ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ ಮಟ್ಟಕ್ಕೆ ಏರಿದ ಮೆಕ್ಕೆಜೋಳದ ಧಾರಣೆ

Date:

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ ಬಾರಿ ಉತ್ತಮ ದರ ಕೊಂಚ ನೆಮ್ಮದಿ ತಂದಿದೆ. ಸದ್ಯ ಬಾಗಲಕೋಟೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಗರಿಷ್ಠ ₹3,400 ವರೆಗೆ ಬೆಲೆ ದೊರೆಯುತ್ತಿದ್ದು, ಜಿಲ್ಲೆಯ ವ್ಯಾಪಾರಸ್ಥರು ರೈತರಿಂದ ಖರೀದಿಸಿದ ಜೋಳವನ್ನು ತಮಿಳುನಾಡಿನತ್ತ ಸಾಗಿಸುತ್ತಿದ್ದಾರೆ.

- Advertisement -

ಇಳುವರಿ ಕಡಿಮೆ, ಬೇಡಿಕೆ ಹೆಚ್ಚು; ಬೆಲೆ ಏರಿಕೆಗೆ ಇದೇ ಕಾರಣ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

ಕಳೆದ ವರ್ಷ ಮೆಕ್ಕೆಜೋಳದ ಉತ್ಪಾದನೆ ಹೇರಳವಾಗಿದ್ದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿ ಬೆಲೆ ಕುಸಿದಿತ್ತು. ಪ್ರತಿ ಕ್ವಿಂಟಾಲ್‌ಗೆ ಸುಮಾರು ₹1,950 ಮಾತ್ರ ದೊರೆತಿತ್ತು. ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಿಕೊಳ್ಳಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.ಆದರೆ ಈ ವರ್ಷ ಚಿತ್ರಣವೇ ಬದಲಾಗಿದೆ. ಬಾಗಲಕೋಟೆ ಸೇರಿದಂತೆ ಹಾವೇರಿ, ದಾವಣಗೆರೆ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದರೂ, ಬರದ ಹೊಡೆತಕ್ಕೆ ಒಣಭೂಮಿ ಪ್ರದೇಶಗಳ ಬೆಳೆ ಬಹುತೇಕ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ನೀರಾವರಿ ಸೌಲಭ್ಯ ಹಾಗೂ ಜಲಮೂಲಗಳಿರುವ ಪ್ರದೇಶಗಳಲ್ಲಿ ಮಾತ್ರ ಬೆಳೆ ಸ್ವಲ್ಪಮಟ್ಟಿಗೆ ಕೈಹಿಡಿದಿದೆ.

ಹೀಗಾಗಿ ಮಾರುಕಟ್ಟೆಗೆ ಬರುತ್ತಿರುವ ಮೆಕ್ಕೆಜೋಳದ ಪ್ರಮಾಣ ಕಡಿಮೆಯಾಗಿದೆ. ಮತ್ತೊಂದೆಡೆ ಕೈಗಾರಿಕಾ ವಲಯದಲ್ಲಿ ಬೇಡಿಕೆ ಮುಂದುವರಿದಿರುವುದರಿಂದ ದರ ಏರಿಕೆಯಾಗಿದೆ. ಹಲವು ಮಾರುಕಟ್ಟೆಗಳಲ್ಲಿ ಕ್ವಿಂಟಾಲ್‌ಗೆ ₹3 ಸಾವಿರ ದಾಟಿದ್ದು, ಬಾಗಲಕೋಟೆಯಲ್ಲಿ ₹3,400ರವರೆಗೆ ತಲುಪಿದೆ.

14 ಬಗೆಯ ಉತ್ಪನ್ನಗಳಿಗೆ ಮೆಕ್ಕೆಜೋಳವೇ ಆಧಾರ

ಮೆಕ್ಕೆಜೋಳ ಕೇವಲ ಆಹಾರ ಧಾನ್ಯವಲ್ಲ. ಸ್ಟಾರ್ಚ್, ಪಶು ಆಹಾರ, ಬಿಸ್ಕಿಟ್ ಸೇರಿದಂತೆ ಸುಮಾರು 14 ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಹೀಗಾಗಿ ಆಹಾರ ಸಂಸ್ಕರಣಾ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೆಕ್ಕೆಜೋಳಕ್ಕೆ ನಿರಂತರ ಬೇಡಿಕೆಯಿದೆ.ಈ ಕೈಗಾರಿಕಾ ಬೇಡಿಕೆಯೇ ಉತ್ಪಾದನೆ ಕುಸಿದಿರುವ ಸಂದರ್ಭದಲ್ಲಿ ಮಾರುಕಟ್ಟೆ ದರ ಏರಿಕೆಗೆ ಮತ್ತಷ್ಟು ಬಲ ನೀಡಿದೆ.

