ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮ ಪಂಚಾಯತ್ ಬಲ್ಲೂರ(ಜೆ) ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕೊಳವೆ ಬಾವಿ ಹಾಳಾಗಿದ್ದು ಶೀಘ್ರದಲ್ಲಿ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ನೀರಿನ ಟ್ಯಾಂಕರ್ ಇದ್ದರೂ ಅದರ ನೀರು ಕುಡಿಯಲು ಯೋಗ್ಯವಿಲ್ಲ. ಹಾಗಾಗಿ ಗ್ರಾಮಸ್ಥರು ಕೊಳವೆ ಬಾವಿ ನೀರನ್ನೇ ಕುಡಿಯಲು ಬಳಸುತ್ತಾರೆ. ಆದರೆ, ಕಳೆದ ಒಂದು ವಾರದಿಂದ ಕೆಟ್ಟು ಹೋಗಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಈ ಬಗ್ಗೆ ಕೌಠಾ(ಬಿ) ಗ್ರಾಮ ಪಂಚಾಯತ್ ಪಿಡಿಒ ಸೇರಿದಂತೆ ಪಂಚಾಯತ್ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ತಿಳಿಸಿದರೂ ಕೊಳವೆ ಬಾವಿ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಖಾಸಗಿ ಅವರ ಬಳಿ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಕೂಡಲೇ ಕೊಳವೆ ಬಾವಿ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರಾದ ಮಹಾದೇವ ಪಾಟೀಲ್, ಪ್ರಕಾಶ ಚಿಲ್ಲಾಳೆ, ಅಜ್ಮಮೋದ್ದೀನ್ ಪಟೇಲ್ ಜಗನ್ನಾಥ ಚಿಲ್ಲಾಳೆ, ಅನೀಲ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | SIR : ಜು.14ರವರೆಗೆ 14,52,254 ಗಣತಿ ಅರ್ಜಿ ವಿತರಣೆ; 5,20,602 ಅರ್ಜಿ ಸ್ವೀಕೃತ




