ಬಿಡದಿ ಟೌನ್‌ಶಿಪ್ | ರೈತ ಹೋರಾಟದ ನೆಪ; ಡಿಕೆಶಿ ವಿರುದ್ಧ ದೇವೇಗೌಡರ ಒಕ್ಕಲಿಗ ರಾಜಕಾರಣ!

Date:

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಬಲವಂತದ ಭೂಸ್ವಾಧೀನ ಮಾಡುವುದಿಲ್ಲ. ದೇವನಹಳ್ಳಿ ಮಾದರಿಯಲ್ಲಿ, ತಾವಾಗಿಯೇ ಭೂಮಿ ಕೊಡಲು ಮುಂದೆಬರುವ ರೈತರಿಗೆ ಪರಿಹಾರ ನೀಡಿ, ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಯೋಜನೆಯ ಸಾಧಕ-ಬಾಧನಗಳ ಪರಿಶೀಲನೆಗೆ ಸಮಿತಿ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಆದಾಗ್ಯೂ, ಕಳೆದ ಕೆಲವು ದಿನಗಳಿಂದ ಬಿಡದಿ ಟೌನ್‌ಶಿಪ್‌ ವಿಚಾರವು ದೇವೇಗೌಡ ಕುಟುಂಬ ಮತ್ತು ಡಿ.ಕೆ ಶಿವಕುಮಾರ್ ನಡುವಿನ ರಾಜಕೀಯ ತಿಕ್ಕಾಟದ ಕೇಂದ್ರವಾಗಿತ್ತು. ಟೌನ್‌ಶಿಪ್ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಡಿ.ಕೆ ಶಿವಕುಮಾರ್ ವಿರುದ್ಧ ರಾಜಕೀಯ ದಾಳಿ ಆರಂಭಿಸಿದ್ದರು. ಇತ್ತೀಚೆಗೆ ಅವರೊಂದಿಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ ದೇವೇಗೌಡ ಕೂಡ ದನಿಗೂಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

“ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬಾರದು, ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಮೊಕದ್ದಮೆಗಳನ್ನು ಹಿಂಪಡೆಯಬೇಕು, ಸರ್ಕಾರ ಯೋಜನೆಯನ್ನು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಸ್ವತಃ ಸತ್ಯಾಗ್ರಹ ಆರಂಭಿಸುತ್ತೇನೆ” ಎಂದು ದೊಡ್ಡಗೌಡರು ಹೇಳಿದ್ದರು.

ಆದರೆ, ಈ ಇಡೀ ವಿವಾದದಲ್ಲಿ ದೇವೇಗೌಡರ ರಾಜಕೀಯ ದಾಳದ ಮುಖ್ಯ ಗುರಿ ಕಾಂಗ್ರೆಸ್ ಸರ್ಕಾರವಲ್ಲ. ಅವರ ತೀಕ್ಷ್ಣ ಮಾತುಗಳ ಕೇಂದ್ರಬಿಂದುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಂತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರು ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಹೊಗಳಿದ್ದು ಅವರ ರಾಜಕೀಯ ಗುರಿಯನ್ನು ಸ್ಪಷ್ಟವಾಗಿ ಸೂಚಿಸಿತ್ತು.