ಬಾಗಲಕೋಟೆಯಿಂದ ತಮಿಳುನಾಡಿಗೆ 26 ಸಾವಿರ ಕ್ವಿಂಟಾಲ್ ಜೋಳ!

ಬಾಗಲಕೋಟೆಯ ಸಗಟು ವ್ಯಾಪಾರಸ್ಥರು ಹಲವು ವರ್ಷಗಳಿಂದ ಮೆಕ್ಕೆಜೋಳವನ್ನು ದೇಶದ ವಿವಿಧ ರಾಜ್ಯಗಳಿಗೆ ಮಾತ್ರವಲ್ಲದೆ ವಿದೇಶಗಳಿಗೂ ರವಾನಿಸುತ್ತ ಬಂದಿದ್ದಾರೆ. 2016ರಲ್ಲಿ ಬಾಗಲಕೋಟೆಯಿಂದ ರೈಲಿನ ಮೂಲಕ ಬಾಂಗ್ಲಾದೇಶದ ದರ್ಶನ್ ರೈಲು ನಿಲ್ದಾಣಕ್ಕೆ ಮೆಕ್ಕೆಜೋಳ ಸಾಗಿಸಲಾಗಿತ್ತು. ಈ ಹಿಂದೆ ವಿಯೆಟ್ನಾಂ ಸೇರಿದಂತೆ ಹಲವು ದೇಶಗಳಿಗೂ ರಫ್ತು ಮಾಡಲಾಗಿದೆ.

ಈ ಬಾರಿ ಸ್ಥಳೀಯ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ತಮಿಳುನಾಡಿನ ತಿರುಪುರದಲ್ಲಿರುವ ಪಶು ಆಹಾರ ಉತ್ಪಾದನಾ ಕಾರ್ಖಾನೆಗೆ ಮೆಕ್ಕೆಜೋಳ ಪೂರೈಸುತ್ತಿದ್ದಾರೆ. ಒಂದು ಸರಕು ಸಾಗಣೆ ರೈಲಿನಲ್ಲಿ ಅಂದಾಜು 26 ಸಾವಿರ ಕ್ವಿಂಟಾಲ್ ಜೋಳ ಸಾಗಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಇನ್ನೂ ಮೂರು ಸರಕು ಸಾಗಣೆ ರೈಲುಗಳಲ್ಲಿ ಮೆಕ್ಕೆಜೋಳ ರವಾನೆಯಾಗುವ ಸಾಧ್ಯತೆಯಿದೆ.

ಆದರೆ ಈ ಬಾರಿ ಹೆಚ್ಚಿನ ಬೆಲೆ ಇರುವುದರಿಂದ ವಿದೇಶಗಳಿಗೆ ರಫ್ತು ಮಾಡುವ ಅವಕಾಶ ಸೀಮಿತವಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಮೆಕ್ಕೆಜೋಳ ಮಾತ್ರ ತಮಿಳುನಾಡಿಗೆ ಸಾಗಣೆಯಾಗುತ್ತಿದೆ. ವಿಜಯಪುರ ಜಿಲ್ಲೆಯಿಂದ ಈ ಬಾರಿ ಬಾಗಲಕೋಟೆ ಮಾರುಕಟ್ಟೆಗೆ ಗಮನಾರ್ಹ ಪ್ರಮಾಣದಲ್ಲಿ ಜೋಳದ ಆವಕವಾಗಿಲ್ಲ.

ಡಿಸೆಂಬರ್ ಅಂತ್ಯಕ್ಕೇ ದಾಸ್ತಾನು ಖಾಲಿಯಾಗುವ ಸಾಧ್ಯತೆ!

ಸಾಮಾನ್ಯವಾಗಿ ಮೆಕ್ಕೆಜೋಳದ ಮಾರಾಟ ಮತ್ತು ಆವಕ ಜನವರಿ ತಿಂಗಳವರೆಗೂ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ಉತ್ಪಾದನೆಯೇ ಕಡಿಮೆಯಾಗಿರುವುದರಿಂದ ಡಿಸೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿನ ದಾಸ್ತಾನು ಖಾಲಿಯಾಗುವ ಸಾಧ್ಯತೆಯಿದೆ ಎಂಬುದು ವ್ಯಾಪಾರಸ್ಥರ ಅಂದಾಜು.

ಇನ್ನೊಂದೆಡೆ, ಎಥೆನಾಲ್ ಉತ್ಪಾದನೆಯಲ್ಲಿ ಮೆಕ್ಕೆಜೋಳದ ಬದಲಿಗೆ ಹಳೆಯ ಅಕ್ಕಿಯನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ. ಹೀಗಾಗಿ ಎಥೆನಾಲ್ ತಯಾರಿಕೆಗೆ ಮೆಕ್ಕೆಜೋಳದ ಬಳಕೆ ಸದ್ಯ ಕಡಿಮೆಯಾಗಿದೆ.

