ್ತಿದ್ದ ವೃದ್ಧೆಯ ಕಗ್ಗೊಲೆ; ಆರೋಪಿಗಳ ಪತ್ತೆಗೆ ಶೋಧ
“ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಡಲಿರುವ ರೈಲು(ಸಂಖ್ಯೆ 20661) ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ 2ಕ್ಕೆ ಹೊರಡಲಿರುವ ರೈಲು(ಸಂಖ್ಯೆ 20662) ರಾತ್ರಿ 10.10ಕ್ಕೆ ಬೆಂಗಳೂರು ತಲುಪಲಿದೆ” ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಜೋನಲ್ ಯೂಸರ್ಸ್ ಕನ್ಸಲ್ಟೇಟಿವ್ ಕಮಿಟಿ ಸದಸ್ಯ ಪ್ರಸಾದ್ ಕುಲಕರ್ಣಿ ಉಪಸ್ಥಿತರಿದ್ಧರು.