“ಸಿದ್ದರಾಮಯ್ಯನವರು ಎಂದಿಗೂ ರೈತ ವಿರೋಧಿಯಲ್ಲ ಮತ್ತು ಅವರ ಮೇಲೆ ತಮಗೆ ವಿಶ್ವಾಸವಿದೆ” ಎಂದು ಹೇಳುವ ಮೂಲಕ, ಟೌನ್‌ಶಿಪ್ ಯೋಜನೆಯ ಸಂಪೂರ್ಣ ಹೊಣೆಯನ್ನು ಡಿ.ಕೆ. ಶಿವಕುಮಾರ್ ಅವರ ಹೆಗಲಿಗೆ ಕಟ್ಟಲು ದೇವೇಗೌಡರು ಯತ್ನಿಸಿದರು. ಈ ವಿಶಿಷ್ಟ ನಡೆ ಕೇವಲ ರೈತಪರ ಕಾಳಜಿಯಲ್ಲ, ಬದಲಿಗೆ ಇದರ ಹಿಂದೆ ಹಳೇ ಮೈಸೂರು ಭಾಗದ ಒಕ್ಕಲಿಗ ನಾಯಕತ್ವದ ಮೇಲಿನ ಹಿಡಿತವನ್ನು ಮರಳಿ ಪಡೆಯುವ ದೀರ್ಘಕಾಲದ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಅಭಿವೃದ್ಧಿಯ ಹೆಸರಿನಲ್ಲಿ ತಲೆತಲಾಂತರದಿಂದ ಬಂದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಸ್ಥಳೀಯ ರೈತರ ವಾಸ್ತವ ಆತಂಕ. ಆದ್ದರಿಂದಲೇ, ಈ ಹೋರಾಟಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸೇರಿದಂತೆ ಹಲವು ಹೋರಾಟಗಾರರು ಬೆಂಬಲ ನೀಡಿದ್ದರು. ಆದರೆ, ಈ ವಿಚಾರವನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತನ್ನ ರಾಜಕೀಯಕ್ಕಾಗಿ ಮಾತ್ರವೇ ಬಳಸಿಕೊಂಡವು.

ಇದೇ ಸಮಯದಲ್ಲಿ, ದೇವೇಗೌಡರು ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಡಿಕೆಶಿ ಅವರನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಒಂದು ಕಾಲದಲ್ಲಿ ಜನತಾ ಪರಿವಾರದಲ್ಲಿ ದೇವೇಗೌಡರ ಗರಡಿಯಲ್ಲೇ ಬೆಳೆದು, ನಂತರ ಭಿನ್ನಾಭಿಪ್ರಾಯದಿಂದ ಪಕ್ಷದಿಂದ ಹೊರಬಂದು ಜೆಡಿಎಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದ ಸಿದ್ದರಾಮಯ್ಯ ಅವರನ್ನು ದೇವೇಗೌಡರು ಬದ್ಧವೈರಿಯಂತೆಯೇ ನೋಡಿದ್ದರು. ಆದರೆ, ಈಗ ಅವರನ್ನೇ ಸಮರ್ಥಿಸುತ್ತಿರುವುದು ಕೇವಲ ರಾಜಕೀಯವಷ್ಟೇ ಎಂಬ ಅಭಿಪ್ರಾಯಗಳಿವೆ. ಇದು ಕಾಂಗ್ರೆಸ್‌ನ ಆಂತರಿಕ ಅಧಿಕಾರ ಹಂಚಿಕೆಯ ಭಿನ್ನಾಭಿಪ್ರಾಯಗಳನ್ನು ಕೆಣಕಿ, ಇಬ್ಬರು ಉನ್ನತ ನಾಯಕರ ನಡುವೆ ಅಂತರ ಸೃಷ್ಟಿಸುವ ತಂತ್ರವೂ ಇರಬಹುದು ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿದೆ.