ದರ ಏರಿಕೆ ರೈತರಿಗೆ ಲಾಭ; ಆದರೆ ಬರದ ಗಾಯ ಇನ್ನೂ ಮಾಸಿಲ್ಲ!

ಮೆಕ್ಕೆಜೋಳದ ಬೆಲೆ ಏರಿಕೆ ರೈತರಿಗೆ ಆರ್ಥಿಕವಾಗಿ ತುಸು ನೆಮ್ಮದಿ ನೀಡಿರುವುದು ನಿಜ. ಆದರೆ ಹೆಚ್ಚಿನ ಬೆಲೆ ಸಿಗುತ್ತಿದೆ ಎಂಬ ಕಾರಣಕ್ಕೆ ಈ ವರ್ಷದ ಕೃಷಿ ಲಾಭದಾಯಕವಾಗಿದೆ ಎಂದು ಹೇಳಲಾಗದು. ಬರದಿಂದ ಎಕರೆಗೆ ದೊರೆಯಬೇಕಿದ್ದ ಇಳುವರಿಯೇ ಕುಸಿದಿರುವುದರಿಂದ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಉತ್ತಮ ಬೆಲೆ ಸಿಕ್ಕರೂ ಕಡಿಮೆ ಫಸಲಿನ ನಷ್ಟವನ್ನು ಸಂಪೂರ್ಣವಾಗಿ ತುಂಬಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಉಳಿದಿದೆ.

ಒಟ್ಟಿನಲ್ಲಿ, ಕಳೆದ ವರ್ಷ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮೆಕ್ಕೆಜೋಳ ಬೆಳೆಗಾರರಿಗೆ ಈ ಬಾರಿ ಮಾರುಕಟ್ಟೆ ದರ ತುಸು ಆಶಾಕಿರಣ ಮೂಡಿಸಿದೆ. ಆದರೆ ರೈತರ ಬದುಕು ಕೇವಲ ಮಾರುಕಟ್ಟೆ ಬೆಲೆಯ ಮೇಲೆ ಅವಲಂಬಿತವಾಗದೆ, ಉತ್ತಮ ಇಳುವರಿ, ನೀರಾವರಿ ಸೌಲಭ್ಯ ಮತ್ತು ಸ್ಥಿರ ಮಾರುಕಟ್ಟೆ ವ್ಯವಸ್ಥೆಯ ಮೇಲೂ ನಿಂತಿದೆ.

WhatsApp Image 2025 02 05 at 18.09.20 1
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರಿನಲ್ಲಿ ಭವಿಷ್ಯದ ಕನಸು; ಶಾಲೆ ತೊರೆದು ಬರುತ್ತಿದ್ದಾರೆ ಬಂಗಾಳದ ಸುಂದರ್‌ಬನ್‌ ಬಾಲಕರು

ಪಶ್ಚಿಮ ಬಂಗಾಳದ ಜಾಗತಿಕ ಪ್ರಸಿದ್ಧ ಮ್ಯಾಂಗ್ರೋವ್ ಅರಣ್ಯ ಪ್ರದೇಶ ಸುಂದರ್‌ಬನ್‌ನಲ್ಲಿ ಭೀಕರ...

ಚೀನಾದ ಶಂಕಿತ ಗೂಢಚಾರಿಣಿ ಜೊತೆಗಿನ ಸಂಬಂಧ ಒಪ್ಪಿಕೊಂಡ ಟೆಕ್ ದಿಗ್ಗಜ ಸಂಸ್ಥೆ Nvidia ಸಿಇಒ

ಅಮೆರಿಕದ ಗುಪ್ತಚರ ಸಂಸ್ಥೆಗಳಿಂದ ಚೀನಾದ ಗೂಢಚಾರಿಣಿ ಎಂದು ಶಂಕಿಸಲಾಗಿರುವ ಮಹಿಳೆಯೊಬ್ಬಳೊಂದಿಗಿನ ರಹಸ್ಯ...

ರಾಯಚೂರು | ಲಿಂಗಸುಗೂರು ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಅಕ್ರಮ ಸಾಗಾಟ ಜಪ್ತಿ

ತಾಲ್ಲೂಕಿನ ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದು ದೇವದುರ್ಗ ತಾಲ್ಲೂಕಿನ ಊಟಿ...

ಪಟಾಕಿ ಸಿಡಿಸುವುದರಿಂದ ಹಲವು ರೋಗಗಳು ಗುಣಮುಖ: ಬಿಜೆಪಿ ಶಾಸಕಿ ಪಪಿಯಾ ಅಧಿಕಾರಿ

ದೀಪಾವಳಿ ಹಾಗೂ ಕಾಳಿ ಪೂಜೆ ಆಚರಣೆಗಳ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಮನುಷ್ಯನ...