ಹುಮನಾಬಾದ್-ಬಸವಕಲ್ಯಾಣ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ತಡೋಳಾ ಗ್ರಾಮದ ಹೊರವಲಯದಲ್ಲಿ ಸೋಮವಾರ ಸಂಜೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಿಣಾಮ 15 ಕುರಿಗಳು ಮೃತಪಟ್ಟಿವೆ.
ವಿಜಯಪುರ ಜಿಲ್ಲೆ ಮೂಲದ ಜ್ಯೋತಿಬಾ ಪಾಂಡು ಲೋಖಂಡೆ ಎಂಬುವವರಿಗೆ ಸೇರಿದ ಕುರಿಗಳಾಗಿವೆ. ಕುರಿಗಾಯಿಗಳು ಸುಮಾರು 700 ಕುರಿಗಳನ್ನು ಮೇಯಿಸಲು ಹುಮನಾಬಾದ್ ತಾಲೂಕು ವ್ಯಾಪ್ತಿ ಪ್ರದೇಶದಲ್ಲಿ ಮೇಯಿಸುತ್ತಿದ್ದಾರೆ. ಸೋಮವಾರ ಸಂಜೆ ಕುರಿಗಳನ್ನು ಮೇಯಿಸಿಕೊಂಡು ರಸ್ತೆ ದಾಟುವ ವೇಳೆ ಹುಮನಾಬಾದ್ ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ವೇಳೆ 12 ಕುರಿ, 3 ಕುರಿ ಮರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜ್ಯೋತಿಬಾ ಪಾಂಡು ಲೋಖಂಡೆ ಅವರ ಉಪಜೀವನಕ್ಕೆ ಆಸರೆಯಾಗಿದ್ದ ಕುರಿ ಕಾರು ಡಿಕ್ಕಿಯಾಗಿದ್ದರಿಂದ ಮೃತಪಟ್ಟಿವೆ. ಕೂಗಿಕೊಂಡರೂ ಚಾಲಕ ಕಾರನ್ನು ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಕುರಿಗಳು ಮೃತಪಟ್ಟಿರುವುದರಿಂದ ಸುಮಾರು 3-4 ಲಕ್ಷ ನಷ್ಟವಾಗಿದೆ ಎಂದು ಕುರಿಗಾಯಿ ಜ್ಯೋತಿಬಾ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶಾಸಕರು
ಘಟನಾ ಸ್ಥಳಕ್ಕೆ ಪೊಲೀಸರು, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.




