ಬೀದರ್‌ | ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 48,678 ಪ್ರಕರಣಗಳ ಇತ್ಯರ್ಥ, ಒಂದಾದ ಐದು ಜೋಡಿ

Date:

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.19ರಂದು ನಡೆದ ರಾಷ್ಟ್ರೀಯ ಬೃಹತ್ ಲೋಕ ಅದಾಲತ್‌ನಲ್ಲಿ ಬೀದರ್ ಜಿಲ್ಲೆಯಾದ್ಯಂತ ಒಟ್ಟು 48,678 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹27,28,95,403 ಮೊತ್ತವನ್ನು ಪರಿಹಾರವಾಗಿ ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯೆ ತಿಳಿಸಿದರು.

- Advertisement -

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 8,176 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹18,04,42,989 ಮೊತ್ತವನ್ನು ಪರಿಹಾರವಾಗಿ ನೀಡಲಾಗಿದೆ. ಅಲ್ಲದೆ, 40,502 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿ ₹9,24,52,441 ಮೊತ್ತವನ್ನು ಕಕ್ಷಿದಾರರಿಗೆ ಪರಿಹಾರವಾಗಿ ಒದಗಿಸಲಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಮುಂದುವರಿದ ಬಿಸಿಲ ಬೇಗೆ: ಮಳೆ ನಿರೀಕ್ಷೆಯಲ್ಲಿ...

ಮಳೆಗಾಲ ಮುಗಿಯುವ ಹಂತದಲ್ಲಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ವಾತಾವರಣ ಮಾತ್ರ ಬೇಸಿಗೆಯ ಸ್ವರೂಪ ಪಡೆದುಕೊಂಡಿದೆ. ಮಳೆಗಾಗಿ ಎದುರು ನೋಡುತ್ತಿರುವ ರೈತರಿಗೆ ಬಿಸಿಲು ಮತ್ತಷ್ಟು ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ...

‘SIR ಪ್ರಕ್ರಿಯೆ ಕುರಿತು ನಮಗೆ ಏನನ್ನೂ ತಿಳಿಸದೇ ತೀರ್ಮಾನ’:...

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ಗಂಭೀರ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision - SIR /...

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಲೋಕ ಅದಾಲತ್‌ನಲ್ಲಿ 19 ಹಿರಿಯ ನಾಗರಿಕರ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲಾಗಿದೆ. ಜೊತೆಗೆ, ಐದು ವೈವಾಹಿಕ ವ್ಯಾಜ್ಯಗಳನ್ನು ರಾಜಿ-ಸಂಧಾನದ ಮೂಲಕ ಬಗೆಹರಿಸಿ ಐದು ಜೋಡಿಗಳನ್ನು ಮತ್ತೆ ಒಂದಾಗಿಸಲಾಗಿದೆ ಎಂದು ಹೇಳಿದರು.

ಆಗಸ್ಟ್ 1ರಿಂದ ಡಿಸೆಂಬರ್ 30ರವರೆಗೆ ಜಿಲ್ಲೆಯಾದ್ಯಂತ ‘ರಾಷ್ಟ್ರೀಯ ಮಧ್ಯಸ್ಥಿಕೆ 3.0’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಘವೇಂದ್ರ ಉಪಾಧ್ಯೆ ಮನವಿ ಮಾಡಿದರು.

ಗುಡಪಳ್ಳಿಯಲ್ಲಿ 60 ದಿನಗಳ ಕಾನೂನು ಜಾಗೃತಿ ಅಭಿಯಾನ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಔರಾದ ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ 60 ದಿನಗಳ ಬೃಹತ್ ಕಾನೂನು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಈಗಾಗಲೇ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಸೆ.23ರಂದು ಪಿಂಚಣಿ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಕಮಲನಗರ ತಾಲೂಕು ʼಬರʼ ಘೋಷಣೆ : ಸ್ವಾಗತಾರ್ಹ

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳಾದ ಜಗದೀಶ್ವರ ದೊರೆ, ಆಕಾಶ ಸಜ್ಜನ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಟಗುಪ್ಪ | ಸಿಡಿಲಿಗೆ 11 ಕುರಿಗಳು ಬಲಿ

ಸಿಡಿಲು ಬಡಿದು 11 ಕುರಿಗಳು ಸಾವನ್ನಪ್ಪಿರುವ ಘಟನೆ ಚಿಟಗುಪ್ಪ ತಾಲೂಕಿನ ಬೇಮಳಖೇಡ...

ಬೀದರ್‌ | ಸತತ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ: ಎಡಿಸಿ ಸುರೇಖಾ

ಗ್ರಾಮೀಣ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಹಾಗೂ ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ...