ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಸರ್ವೇ ನಂಬರ್ 619ಎ/2 ರಲ್ಲಿದ್ದ 6 ಎಕರೆ 87 ಸೆಂಟ್ಸ್ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ₹1,08,50,000 ಕ್ಕೆ ಮಾರಾಟ ಮಾಡಿ ವಂಚಿಸಿದ ಆರೋಪದ ಮೇಲೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಜಮೀನಿನ ಮೂಲ ಮಾಲೀಕರಾದ ಸ್ವಪ್ನ ಪಿ. ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ನಕಲಿ ಮಹಿಳೆಯೊಬ್ಬರನ್ನು ನೋಂದಣಿ ಕಚೇರಿಗೆ ಕರೆತಂದು ವಿಕ್ರಯ ಮಾಡಿಕೊಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬರ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ: ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ
ಈ ಕುರಿತು ಬಳ್ಳಾರಿಯ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ದೇವಪ್ಪ ಅವರು ನೀಡಿದ ದೂರಿನನ್ವಯ ನಕಲಿ ಮಾಲೀಕರಾಗಿ ನಟಿಸಿದ ಸ್ವಪ್ನ, ಜಮೀನು ಖರೀದಿಸಿದ ಲೋಕೇಶ್ ಹಾಗೂ ಸಾಕ್ಷಿದಾರರಾಗಿ ಸಹಿ ಮಾಡಿದ ಗುಂಡೇ ಹುಸೇನ್ ಪೀರ್ ಮತ್ತು ವಿ. ಹನುಮಂತಪ್ಪ ವಿರುದ್ದ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




