ಬೀದರ್‌ | ಅಲ್ಲಮಪ್ರಭು ದೇವರು ವಿಚಾರ ಸಂಕಿರಣ 10ಕ್ಕೆ

Date:

ವಚನಾಮೃತ ಕನ್ನಡ ಸಂಘದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜುಲೈ 10 ರಂದು ಮಹಾನುಭಾವಿ ಅಲ್ಲಮಪ್ರಭು ದೇವರು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಮನವಿ ಮಾಡಿದ್ದಾರೆ.

- Advertisement -

ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ, ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸುವರು ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಪ್ರಮುಖರಾದ ಮಲ್ಲಿಕಾರ್ಜುನ ಹತ್ತಿ, ಹಾವಶೆಟ್ಟಿ ಪಾಟೀಲ, ತರುಣ್ ನಾಗಮಾರಪಳ್ಳಿ, ಜೈರಾಜ್ ಖಂಡ್ರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹುಬ್ಬಳ್ಳಿಯ ಸಾಹಿತಿ ಡಾ.ಶ್ಯಾಮಸುಂದರ ಬೀದರಕುಂದಿ ಆಶಯ ನುಡಿ ಆಡುವರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಪ್ರಾಸ್ತಾವಿಕವಾಗಿ ಮಾತನಾಡುವರು. ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.

ಮಧ್ಯಾಹ್ನ 2ಕ್ಕೆ ನಡೆಯುವ ವಿಚಾರ ಸಂಕಿರಣ 1ರ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕಿ ಡಾ. ಭಾಗೀರಥಿ ಕೊಂಡಾ ವಹಿಸುವರು. ಹರಿಹರ ಹಾಗೂ ʼಚಾಮರಸರ ಕಾವ್ಯಗಳಲ್ಲಿ ಅಲ್ಲಮʼ ಕುರಿತು ಕಲಬುರಗಿಯ ಡಾ. ಶ್ರೀಶೈಲ ನಾಗರಾಳ, ʼಶೂನ್ಯ ಸಂಪಾದನೆಗಳಲ್ಲಿ ಅಲ್ಲಮʼ ಕುರಿತು ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಹಾಗೂ ʼಅಲ್ಲಮಪ್ರಭು ದೇವರ ಆಧ್ಯಾತ್ಮಿಕ ಚಿಂತನೆʼ ಕುರಿತು ಡಾ. ಶಿವಲಿಂಗ ಹೇಡೆ ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.

ಡಾ.ಶರಣಯ್ಯ ಸ್ವಾಮಿ, ಡಾ.ರಾಜಶೇಖರ ಪಾಟೀಲ ಹಾಲಹಳ್ಳಿ, ಪ್ರವೀಣಕುಮಾರ ಭಗಾಲೆ, ರವೀಂದ್ರ ಮಾಸಿಮಾಡೆ, ಮಲ್ಲಿಕಾರ್ಜುನ ಅಲ್ಲಾಪುರೆ, ಅನಿಲಕುಮಾರ ಪಾಟೀಲ, ಗಿರೀಶ್ ಖೇಣಿ, ಕಲ್ಯಾಣರಾವ್ ಚಳಕಾಪುರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 3.30ಕ್ಕೆ ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ 2 ನಡೆಯಲಿದೆ. ಡಾ. ಡಿ.ಆರ್. ನಾಗರಾಜ ಅವರ ಕಣ್ಣೋಟದಲ್ಲಿ ಅಲ್ಲಮ ಪ್ರತಿಭೆ ಕುರಿತು ಡಾ.ವಿಕ್ರಮ ವಿಸಾಜಿ, ʼಅಲ್ಲಮರ ವಚನಗಳಲ್ಲಿ ಅನುಭಾವʼ ಕುರಿತು ಡಾ. ಕಾವ್ಯಶ್ರೀ ಮಹಾಗಾಂವಕರ್ ಹಾಗೂ ʼಕನ್ನಡ ನಾಟಕಗಳಲ್ಲಿ ಅಲ್ಲಮʼ ಕುರಿತು ಬೆಳಗಾವಿಯ ಡಾ. ಡಿ.ಎಸ್. ಚೌಗುಲೆ ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.

