ಬೀದರ್‌ | ಮನೆಯೇ ಮಕ್ಕಳ ಸಂಸ್ಕಾರ ಕೇಂದ್ರ : ಡಾ.ಗಂಗಾಬಿಕೆ ಅಕ್ಕ

Date:

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಶಿಕ್ಷಣ ನೀಡುವುದು ತಾಯಂದಿರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಪಾಲಕರು ಆಸ್ತಿ ಅಂತಸ್ತುಗಳಿಗಿಂತ ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರದ ಕಡೆ ಹೆಚ್ಚು ಗಮನ ನೀಡಬೇಕು. ಮನೆಯೇ ಮಕ್ಕಳ ಸಂಸ್ಕಾರ ಕೇಂದ್ರವಾಗಿದೆ ಎಂದು ಹರಳಯ್ಯ ಗವಿಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.

- Advertisement -

ಬಸವಕಲ್ಯಾಣದ ಪರುಷಕಟ್ಟೆಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆದ ಬಸವ ಜಯಂತೋತ್ಸವ ಮಕ್ಕಳಲ್ಲಿ ಜ್ಞಾನ ಬಿತ್ತಣಿಕೆಯ ಶುಭ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ʼಜ್ಞಾನದ ಬಾಗಿಲು ತೆರೆದಾಗ, ಜ್ಞಾನದ ಸಂಪತ್ತು ಒಳಗೆ ಬಂದಾಗ, ಪರಮಾತ್ಮನ ಅನುಗ್ರಹ ನಮ್ಮ ಮೇಲೆ ಆದಾಗ ಭಾಗ್ಯೋದಯ ದಿನವಾಗಿದೆ. ಮಕ್ಕಳಿಗೆ ವಿವಿಧ ಭಾಷೆ ಕಲಿಸುವುದರಿಂದ ಅವರಲ್ಲಿ ಅದ್ಬುತ್ ಜ್ಞಾನ ಬರುತ್ತದೆ. ಜ್ಞಾನದಿಂದ ಸರ್ವರ ಉದ್ಧಾರ, ಲಿಂಗವಂತರಿಗೆ ಅಕ್ಷರ ಬಿತ್ತಣಿಕೆ ಒಂದು ಶಾಸನವಾಗಿದೆʼ ಎಂದರು.

ಬಸವ ಜಯಂತಿಯ ಮಾನವ ಮಂಗಳದ ಅಕ್ಷಯ ತೃತೀಯದಂದು ಆರಂಭಿಸಿ ಅವರಲ್ಲಿ ಪವಿತ್ರ ಅಕ್ಷರಗಳ ಬಿತ್ತಣಿಕೆಯೊಂದಿಗೆ ಜ್ಞಾನದ ಮಹಾದ್ವಾರವನ್ನು ತೆರೆಯುವುದಾಗಿದೆ. ಜ್ಞಾನವೆಂಬ ಭೂಮಿಯಲ್ಲಿ ಬೀಜ ಬಿತ್ತಿ ಮೊಳಕೆಯಾಗಿ ಅಂಕುರಿಸಿ ಮಹಾಜ್ಞಾನ ವೃಕ್ಷವಾಗಿ ಬೆಳೆಯುತಲಿದ್ದಾನೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಅವರನ್ನು ಶ್ರೇಷ್ಠವಾಗಿ ಬೆಳೆಸಿದರೆ ಎಲ್ಲರ ಭವಿಷ್ಯ ಸುರಕ್ಷಿತವಾಗಿ ಸಮಾಜ, ದೇಶ, ಜಗತ್ತು ಶಾಂತಿಮಯವಾಗುತ್ತದೆ. ಇನ್ನು ಸಾಕ್ಷಾತವಾಗುತ್ತಿರುವ ಶರಣ ಸಂತತಿಗೆ ಅಕ್ಷರಾಭ್ಯಾಸ ಪ್ರಸಾದಿಕರನ್ನಾಗಿ ಮಾಡಿರೆಂದು ಶುಭ ಹಾರೈಸಿ, ಪಾಲಕರು ನಮ್ಮ ಮಕ್ಕಳನ್ನು ಜ್ಞಾನಿಗಳಾಗಿ, ಸುಜ್ಞಾನಿಗಳಾಗಿ, ಮಹಾಜ್ಞಾನಿಗಳಾಗಿ ಕರುಣಿಸು ಬಸವ ಎಂದು ಪ್ರಾರ್ಥಿಸಿದರು.

ಮಕ್ಕಳ ಮೇಲೆ ಲಿಂಗೋದಕ ಸಿಂಪಡಿಸಿ ಕೈಗೆ ರುದ್ರಾಕ್ಷಿ ಕಂಕಣ ಕಟ್ಟಿ ಅವರಿಗೆ ಕಿವಿಯಲ್ಲಿ ಮಂತ್ರ ಹೇಳಿ ಪಾಟಿಯ ಮೇಲೆ ಓಂ
ಬಸವ ಎಂದು ಬರೆಯಿಸಿ ಅವರಿಗೆ ಅಕ್ಷರಾಬ್ಯಾಸ ಮಾಡಿಸಿದರು. ಇದಕ್ಕೂ ಮೊದಲು ಶರಣೆಯರಿಂದ ಸಾಮೂಹಿಕವಾಗಿ ಬಸವ ಸ್ತವನ ಸತತಂ ಪಠಣ ನಡೆಯಿತು.

ಈ ಸುದ್ದಿ ಓದಿದ್ದೀರಾ? ಬೀದರ್‌ | ದಲಿತರಿಗೆ ಸೂಕ್ತ ರಕ್ಷಣೆ; ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹೊಣೆ : ಸಚಿವ ಈಶ್ವರ ಖಂಡ್ರೆ

ಶಾಸಕ ಶರಣು ಸಲಗರ, ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪಾ ರಾಯವಾಡೆ, ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಲಿಂಗರಾಜ ಶಾಶೆಟ್ಟಿ, ಸಿದ್ದು ಬಿರಾದಾರ, ಶಿವಕುಮಾರ ಅಗ್ರೆ, ಕೃಷ್ಣ ಗೋಣೆ, ಜಯಶ್ರೀ ಬಿರಾದಾರ ಕವಿತಾ ಮೂಲಗೆ, ಸರಸ್ವತಿ ಬಿರಾದರ, ಗಣಪತಿ ಕಾಸ್ತೆ, ವಿದ್ಯಾವತಿ ಶೇರಿಕಾರ, ಸುಲೋಚನಾ ಗುದಗೆ, ಸವಿತಾ ರಗಟೆ, ಸುಜಾತಾ ತೋಗರಖೇಡೆ, ಸುಮಿತ್ರಾ ದಾವಣಗಾಂವೆ ಸೇರಿದಂತೆ ನೂರಾರು ಮಕ್ಕಳು ಮತ್ತು ಅವರ ಪಾಲಕರು ಭಾಗವಹಿಸಿದರು. ಉದ್ಯಮಿ ಪರಮೇಶ್ವರ ಬಿರಾದಾ ಭಕ್ತಿ ದಾಸೋಹಗೈದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...