ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

Date:

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ ಶಿಲ್ಪಿಗಳಾಗಿದ್ದಾರೆ. ನಾವು ಇಂದು ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ಶಾಲೆಯಲ್ಲಿ ಶಿಕ್ಷಣ ನೀಡಿದ ಗುರುಗಳೇ ಪ್ರಮುಖ ಕಾರಣ ಎಂದು ಪತ್ರಕರ್ತ ಹಾಗೂ ಬಿಎಸ್‌ಎಸ್‌ಕೆ ಶಾಲೆಯ ಹಳೆಯ ವಿದ್ಯಾರ್ಥಿ ಗೌರೀಶ ಅಕ್ಕಿ ಹೇಳಿದರು.

- Advertisement -

ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ(ಬಿ ಸಮೀಪದ ಬಿಎಸ್‌ಎಸ್‌ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಚರ್ಮರೋಗ ತಜ್ಞ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಡಾ.ವಿಜಯಕುಮಾರ ಕೋಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಬಿಎಸ್‌ಎಸ್‌ಕೆ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದು, ಇಂದು ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಶಾಲೆಯಲ್ಲಿ ಪಡೆದ ಶಿಕ್ಷಣವೇ ಅಡಿಪಾಯವಾಗಿದೆ” ಎಂದು ಹೇಳಿದರು.

WhatsApp Image 2026 10 29 at 5.53.40 PM 1

ಹಳೆಯ ವಿದ್ಯಾರ್ಥಿಗಳಾದ ವಿನೋದ ಕೋಟೆ, ವೈಜಿನಾಥ ಕಟ್ಟಿಮನಿ, ಅನಿಲ ಕುಡ್ತೆ ಸೇರಿದಂತೆ ಹಲವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

ನಿವೃತ್ತ ಶಿಕ್ಷಕಿಯರಾದ ಹಾಲಮ್ಮ, ಸುಕನ್ಯಾ, ಸುಶೀಲಾಬಾಯಿ, ಲಕ್ಷ್ಮೀಬಾಯಿ ಇಜಾರೆ ಹಾಗೂ ಶಿಕ್ಷಕರಾದ ಮಹದೇವಪ್ಪ ಇಜಾರೆ ಮತ್ತು ಇಬ್ರಾಹಿಂ ಅವರನ್ನು ಹಳೆಯ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಹಾಲಮ್ಮ ಮಾತನಾಡಿ, “ಇಂದಿನ ದಿನಗಳಲ್ಲಿ ಹೆತ್ತ ತಂದೆ-ತಾಯಿಯರನ್ನೇ ಮರೆಯುವ ಮಕ್ಕಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗೌರವಿಸಿರುವ ಹಳೆಯ ವಿದ್ಯಾರ್ಥಿಗಳ ನಡೆ ಸಂತಸ ತಂದಿದೆ. ವಿದ್ಯಾರ್ಥಿಗಳಿಂದ ದೊರೆತ ಈ ಗೌರವ ನಮ್ಮ ಭಾಗ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp Image 2026 10 10 at 7.46.08 PM 28

ಮಹದೇವಪ್ಪ ಇಜಾರೆ ಅವರು ಮಾತನಾಡಿ, “ಮಕ್ಕಳು ಆರೋಗ್ಯವಂತರಾಗಿ ಬದುಕಬೇಕಾದರೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಾತ್ವಿಕ ಆಹಾರ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು: ಎಂದು ಸಲಹೆ ನೀಡಿದರು.

ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿದ್ಯಾರ್ಥಿಗಳ ಕುಟುಂಬದ ಸದಸ್ಯರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ನಿವೃತ್ತ ಮುಖ್ಯಶಿಕ್ಷಕರಾಗಿದ್ದ ದಿವಂಗತ ಶುಭಾಶ ಸಿರಂಜಿ ಅವರ ಪುತ್ರ ಪ್ರವೀಣ ಹಾಗೂ ಅವರ ಕುಟುಂಬದವರನ್ನೂ ಸನ್ಮಾನಿಸಲಾಯಿತು.

WhatsApp Image 2026 10 10 at 6.59.09 PM 9

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಶುಭಾಶ ಗಂಗಾ, ವಿರೇಶ ಪಾಟೀಲ, ಸುನಿಲ್ ಸೊಂಜಿ, ಓಂಕಾರ ಪಾಟೀಲ, ರಾಜೇಶ ಬಸನಾಳೆ, ಅರುಣ್ ಬೊಮ್ಮಶೆಟ್ಟಿ, ಭದ್ರೇಶ, ಸವಿತಾ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕುಟುಂಬದ ಸದಸ್ಯರಾದ ಬಂಡೆಪ್ಪ ಕೋಟೆ, ಸಂಗಪ್ಪ ಹಿಪ್ಪಳಗಾಂವ, ರಾಜು ಪಾಟೀಲ, ಝರ್ನು ಕಾವಳೆ ಮತ್ತಿತರರು ಉಪಸ್ಥಿತರಿದ್ದರು. ಶಿವಗಂಗಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ತ್ರಿವೇಣಿ ಹೊನ್ನ ಸ್ವಾಗತಿಸಿದರು. ಓಂಕಾರ ಉಪ್ಪೆ ವಂದಿಸಿದರು. ಜ್ಯೋತಿ ತೆಗನೂರ್ ನಿರೂಪಿಸಿದರು.

WhatsApp Image 2026 10 29 at 5.53.41 PM

ಇದನ್ನೂ ಓದಿ : ಬಸವಕಲ್ಯಾಣ | ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಶರಣರ ಮಹತ್ವದ ಕೊಡುಗೆ: ಬಸವಲಿಂಗ ಪಟ್ಟದ್ದೇವರು

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ತೀವ್ರ, 500ಕ್ಕೂ ಹೆಚ್ಚು ಮಂದಿ ಬಂಧನ

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ರಾಜ್ಯ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಸ್ತುತ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ...

ಗುಜರಾತ್‌ ಗೋಮಾಂಸ ಪ್ರಕರಣ: ಮನುಸ್ಮೃತಿಯ ಶ್ಲೋಕ ಉಲ್ಲೇಖಿಸಿ ಮೂವರಿಗೆ ಜೀವಾವಧಿ ಶಿಕ್ಷೆ!

ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ಸೆಷನ್ಸ್ ನ್ಯಾಯಾಲಯವು 277 ಕೆ.ಜಿ. ಗೋಮಾಂಸ...

ಕೊಪ್ಪಳ | ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಸಂಸದ ರಾಜಶೇಖರ ಹಿಟ್ನಾಳ

ಬಲ್ಡೋಟಾ ಕಾರ್ಖಾನೆಯನ್ನು ತೊಲಗಿಸುವುದು, ಕಾರ್ಖಾನೆಗಳಿಂದ ಬಾಧಿತವಾಗಿರುವ 22 ಹಳ್ಳಿಗಳ ಜನರ ಜೀವ...