ಪ್ರಮುಖರಾದ ವಿಜಯಕುಮಾರ ಸೋನಾರೆ, ಡಾ. ಸಂಗಮೇಶ ವಟಗೆ, ಪ್ರೊ. ಬಿ.ಎಂ. ಬಿರಾದಾರ, ವೀರಶೆಟ್ಟಿ ಬಾವಗೆ, ಕೆ. ಸತ್ಯಮೂರ್ತಿ, ಗುರುಸಿದ್ದಪ್ಪ ಬಿರಾದಾರ, ಅಶೋಕ ಬೋಗಾರ್ ಹಾಗೂ ರಘುನಾಥ ಭೂರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 5ಕ್ಕೆ ಜರುಗುವ ವಿಚಾರ ಸಂಕಿರಣ 3 ರ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ ವಹಿಸುವರು. ಅಲ್ಲಮರ ವಚನಗಳ ನಿರ್ವಚನ ಕುರಿತು ಡಾ. ಜಗದೇವಿ ಮೈನಾಳೆ, ಭಗವಂತಪ್ಪ ಅಣ್ಣೆಪ್ಪನೋರ ಹಾಗೂ ರೇಣುಕಾ ಎನ್.ಬಿ. ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.

ಪ್ರಮುಖರಾದ ಸಿದ್ರಾಮ ಸಪಾಟೆ, ಬಸವರಾಜ ಬೆಳಕುಣೆ, ಸಂಗಮೇಶ ನಾಸಿಗಾರ್, ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಲೋಕೇಶ ಉಡಬಾಳೆ, ಅನುಸೂಯಾ ಕಾಳೆ, ಸುನಿತಾ ದಾಡಗೆ, ಸಿದ್ದಣ್ಣ ಚೌಧರಿ, ಸವಿತಾ ಪಾಟೀಲ ಹಾಗೂ ಜ್ಯೋತಿ ಕಮಠಾಣೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ದಿವ್ಯ ಸಾನಿಧ್ಯ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಭಾರತಿ ವಸ್ತ್ರದ್ ಸಮಾರೋಪ ನುಡಿ ಆಡುವರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೀದರ್‌ | ಮಳೆ ಕೊರತೆ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು, ಬರಪೀಡಿತ ಜಿಲ್ಲೆ ಘೋಷಿಸಲು ಸಿಎಂಗೆ ಮನವಿ

ಪ್ರಮುಖರಾದ ರಾಜಶೇಖರ ಮಂಗಲಗಿ, ಜಯದೇವಿ ಯದಲಾಪುರೆ, ಪಾರ್ವತಿ ಸೋನಾರೆ, ಡಾ. ದೇವಕಿ ನಾಗೂರೆ, ಅಶೋಕ ಬೂದಿಹಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೂಡಾ ನೂತನ ಅಧ್ಯಕ್ಷರಿಗೆ ಶುಭಕೋರಿದ ಸಚಿವ ಮಧು ಬಂಗಾರಪ್ಪ; ಪಕ್ಷ ಸಂಘಟನೆಗೆ ಕರೆ

ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾದ ಸಿ.ಜಿ. ಮಧುಸೂದನ್ ಅವರು...

ಸಿಎಂಆರ್‌ಎಲ್ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ಸೂಚನೆ

ಬಹುಚರ್ಚಿತ ₹1.72 ಕೋಟಿ ಮೊತ್ತದ ಸಿಎಂಆರ್‌ಎಲ್-ಎಕ್ಸಾಲಾಜಿಕ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ...

ದೆಹಲಿ ಮೆಟ್ರೋಗೆ ಪೊಲೀಸ್ ಇಲಾಖೆ ಪತ್ರ: 57 ಸ್ಟೇಷನ್‌ಗಳ ಪ್ರವೇಶ-ನಿರ್ಗಮನ ದ್ವಾರ ಮುಚ್ಚಲು ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...