ಮುಖ್ಯವಾಗಿ, ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ವೈರತ್ವಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಸಾತನೂರು ಕ್ಷೇತ್ರದಿಂದ ರಾಜಕೀಯವಾಗಿ ಬೆಳೆದು, ಕನಕಪುರ ಮತ್ತು ರಾಮನಗರ ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಿದ ಡಿಕೆಶಿ, ಹಳೇ ಮೈಸೂರು ಭಾಗದಲ್ಲಿ ದೇವೇಗೌಡರ ಕುಟುಂಬದ ಏಕಸ್ವಾಮ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. 1999ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಪರಾಜಯಕ್ಕೂ ಡಿಕೆ ಶಿವಕುಮಾರ್ ಕಾರಣಕಾಗಿದ್ದರು. ಅಂತೆಯೇ, 2002ರ ಕನಕಪುರ ಉಪಚುನಾವಣೆಯಲ್ಲಿ ಇಬ್ಬರೂ ನೇರ ಮುಖಾಮುಖಿಯಾಗಿದ್ದರು. ಈ ಇತಿಹಾಸ ಇಬ್ಬರ ನಡುವಿನ ತೀವ್ರ ಸಂಘರ್ಷವನ್ನು ಹೆಚ್ಚಿಸಿದೆ. ಅದರಲ್ಲೂ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ, ಹಳೇ ಮೈಸೂರು ಭಾಗದಲ್ಲಿ ದೇವೇಗೌಡರ ಕುಟುಂಬಕ್ಕೆ ಅಭದ್ರತೆ ಸೃಷ್ಟಿಸಿಯಾಗಿದೆ. ಒಕ್ಕಲಿಗರು ಡಿ.ಕೆ ಶಿವಕುಮಾರ್ ಬೆಂಬಲಕ್ಕೆ ವಾಲಿಕೊಂಡರೆ, ತಮಗೆ ರಾಜಕೀಯ ಅಸ್ಥಿತ್ವವೇ ಇರುವುದಿಲ್ಲ ಎಂಬ ಆತಂಕ ಗೌಡರ ಕುಟುಂಬದಲ್ಲಿದೆ.

ಆದ್ದರಿಂದ, ಡಿ.ಕೆ ಶಿವಕುಮಾರ್ ಅವರ ವಿರುದ್ಧ ಒಕ್ಕಲಿಗ ಸಮುದಾಯವನ್ನು ಎತ್ತಿಕಟ್ಟಲು ದೇವೇಗೌಡರ ಕುಟುಂಬ ತವಕಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ದೊರೆತದ್ದೇ, ಬಿಡದಿ ಟೌನ್‌ಶಿಪ್ ವಿವಾದ. ರೈತರ ಅಸಮಾಧಾನವನ್ನು ಬಳಸಿಕೊಂಡು, ಶಿವಕುಮಾರ್ ವಿರುದ್ಧ ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನ ಸ್ಪೋಟಿಸುವಂತೆ ಮಾಡಲು ಎಚ್‌.ಡಿ ಕುಮಾರಸ್ವಾಮಿ ಮುಂದಾದರು. ಅವರೊಂದಿಗೆ ದೇವೇಗೌಡರೂ ದನಿಗೂಡಿಸಿದರು. ಜೆಡಿಎಸ್‌ ಎದರೆ  ‘ಮಣ್ಣಿನ ಮಕ್ಕಳ ಪಕ್ಷ’ ಎಂಬುದನ್ನು ಮತ್ತೆ ಪ್ರಚಲಿತಕ್ಕೆ ತರಲು ಯತ್ನಿಸಿದರು.

ಆದರೆ, ರೈತ ಆಕ್ರೋಶಕ್ಕೆ ಮಣಿದು ಎಚ್ಚೆತ್ತುಕೊಂಡ ಸರ್ಕಾರ ಮತ್ತು ಡಿ.ಕೆ ಶಿವಕುಮಾರ್, ಟೌನ್‌ಶಿಪ್ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಇದು ದೇವೇಗೌಡ ಕುಟುಂಬದ ರಾಜಕೀಯ ಚದುರಂಗದ ಆಟಕ್ಕೂ ಬ್ರೇಕ್ ಹಾಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

2023ರ ಚುನಾವಣೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ...

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್

"ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು...

ಬೀದರ್‌ | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ದಲಿತ ಸಂಘಟನೆಗಳ ಒತ್ತಾಯ: ವಾರದ ಗಡುವು

ಬೀದರ್ ನಗರದ ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್‌ಶಾಪ್‌ಗಳು ಹಾಗೂ ಬಾರ್ ಆ್ಯಂಡ್...

ಕಲಬುರಗಿ | ನೀರಿನ ಸಮಸ್ಯೆ : ಒಡೆದ ಪೈಪ್‌ಲೈನ್ ದುರಸ್ತಿಗೆ ಆಗ್ರಹ

ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಬೋಸಗಾ ಗ್ರಾಮದ...